ಬೆಂಗಳೂರಲ್ಲಿ ಬಿಹಾರಿ ವಲಸೆ ಕಾರ್ಮಿಕರ ದಾಂಧಲೆ
ಮೈಸೂರು

ಬೆಂಗಳೂರಲ್ಲಿ ಬಿಹಾರಿ ವಲಸೆ ಕಾರ್ಮಿಕರ ದಾಂಧಲೆ

May 5, 2020

ಬೆಂಗಳೂರು, ಮೇ 4- ಕೂಲಿ ಕೆಲಸ ಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ಬಿಹಾ ರದ ವಲಸೆ ಕಾರ್ಮಿಕರು ಸೋಮವಾರ ಸಂಜೆ ತಮ್ಮ ತಮ್ಮ ಊರುಗಳಿಗೆ ಕಳು ಹಿಸಬೇಕೆಂದು ಆಗ್ರಹಿಸಿ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಮಾದಾವರ ಬಳಿ ಪುಂಡಾಟ ನಡೆಸಿ, ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ.

ಬೆಂಗಳೂರಿನ ವಿವಿಧೆಡೆಯಿಂದ ಬಂದು ಇಂದು ಸಂಜೆ ಮಾದಾವರ ಬಳಿ ಜಮಾ ಯಿಸಿದ ಸಾವಿರಾರು ಬಿಹಾರಿ ವಲಸೆ ಕಾರ್ಮಿ ಕರು ತಮ್ಮನ್ನು ವಿಶೇಷ ರೈಲು ಮೂಲಕ ತಮ್ಮ ತಮ್ಮ ಊರುಗಳಿಗೆ ಕಳುಹಿಸಿಕೊಡ ಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ 4 ಅನ್ನು ತಡೆದು ಪ್ರತಿಭಟನೆ ಆರಂಭಿಸಿ ದರು. ಈ ವೇಳೆ ಕಾರ್ಮಿಕರನ್ನು ಸಮಾ ಧಾನಪಡಿಸಲು ಬಂದ ಪೀಣ್ಯ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಪರಿ ಣಾಮ ಸಬ್‍ಇನ್ಸ್‍ಪೆಕ್ಟರ್ ಮುದ್ದುರಾಜ್ ಗಾಯಗೊಂಡರು. ನಂತರ ಹೆಚ್ಚಿನ ಪೊಲೀ ಸರು ದೌಡಾಯಿಸಿ ಎಲ್ಲಾ ಕಾರ್ಮಿಕರನ್ನು ರಾಷ್ಟ್ರೀಯ ಹೆದ್ದಾರಿಯಿಂದ ತೆರವುಗೊಳಿಸಿ ಬಿಐಇಎಲ್ ಮೈದಾನಕ್ಕೆ ಕಳುಹಿಸಿದರು.

ಮೈದಾನದಲ್ಲೂ ಬಿಹಾರಿ ವಲಸೆ ಕಾರ್ಮಿ ಕರ ದಾಂಧಲೆ ಮುಂದುವರೆದಿತ್ತು. ಇವರ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳುವುದು ಎಂಬ ದಿಕ್ಕು ತೋಚದೆ ಪೊಲೀಸರು ತಮ್ಮ ಹಿರಿಯ ಅಧಿಕಾರಿಗಳಿಗೆ ಮಾಹಿತಿ ರವಾ ನಿಸಿ ಮೂಕಪ್ರೇಕ್ಷಕರಾಗಿ ನಿಲ್ಲಬೇಕಾ ಯಿತು. ಕಾರ್ಮಿಕರ ಪ್ರತಿಭಟನೆ ವಿಷಯ ತಿಳಿಯುತ್ತಿದ್ದಂತೆಯೇ ಕಂದಾಯ ಸಚಿವ ಆರ್.ಅಶೋಕ್ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಸ್ಥಳಕ್ಕಾ ಗಮಿಸಿದಾಗ ಬಿಹಾರಿ ಕಾರ್ಮಿಕರ ಆರ್ಭಟ ಸ್ವಲ್ಪ ಜೋರಾಗಿತ್ತು. ಉದ್ರಿಕ್ತ ಬಿಹಾರಿ ವಲಸೆ ಕಾರ್ಮಿಕರನ್ನು ಸಮಾಧಾನಪಡಿಸಿದ ಸಚಿವ ಆರ್.ಅಶೋಕ್ ಮತ್ತು ಪೊಲೀಸ್ ಆಯು ಕ್ತರು, ನಿಮ್ಮನ್ನು ನಾವು ಕಳುಹಿಸಿಕೊಡಲು ಸಿದ್ದವಾಗಿದ್ದೇವೆ. ಆದರೆ ಬಿಹಾರ ಸರ್ಕಾರ ಒಪ್ಪುತ್ತಿಲ್ಲ. ಆದ್ದರಿಂದ ಬಿಹಾರ ಮುಖ್ಯ ಮಂತ್ರಿಗಳ ಒಪ್ಪಿಗೆ ಸಿಕ್ಕಿದ ತಕ್ಷಣ ವಿಶೇಷ ರೈಲು ಮೂಲಕ ನಿಮ್ಮ ಊರುಗಳಿಗೆ ಕಳುಹಿಸಿ ಕೊಡುತ್ತೇವೆ. ಅಲ್ಲಿಯವರೆಗೆ ನಿಮಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದ ನಂತರ ಬಿಹಾರಿ ಕಾರ್ಮಿಕರು ಸಚಿವರಿಗೆ 2 ದಿನಗಳ ಗಡುವು ನೀಡಿ ತಮ್ಮ ಪ್ರತಿಭಟನೆ ಹಿಂಪಡೆದರು. ರಾತ್ರಿ 10.30ರ ಸುಮಾರಿನಲ್ಲಿ ಬಿಎಂಟಿಸಿ ಬಸ್‍ಗಳ ಮೂಲಕ ಬಿಹಾರಿ ಕಾರ್ಮಿಕರು ಬೆಂಗಳೂರು ನಗರದಲ್ಲಿ ಎಲ್ಲೆಲ್ಲಿ ಕೆಲಸ ಮಾಡುತ್ತಿದ್ದರೋ ಅಲ್ಲಿಗೆ ಕರೆದೊಯ್ದು ಬಿಡಲಾಯಿತು. ಈ ಸಂದರ್ಭದಲ್ಲಿ ಸುದ್ದಿ ಗಾರರ ಜೊತೆ ಮಾತನಾಡಿದ ಸಚಿವ ಅಶೋಕ್, ಈ ಕಾರ್ಮಿಕರನ್ನು ಕೆಲಸ ಇಟ್ಟುಕೊಂಡಿ ರುವ ನಿರ್ಮಾಣ ಸಂಸ್ಥೆಗಳು ಕಾರ್ಮಿಕರ ಜವಾಬ್ದಾರಿ ವಹಿಸಿಕೊಳ್ಳಬೇಕಾಗಿದೆ ಎಂದರ ಲ್ಲದೇ, ಹಲವಾರು ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಹೋಗಬೇಕೆಂದು ಪಟ್ಟು ಹಿಡಿದಿರುವುದರಿಂದ ನಾಳೆ ಸಿಎಂ ಯಡಿ ಯೂರಪ್ಪನವರ ಜೊತೆ ಚರ್ಚಿಸಿ ಕಾರ್ಮಿಕ ರನ್ನು ಕಳುಹಿಸಿಕೊಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

Translate »