ಕೊರೊನಾ ವೈರಸ್ ವುಹಾನ್‍ನಿಂದ ಬಂದಿದೆ ಎನ್ನಲು ನಮ್ಮ ಬಳಿ ಸಾಕ್ಷ್ಯವಿದೆ: ಅಮೆರಿಕಾ
ಮೈಸೂರು

ಕೊರೊನಾ ವೈರಸ್ ವುಹಾನ್‍ನಿಂದ ಬಂದಿದೆ ಎನ್ನಲು ನಮ್ಮ ಬಳಿ ಸಾಕ್ಷ್ಯವಿದೆ: ಅಮೆರಿಕಾ

May 5, 2020

ವಾಷಿಂಗ್ಟನ್,ಮೇ 4- ಕೊರೊನಾ ವೈರಸ್ ಉಗಮ ಸ್ಥಾನ ವುಹಾನ್ ವನ್ಯ ಜೀವಿ ಮಾಂಸ ಮಾರುಕಟ್ಟೆಯಲ್ಲ, ಅದೇ ವುಹಾನ್‍ನ ವೈರಾಣು ಲ್ಯಾಬ್ ಎಂದು ಹೇಳಲು ನಮ್ಮ ಬಳಿ ಸಾಕ್ಷ್ಯ ವಿದೆ ಎಂದು ಅಮೆರಿಕಾ ಹೇಳಿದೆ.

ಈ ಹಿಂದೆ ಇದೇ ಮಾತನ್ನು ಟ್ರಂಪ್ ಅವರು ಹೇಳಿದ್ದು, ಈ ವಾದ ವನ್ನು ಇದೀಗ ಅಮೆರಿಕಾ ಕಾರ್ಯ ದರ್ಶಿ ಮೈಕ್ ಪಾಂಪಿಯೋ ಬೆಂಬ ಲಿಸಿದ್ದಾರೆ. ಅಮೆರಿಕಾದ ಸುದ್ದಿ ವಾಹಿನಿ ನಡೆಸಿದ್ದ ದಿನ್ ವೀಸ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಪಾಂಪಿಯೋ ಅವರು, ಕೊರೊನಾ ಚೀನಾದ ವುಹಾನ್ ಪ್ರಯೋಗಾಲಯ ದಿಂದ ಬಂದಿದೆ ಎಂದು ಹೇಳಲು ನಮ್ಮ ಬಳಿ ಸಾಕಷ್ಟು ಸಾಕ್ಷ್ಯಗಳಿವೆ. ಆದರೆ, ವೈರಸ್ಸನ್ನು ಜೈವಿಕವಾಗಿ ಮಾರ್ಪಾಡು ಮಾಡಿರುವ ಬಗ್ಗೆ ಸಾಕ್ಷ್ಯಗಳಿಲ್ಲ ಎಂದು ಹೇಳಿದ್ದಾರೆ.

ಕೊರೊನಾ ವೈರಸ್‍ನಿಂದ ಸೋಂಕು ಗೊಳಗಾಗಿದ್ದ ಪ್ರಾಣಿಯೊಂದನ್ನು ಪ್ರಯೋಗಾಲಯದಲ್ಲಿ ನಾಶ ಮಾಡ ಲಾಗಿದೆ. ಆ ವೇಳೆ ಆಕಸ್ಮಿಕವಾಗಿ ಅಲ್ಲಿದ್ದ ಹಲವರು ಸೋಂಕಿಗೆ ತುತ್ತಾಗಿ ದ್ದಾರೆಂದು ವರದಿಗಳು ಹೇಳುತ್ತಿವೆ. ಕೊರೊನಾ ವೈರಸ್ ಹೇಗೆ ಹರಡಿತು ಎಂಬುದರ ಬಗೆಗಿನ ಹಲವು ಸಿದ್ಧಾಂತ ಗಳಲ್ಲಿ ಇದೂ ಒಂದು. ಇದನ್ನು ಮತ್ತಷ್ಟು ಅಧ್ಯಯನ ನಡೆಸಬೇಕಿದೆ ಎಂದು ತಿಳಿಸಿದ್ದಾರೆ.

ಅಮೆರಿಕಾದ ಕೇಂದ್ರ ಗುಪ್ತದಳದ ಮಾಜಿ ಮುಖ್ಯಸ್ಥರು ಹಾಗೂ ಚೀನಾ ದೊಂದಿಗೆ ನಡೆಯುತ್ತಿದ್ದ ವ್ಯವಹಾರ ಗಳಲ್ಲಿ ಮುಂದಿರುತ್ತಿದ್ದ ಅಧಿಕಾರಿಗಳ ಪೈಕಿ ಪಾಂಪಿಯೋ ಅವರು ಪ್ರಮುಖರಾಗಿದ್ದಾರೆ.

Translate »