ಡಿಕೆಶಿ ಪದಗ್ರಹಣ `ಪ್ರಚಾರ’ ವಾಹನಗಳಿಗೆ ವಾಸು ಚಾಲನೆ
ಮೈಸೂರು

ಡಿಕೆಶಿ ಪದಗ್ರಹಣ `ಪ್ರಚಾರ’ ವಾಹನಗಳಿಗೆ ವಾಸು ಚಾಲನೆ

July 1, 2020

ಮೈಸೂರು, ಜೂ.30(ಆರ್‍ಕೆಬಿ)- ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಜುಲೈ 2ರಂದು ಅಧಿಕಾರ ಸ್ವೀಕಾರದ `ಪ್ರತಿಜ್ಞಾ’ ಕಾರ್ಯಕ್ರಮಕ್ಕಾಗಿ ಕಾಂಗ್ರೆಸ್ ಮೈಸೂರು ಜಿಲ್ಲಾ ಸಮಿತಿ ಪೂರ್ವ ತಯಾರಿಯಲ್ಲಿ ತೊಡಗಿದೆ. ಡಿಕೆಶಿ ಪದಗ್ರಹಣ ಕಾರ್ಯಕ್ರಮದತ್ತ ಸಾರ್ವಜನಿಕರ ಗಮನ ಸೆಳೆಯಲು ಸಿದ್ಧಗೊಂಡಿರುವ ಪ್ರಚಾರ ವಾಹನಗಳಿಗೆ ಮಾಜಿ ಶಾಸಕ ವಾಸು ಮಂಗಳವಾರ ನಗರದ ಇಂದಿರಾಗಾಂಧಿ ಕಾಂಗ್ರೆಸ್ ಭವನದೆದುರು ಚಾಲನೆ ನೀಡಿದರು. ಈ ಸಂದರ್ಭ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್.ಚಂದ್ರಶೇಖರ್, ಮುಖಂಡ ರಾದ ಶ್ರೀನಾಥ್‍ಬಾಬು, ರಾಘವೇಂದ್ರ ಇನ್ನಿತರರು ಉಪಸ್ಥಿತರಿದ್ದರು

Translate »