ಕೊರೊನಾ: ಪೊಲೀಸರಿಗೆ ಸುರಕ್ಷೆ
ಮೈಸೂರು

ಕೊರೊನಾ: ಪೊಲೀಸರಿಗೆ ಸುರಕ್ಷೆ

July 1, 2020

ಮೈಸೂರು,ಜೂ.30(ಆರ್‍ಕೆ)- ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿ ರುವುದರಿಂದ ಮೈಸೂರು ನಗರದ ಪೊಲೀ ಸರು ಅಗತ್ಯ ವೈಯಕ್ತಿಕ ಸುರಕ್ಷತಾ ಕ್ರಮ ವಹಿಸಬೇಕೆಂದು ಕಾನೂನು ಮತ್ತು ಸುವ್ಯ ವಸ್ಥೆ ವಿಭಾಗದ ಡಿಸಿಪಿ ಡಾ.ಎ.ಎನ್. ಪ್ರಕಾಶ್‍ಗೌಡ ನಿರ್ದೇಶನ ನೀಡಿದ್ದಾರೆ.

ಇಲಾಖೆಯಿಂದ ಹ್ಯಾಂಡ್ ಗ್ಲೌಸ್, ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಒದಗಿಸ ಲಾಗಿದ್ದು, ವಾಹನ ತಪಾಸಣೆ, ಬಂದೋ ಬಸ್ತ್ ಕರ್ತವ್ಯ ಹಾಗೂ ಇನ್ನಿತರ ಕಾರ್ಯಾ ಚರಣೆ ವೇಳೆ ತಪ್ಪದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದ್ದಾರೆ.

ಬರಿಗೈಯಲ್ಲಿ ಯಾವುದೇ ವ್ಯಕ್ತಿಯನ್ನಾ ಗಲೀ, ದಾಖಲೆ ಪತ್ರಗಳನ್ನಾಗಲೀ ಅಥವಾ ವಸ್ತುಗಳನ್ನು ಮುಟ್ಟಬಾರದು. ಕರ್ತವ್ಯದ ಅವಧಿಯಲ್ಲಿ ಹ್ಯಾಂಡ್ ಗ್ಲೌಸ್, ಮಾಸ್ಕ್, ಸ್ಯಾನಿ ಟೈಸರ್ ಬಳಸುವ ಮೂಲಕ ಕೊರೊನಾ ಸೋಂಕು ಹರಡದಂತೆ ಎಚ್ಚರಿಕೆ ವಹಿಸ ಬೇಕೆಂದು ಡಾ. ಪ್ರಕಾಶ್‍ಗೌಡರು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

ಅದರಂತೆ ಇಂದು ಜಿಲ್ಲಾಧಿಕಾರಿ ಕಚೇರಿ ಬಳಿ ಬಂದೋಬಸ್ತ್ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗೆ ಲಕ್ಷ್ಮೀಪುರಂ ಠಾಣೆ ಇನ್ಸ್ ಪೆಕ್ಟರ್ ವೆಂಕಟೇಶ್ ಅವರು ಕೊರೊನಾ ವೈರಸ್ ಹರಡದಂತೆ ಎಚ್ಚರ ವಹಿಸುವ ಬಗ್ಗೆ ತಿಳುವಳಿಕೆ ನೀಡಿದರು. ಅದೇ ರೀತಿ ಮೈಸೂರಿನ ಎಲ್ಲಾ ಸಿವಿಲ್ ಹಾಗೂ ಸಂಚಾರ ಠಾಣೆಗಳ ಇನ್ಸ್‍ಪೆಕ್ಟರ್‍ಗಳು ತಮ್ಮ ಸಿಬ್ಬಂದಿ ಗಳಿಗೆ ಮಾಹಿತಿ ನೀಡಿದರು.

Translate »