12 ಸಾವಿರ ರೂ. ಗೌರವ ಧನಕ್ಕೆ ಆಗ್ರಹಿಸಿ `ಆಶಾ’ ಪ್ರತಿಭಟನೆ
ಮೈಸೂರು

12 ಸಾವಿರ ರೂ. ಗೌರವ ಧನಕ್ಕೆ ಆಗ್ರಹಿಸಿ `ಆಶಾ’ ಪ್ರತಿಭಟನೆ

July 1, 2020

ಮೈಸೂರು, ಜೂ.30(ಎಂಟಿವೈ)- ತಿಂಗಳಿಗೆ ಕನಿಷ್ಠ 12 ಸಾವಿರ ರೂ. ಗೌರವ ಧನ ನಿಗದಿ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಮಂಗಳವಾರ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಹಾಗೂ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿ ಯನ್ ಸೆಂಟರ್(ಎಐಯುಟಿಯುಸಿ) ನೇತೃ ತ್ವದ ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಬಂದಿದ್ದ 100ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಹಕ್ಕೊತ್ತಾಯ ಮಾಡಿದರು. ಆರೋಗ್ಯವಂತ ಸಮಾಜ ಕಟ್ಟಲು ಆಶಾ ಕಾರ್ಯಕರ್ತೆಯರ ಪಾತ್ರ ಪ್ರಮುಖ. ಗರ್ಭಿಣಿ, ಬಾಣಂತಿ, ಮಕ್ಕಳ ಆರೋಗ್ಯ ಕಾಪಾಡಲು ಆಶಾ ಕಾರ್ಯಕರ್ತೆ ಯರು ಅಗತ್ಯ ಚಿಕಿತ್ಸೆ ಕೊಡಿಸುತ್ತಿದ್ದಾರೆ, ಕಾಲಕಾಲಕ್ಕೆ ಲಸಿಕೆ ಹಾಕಿಸುವಲ್ಲಿ ಶ್ರಮಿಸುತ್ತಿ ದ್ದಾರೆ. ಇದೀಗ ವಿಶ್ವವನ್ನೇ ತಲ್ಲಣಗೊಳಿಸಿ ರುವ ಕೊರೊನಾ ಸೋಂಕು ಹರಡುವಿಕೆ ತಡೆ ಕರ್ತವ್ಯದಲ್ಲೂ ವಾರಿಯರ್ಸ್ ಎನಿಸಿ ಕೊಂಡಿದ್ದಾರೆ. ಅವರ ಸೇವೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದರೆ ಆಶಾ ಕಾರ್ಯ ಕರ್ತೆಯರು ಬಲು ಕಷ್ಟದಲ್ಲಿ ಜೀವನ ಸಾಗಿಸುವಂತಾಗಿದೆ ಎಂದು ಪ್ರತಿಭಟನಾ ಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಮಾನ್ಯತೆ ಸಿಕ್ಕಿಲ್ಲ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ. ಸರ್ಕಾರ ಕೇವಲ 4 ಸಾವಿರ ರೂ. ಗೌರವ ಧನ ನೀಡುತ್ತಿದೆ. ವಿವಿಧ ಚಟುವಟಿಕೆಗಳಿಗೆ ಹೆಚ್ಚುವರಿಯಾಗಿ 2-3 ಸಾವಿರ ರೂ. ಪ್ರೋತ್ಸಾಹಧನ ಕೊಡುವ ವ್ಯವಸ್ಥೆ ಇದೆ. ಆದರೆ ನಿಭಾಯಿಸಿದ ಚಟುವಟಿಕೆಗಳನ್ನು `ಆಶಾ ಸಾಫ್ಟ್’ ವೆಬ್‍ಪೋರ್ಟಲ್‍ಗೆ ಅಪ್ ಲೋಡ್ ಮಾಡಬೇಕಿದೆ. ಆದರೆ, ಇಲಾಖಾ ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿ ಸದ ಕಾರಣ ಪ್ರೋತ್ಸಾಹಧನವೂ ಸಮ ಯಕ್ಕೆ ಸರಿಯಾಗಿ ತಲುಪುತ್ತಿಲ್ಲ ಎಂದು ದೂರಿದರು. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್, ಫೇಸ್ ಶೀಲ್ಡ್, ಗ್ಲೌಸ್ ಹಾಗೂ ಸ್ಯಾನಿಟೈಸರ್ ಸೇರಿದಂತೆ ಆರೋಗ್ಯ ರಕ್ಷಣಾ ಪರಿಕರ ಗಳನ್ನು ಸಮರ್ಪಕವಾಗಿ ನೀಡಿಲ್ಲ. ಕರವಸ್ತ್ರ ಕಟ್ಟಿಕೊಂಡು ಕೆಲಸ ಮಾಡುವ ಸ್ಥಿತಿ ಇದೆ. ಹಲವೆಡೆ ಕಂಟೈನ್ಮೆಂಟ್ ಜೋನ್‍ನಲ್ಲಿ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರಿಗೆ ಸೋಂಕು ತಗುಲಿದ ಉದಾ; ಸಾಕಷ್ಟಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹಲವು ಬಾರಿ ಪ್ರತಿಭಟಿಸಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಶಾ ಕಾರ್ಯ ಕರ್ತೆಯರ ಹಿತರಕ್ಷಣೆಗೆ ಕ್ರಮ ಕೈಗೊಂಡಿಲ್ಲ. ಅಗತ್ಯ ವಸ್ತುಗಳ ಬೆಲೆ ಏರುತ್ತಲೇ ಇರುವ ಈ ಸಂದರ್ಭದಲ್ಲಿ 6 ಸಾವಿರ ರೂ.ನಿಂದ 1 ತಿಂಗಳು ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ಕೂಡಲೇ ಸರ್ಕಾರ ರಾಜ್ಯದಲ್ಲಿ ರುವ 42 ಸಾವಿರ ಆಶಾ ಕಾರ್ಯಕರ್ತೆ ಯರಿಗೂ 12 ಸಾವಿರ ರೂ. ಗೌರವಧನ ನಿಗದಿ ಮಾಡಬೇಕು. ಸರ್ಕಾರ ಈ ಬಾರಿಯೂ ಕ್ರಮ ಕೈಗೊಳ್ಳದಿದ್ದರೆ ಜು.10ರಿಂದ ರಾಜ್ಯಾ ದ್ಯಂತ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಉಗ್ರ ಹೋರಾಟ ಮಾಡುವುದಾಗಿ ಪ್ರತಿ ಭಟನಾಕಾರರು ಎಚ್ಚರಿಸಿದರು. ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಆರ್.ಶುಭಮಂಗಳಾ, ಜಿಲ್ಲಾ ಕಾರ್ಯದರ್ಶಿ ಕೋಮಲಾ, ಎಐಯು ಟಿಯುಸಿ ಸಂಧ್ಯಾ, ಸೀಮಾ, ಯಶೋಧರ್, ಸಂಘದ ಮುಖಂಡರಾದ ಸುನೀತಾ, ನಿರ್ಮಲ, ಭಾಗ್ಯ ಸೇರಿದಂತೆ ಹಲವಾರು ಕಾರ್ಯ ಕರ್ತೆಯರು ಪ್ರತಿಭಟನೆಯಲ್ಲಿದ್ದರು.

Translate »