ದೇವನೂರು 2ನೇ ಹಂತದ ಒತ್ತುವರಿಯಾಗಿದ್ದ 14 ನಿವೇಶನ ಮುಡಾ ವಶಕ್ಕೆ
ಮೈಸೂರು

ದೇವನೂರು 2ನೇ ಹಂತದ ಒತ್ತುವರಿಯಾಗಿದ್ದ 14 ನಿವೇಶನ ಮುಡಾ ವಶಕ್ಕೆ

July 1, 2020

ಮೈಸೂರು, ಜೂ. 30(ಆರ್‍ಕೆ)- ಮೈಸೂರಿನ ದೇವನೂರು 2ನೇ ಹಂತದ ಬಡಾವಣೆಯಲ್ಲಿ ಒತ್ತು ವರಿ ಮಾಡಿಕೊಂಡಿದ್ದ 14 ನಿವೇಶನಗಳನ್ನು ಮುಡಾ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದು, ಸಂರಕ್ಷಿಸಿದರು.

ದೇವನೂರು 2ನೇ ಹಂತದ ಬಡಾವಣೆಯಲ್ಲಿ ರಚಿಸಲಾಗಿರುವ 1030 ರಿಂದ 1043ನೇ ಸಂಖ್ಯೆಯ 14 ನಿವೇಶನಗಳನ್ನು ಸೈಯದ್ ಹಸೀಬ್ ಎಂಬು ವರು ಸ್ವತ್ತುಗಳು ತಮ್ಮದೆಂದು ಪ್ರತಿಪಾದಿಸಿ ಅತಿ ಕ್ರಮ ಪ್ರವೇಶ ಮಾಡಿ ತಂತಿ ಬೇಲಿ ಹಾಕಿಕೊಂಡಿ ದ್ದರು. ದೇವನೂರು ಗ್ರಾಮದ ಸರ್ವೆ ನಂಬರ್ 166/1, 166/2 ಮತ್ತು 164ರಲ್ಲಿ ಬರುವ ಜಮೀನು ಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಭೂ ಸ್ವಾಧೀನಪಡಿಸಿಕೊಂಡು ದೇವನೂರು 2ನೇ ಹಂತದ ವಸತಿ ಬಡಾವಣೆ ಅಭಿವೃದ್ಧಿಪಡಿಸಿದೆ. ಅದರ ಮಾಲೀಕರಿಗೆ 1988ರ ಮಾರ್ಚ್ 11 ಹಾಗೂ ಮಾರ್ಚ್ 13ರಂದು ಪರಿಹಾರದ ಹಣವನ್ನೂ ಪಾವತಿಸಲಾಗಿದೆ.

ಖಾಸಗಿ ವ್ಯಕ್ತಿಯೋರ್ವ ಅಲ್ಲಿನ 13 ನಿವೇಶನಗಳು ತಮ್ಮದೆಂದು ಪ್ರತಿಪಾದಿಸಿ ಅತಿಕ್ರಮ ಪ್ರವೇಶ ಮಾಡಿ ರುವುದು ತಿಳಿದ ತಕ್ಷಣ ಎಚ್ಚೆತ್ತ ಮುಡಾ ಆಯುಕ್ತ ಡಿ.ಬಿ.ನಟೇಶ್, ಇಂದು ಸೂಪರಿಂಟೆಂಡಿಂಗ್ ಇಂಜಿ ನಿಯರ್ ಶಂಕರ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಸುವರ್ಣ ಹಾಗೂ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಖಾಸಗಿ ವ್ಯಕ್ತಿ ಸ್ವತ್ತುಗಳನ್ನು ಅತಿಕ್ರಮ ಪ್ರವೇಶದ ಮೂಲಕ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅತಿಕ್ರಮ ತೆರವುಗೊಳಿಸಿದ ಅಧಿಕಾರಿ ಗಳು, ಉದಯಗಿರಿ ಠಾಣೆ ಇನ್ಸ್‍ಪೆಕ್ಟರ್ ಪೂಣಚ್ಚ ನೇತೃತ್ವದ ಸಿಬ್ಬಂದಿಯ ಭದ್ರತೆಯಲ್ಲಿ ಎಲ್ಲಾ 14 ನಿವೇಶನಗಳನ್ನು ವಶಕ್ಕೆ ಪಡೆದು ಫೆನ್ಸಿಂಗ್ ಮಾಡಿಸಿ ಸ್ಥಳದಲ್ಲಿ `ಮುಡಾ ಆಸ್ತಿ’ ಫಲಕ ಅಳವಡಿಸಿದರು.

ಇದರಿಂದಾಗಿ 10 ಕೋಟಿ ರೂ. ಮೌಲ್ಯದ 14 ನಿವೇಶನಗಳನ್ನು ಮುಡಾ ಅಧಿಕಾರಿಗಳು ಸಂರಕ್ಷಿಸಿದಂತಾಗಿದ್ದು, ಯಾರಾದರೂ ಅತಿಕ್ರಮ ಪ್ರವೇಶ ಮಾಡಿದರೆ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದೆಂಬ ಎಚ್ಚರಿಕೆಯನ್ನೂ ನೀಡಿದ್ದಾ

Translate »