ಹಾರೋಹಳ್ಳಿ ಗ್ರಾಪಂ ಎದುರು ಎಐಕೆಎಸ್‍ಸಿಸಿ ಪ್ರತಿಭಟನೆ
ಮೈಸೂರು

ಹಾರೋಹಳ್ಳಿ ಗ್ರಾಪಂ ಎದುರು ಎಐಕೆಎಸ್‍ಸಿಸಿ ಪ್ರತಿಭಟನೆ

July 1, 2020

ಮೈಸೂರು, ಜೂ.30(ಎಸ್‍ಪಿಎನ್)- ಗ್ರಾಮ ಪಂಚಾಯ್ತಿಗಳಿಗೆ ಆಡಳಿತಾಧಿಕಾರಿ ನೇಮಕ, ರೈತರಿಗೆ ಸಹಾಯಧನ ಹೆಚ್ಚಳ ಹಾಗೂ ಲಾಕ್‍ಡೌನ್ ಸಂದರ್ಭದಲ್ಲಿ ಅನ ಗತ್ಯವಾಗಿ ಕೃಷಿಕರ ವಿರುದ್ಧ ದಾಖಲಾಗಿ ರುವ ಕೇಸ್‍ಗಳನ್ನು ವಾಪಸ್ ಪಡೆ ಯುವಂತೆ ರಾಜ್ಯ ಸರ್ಕಾರವನ್ನು ಒತ್ತಾ ಯಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯ(ಎಐಕೆಎಸ್‍ಸಿಸಿ) ಪದಾಧಿಕಾರಿಗಳು ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮ ಪಂಚಾಯ್ತಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘದ ಪಾಪೇಗೌಡ ಹಾಗೂ ಆರ್‍ಕೆಎಸ್ ಸಂಘಟನೆಯ ಹೆಚ್.ಎಂ.ಬಸವರಾಜು ಪ್ರತಿಭಟನೆ ನೇತೃತ್ವ ವಹಿಸಿದ್ದರು. 16 ಪ್ರಮುಖ ಬೇಡಿಕೆಗಳ ಮನವಿಪತ್ರವನ್ನು ಹಾರೋ ಹಳ್ಳಿ ಪಿಡಿಓಗೆ ಸಲ್ಲಿಸಿದರು.ಡಾ.ಸ್ವಾಮಿನಾಥನ್ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಜಾರಿ ಗೊಳಿಸಲು ಕ್ರಮ ಕೈಗೊಳ್ಳಬೇಕು. ನರೇಗಾ ಯೋ