ಅಂತು ಹಾರುವ ಹಾವು ಸಂರಕ್ಷಿಸಿದ ಸ್ನೇಕ್‍ಶ್ಯಾಮ್
ಮೈಸೂರು

ಅಂತು ಹಾರುವ ಹಾವು ಸಂರಕ್ಷಿಸಿದ ಸ್ನೇಕ್‍ಶ್ಯಾಮ್

July 1, 2020

ಮೈಸೂರು, ಜೂ.30(ಎಸ್‍ಬಿಡಿ)- ಮೈಸೂರಿನ ಅಗ್ರಹಾರದಲ್ಲಿ ಕಾಣಿಸಿ ಕೊಂಡಿದ್ದ ಹಾರುವ ಹಾವನ್ನು ಉರಗ ಸಂರಕ್ಷಕರಾದ ಸ್ನೇಕ್‍ಶ್ಯಾಮ್ ಹಾಗೂ ಅವರ ಪುತ್ರ ಸೂರ್ಯಕೀರ್ತಿ ಮಂಗಳವಾರ ರಕ್ಷಿಸಿದರು.

ರಾಮಾನುಜ ರಸ್ತೆ, ಜೆಎಸ್‍ಎಸ್ ಫಾರ್ಮಸಿ ಕಾಲೇಜು ಬಳಿ ಮಂಗಳವಾರ ಸಂಜೆ 4 ಗಂಟೆ ವೇಳೆಯಲ್ಲಿ ವಾಹನ ಸಂಚಾರದ ನಡುವೆಯೂ ಸುರಕ್ಷಿತವಾಗಿ ರಸ್ತೆ ದಾಟಿದ ವಿಶಿಷ್ಟ ಹಾವು, ಫುಟ್ ಪಾತ್‍ನಲ್ಲಿ ಬಿಸಾಡಿದ್ದ ಸಣ್ಣ ಪೈಪ್‍ನೊಳಗೆ ಸೇರಿಕೊಂಡಿತ್ತು. ಇದನ್ನು ಗಮನಿಸಿದ ಜನರಿಕ್ ಮೆಡಿಕಲ್ಸ್‍ನ ನವೀನ್, ಕೂಡಲೇ ಸ್ನೇಕ್‍ಶ್ಯಾಮ್‍ಗೆ ವಿಷಯ ತಿಳಿಸಿದರು. ಪುತ್ರ ಸೂರ್ಯಕೀರ್ತಿಯೊಂದಿಗೆ ಸ್ಥಳಕ್ಕೆ ಬಂದ ಸ್ನೇಕ್‍ಶ್ಯಾಮ್, ಪೈಪ್‍ನೊಳಗೆ ಸೇರಿ ಕೊಂಡಿದ್ದ ಹಾವನ್ನು ರಕ್ಷಿಸಿದರು.

ಪಶ್ಚಿಮ ಘಟ್ಟದಲ್ಲಿ ಹೆಚ್ಚಾಗಿರುವ ಹಾರುವ ಹಾವು(ಆರ್ನೆಟ್ ಫ್ಲೈಯಿಂಗ್ ಸ್ನೇಕ್) ಅತ್ಯಂತ ಆಕರ್ಷಕವಾಗಿದೆ. ಆದರೆ ಇದು ವಿಷಕಾರಿಯಲ್ಲ. ಊಟಿ ಅಥವಾ ಪಶ್ಚಿಮ ಘಟ್ಟದಿಂದ ಮೈಸೂರಿಗೆ ಬಂದಿ ರುವ ಯಾವುದೋ ವಾಹನದಲ್ಲಿ ಸೇರಿ ಕೊಂಡಿರಬಹುದು. ಆ ವಾಹನವನ್ನು ಅಗ್ರಹಾರದಲ್ಲಿ ನಿಲುಗಡೆ ಮಾಡಿದ ಸಂದರ್ಭದಲ್ಲಿ ಹಾವು ಹೊರ ಬಂದಿರ ಬೇಕು. ಮರದಿಂದ ಮರಕ್ಕೆ ನಿರಾ ಯಾಸವಾಗಿ ಹಾರುವ ಈ ಹಾವಿಗೆ ಪಕ್ಷಿ ಮರಿಗಳು, ಹಲ್ಲಿ ಇನ್ನಿ ತರ ಸಣ್ಣ ಜೀವಿಗಳೇ ಆಹಾರ. ಈ ವಿಶಿಷ್ಟ ಹಾವು ಇಲ್ಲಿನ ವಾತಾವರಣಕ್ಕೆ ಒಗ್ಗುವುದು ಕಷ್ಟ. ಹಾಗಾಗಿ ಅರಣ್ಯಾಧಿಕಾರಿಗಳ ಗಮ ನಕ್ಕೆ ತಂದು, ಅವರು ಸೂಚಿಸಿದ ಸ್ಥಳಕ್ಕೆ ಬಿಡುತ್ತೇವೆ ಎಂದು ಸ್ನೇಕ್‍ಶ್ಯಾಮ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ತಿಂಗಳಿಂದ ಕಾಣಿಸಿಕೊಳ್ಳುತ್ತಿತ್ತು: ಜೂ.5 ರಂದು ರಾಮಾನುಜ ರಸ್ತೆಯ 7ನೇ ಕ್ರಾಸ್, ಎಸ್.ವೆಂಕಟರಾಮು ಅವರ ಮನೆಯ ಮುಂಬಾಗಿಲ ಗ್ರಿಲ್‍ಗೆ ಸುತ್ತಿ ಕೊಂಡಿದ್ದ ಹಾವು, ಕೆಲಕಾಲ ಅಲ್ಲಿಯೇ ಸುತ್ತಾಡಿ, ಕಣ್ಮರೆಯಾಗಿತ್ತು. ಗಂಟೆಗಳ ಕಾಲ ಹುಡುಕಾಡಿದರೂ ಪತ್ತೆಯಾಗಿರ ಲಿಲ್ಲ. ಎರಡು ದಿನಗಳ ಹಿಂದೆ ಇದೇ ರಸ್ತೆಯ ಮರವೊಂದರಲ್ಲಿ ಕಾಣಿಸಿ ಕೊಂಡಿತ್ತು ಎಂದು ಸ್ಥಳೀಯರು ಹೇಳು ತ್ತಾರೆ. ಹೀಗೆ ತಿಂಗಳಿಂದ ರಾಮಾನುಜ ರಸ್ತೆ ಆಸುಪಾಸಿನಲ್ಲೇ ಓಡಾಡಿಕೊಂಡಿದ್ದ ಹಾವನ್ನು ರಕ್ಷಿಸಲಾಗಿದೆ.