ಮೈಸೂರು,ಜೂ.10(ಪಿಎಂ)- ಮೈಸೂರು ನಗರದಲ್ಲಿ ಕಳೆದ 25 ವರ್ಷಗಳಿಂದ ಭಾರೀ ಪ್ರಮಾಣದ ಭೂ ಹಗರಣ ನಡೆದಿದ್ದು, ಈ ಸಂಬಂಧ ಸಿಬಿಐ ತನಿಖೆ ಆಗಲೇ ಬೇಕು ಎಂದು ಆಗ್ರಹಿಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗ ರಾಜ್, ತ.ಮ.ವಿಜಯಭಾಸ್ಕರ್ ಮೈಸೂರು ಡಿಸಿಯಾಗಿದ್ದ ಸಂದರ್ಭದಲ್ಲಿ ಭೂ ಅಕ್ರಮ ಸಂಬಂಧ ನೀಡಿದ್ದ ವರದಿ ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು.
ಮೈಸೂರಿನ ಜಯಚಾಮರಾಜ ಒಡೆ ಯರ್ ವೃತ್ತದಲ್ಲಿ ಗುರುವಾರ (ಆರ್ ಗೇಟ್) ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಸೈಕಲ್ ಸವಾರಿ ನಡೆಸುವ ಮೂಲಕ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿ, ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಮೈಸೂರು ನಗರದಲ್ಲಿ ಭೂ ಹಗರಣ ಭಾರೀ ಪ್ರಮಾಣದಲ್ಲಿ ನಡೆದಿದೆ. ಈ ಸಂಬಂಧ ಸಿಬಿಐ ತನಿಖೆ ನಡೆಸಿ, ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಬೇಕು. ಮೈಸೂರಿನಲ್ಲಿ ಭೂ ಕಬ ಳಿಕೆ ಸಾಮಾನ್ಯ ದಂಧೆಯಾಗಿ ಪರಿಣಮಿ ಸಿದೆ ಎಂದರು. ತ.ಮ.ವಿಜಯಭಾಸ್ಕರ್ ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಭೂ ಅಕ್ರಮ ಸಂಬಂಧ ಸರ್ಕಾರಕ್ಕೆ ವರದಿ ಕೊಟ್ಟಿ ದ್ದರು. ಆ ವರದಿ ಏನಾಯಿತು. ಅದನ್ನು ಬಹಿರಂಗಪಡಿಸಬೇಕು. ಈ ಸಂಬಂಧ ತಪ್ಪಿತಸ್ಥರನ್ನು ಜೈಲಿಗೆ ಹಾಕಬೇಕು. ಮೈಸೂರು ಡಿಸಿಯಾಗಿದ್ದ ರೋಹಿಣಿ ಸಿಂಧೂರಿ ವರ್ಗಾವಣೆಗೆ ಭೂ ಮಾಫಿಯಾ ಕಾರಣ. ಇದು ಅತ್ಯಂತ ಗಂಭೀರವಾದ ವಿಚಾರ. ರೋಹಿಣಿ ಸಿಂಧೂರಿ ಇದ್ದರೆ, ಭೂ ಹಗರಣ ಬಯಲು ಆಗುತ್ತದೆ ಎಂದು ಅವರ ವರ್ಗಾವಣೆಗೆ ದೊಡ್ಡ ಪಿತೂರಿ ನಡೆಯಿತು ಎಂದು ಆರೋಪಿಸಿದರು.
ತೀವ್ರತರ ಹೋರಾಟ ಅಗತ್ಯ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ನಿರಂತರ ಏರಿಕೆ ಮೂಲಕ ಕೇಂದ್ರ ಸರ್ಕಾರ, ಜನಸಾಮಾ ನ್ಯರ ಬೆನ್ನುಮೂಳೆ ಮುರಿದಿದೆ. ತೈಲ ಬೆಲೆ ಏರಿಕೆ ವಿರುದ್ಧ ರಾಜ್ಯ ಮತ್ತು ದೇಶದ ಜನತೆ ಬೀದಿಗಿಳಿದು ಹೋರಾಟ ಮಾಡ ಬೇಕು. ಜೈಲಿಗೆ ಹೋಗಲು ಸಿದ್ಧರಾಗಿ ತೀವ್ರ ಹೋರಾಟ ನಡೆಸಬೇಕು. ಎಲ್ಲಾ ವಿರೋಧ ಪಕ್ಷಗಳು ಇದಕ್ಕಾಗಿ ಒಂದಾಗಿ ತೀವ್ರತರ ಹೋರಾಟ ಮಾಡಬೇಕು. ಸಂಸದರು ತಮಗೆ ಜವಾಬ್ದಾರಿ ಇದ್ದರೆ ತೈಲ ಬೆಲೆ ಇಳಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇಲ್ಲವಾದರೆ ಸಂಸದರ ಸ್ಥಾನಕ್ಕೆ ರಾಜೀನಾಮೆ ಕೊಡ ಬೇಕು ಎಂದು ಆಗ್ರಹಿಸಿದರು.
ಎಸ್‍ಎಸ್‍ಎಲ್‍ಸಿಯಿಂದ ಹಿಡಿದು ಪದವಿ ವರೆಗೆ ಎಲ್ಲಾ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ತೇರ್ಗಡೆ ಮಾಡಬೇಕು. ಈ ಬೇಡಿಕೆ ಸಂಬಂಧ ಜೂ.15ರಂದು ಬೆಳಗ್ಗೆ 11.30ಕ್ಕೆ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತ ದಲ್ಲಿ ವಿದ್ಯಾರ್ಥಿ ಚಳವಳಿ ನಡೆಸಲಾಗು ವುದು ಎಂದು ತಿಳಿಸಿದರು. ಕನ್ನಡಪರ ಹೋರಾಟಗಾರರಾದ ಮೂಗೂರು ನಂಜುಂಡ ಸ್ವಾಮಿ, ತಾಯೂರು ವಿಠ್ಠಲಮೂರ್ತಿ ಮತ್ತಿ ತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.