ವಿವಿಧ ಸಂಘಟನೆಗಳಿಂದ ವಿವಿಧೆಡೆ ಬೃಹತ್ ರಕ್ತದಾನ ಶಿಬಿರ
ಮೈಸೂರು

ವಿವಿಧ ಸಂಘಟನೆಗಳಿಂದ ವಿವಿಧೆಡೆ ಬೃಹತ್ ರಕ್ತದಾನ ಶಿಬಿರ

June 14, 2021

ಮೈಸೂರು ಜೂ.13(ಆರ್‍ಕೆಬಿ)- ವಿಶ್ವ ರಕ್ತದಾನಿ ಗಳ ದಿನಾಚರಣೆ ಅಂಗವಾಗಿ ರೋಟರಿ ಮೈಸೂರು, ತೇರಾಪಂತ್ ಯುವ ಪರಿಷದ್ ಸೇರಿದಂತೆ ವಿವಿಧ ಸಂಘ ಟನೆಗಳ ಜಂಟಿ ಆಶ್ರಯದಲ್ಲಿ ಮೈಸೂರಿನ ವಿವಿಧ ಕಡೆಗಳಲ್ಲಿ ನಡೆಸಲಾದ ಬೃಹತ್ ರಕ್ತದಾನ ಶಿಬಿರಗಳಲ್ಲಿ ಒಟ್ಟಾರೆ 333 ಯೂನಿಟ್ ರಕ್ತ ಸಂಗ್ರಹಿಸಲಾಯಿತು.

ರೋಟರಿ ಮೈಸೂರು, ತೇರಾಪಂತ್ ಯುವ ಪರಿ ಷತ್‍ನೊಂದಿಗೆ ಮೈಸೂರು ಬ್ಲಡ್ ಹಬ್, ಹ್ಯೂಮನ್ ಟಚ್, ರಕ್ತದಾನ ಗೋ ಭಕ್ತ ಸಂಘಟನೆ (ಅರ್‍ಜಿಎಸ್), ಜೀವಧಾರಾ ರಕ್ತನಿಧಿ ಕೇಂದ್ರ ಜಂಟಿಯಾಗಿ ಶಿಬಿರ ಆಯೋಜಿಸಿದ್ದವು. ಮೈಸೂರಿನ ಅಶೋಕರಸ್ತೆ ಕನ್ನಿಕಾ ಮಹಲ್, ಎಂಜಿ ರಸ್ತೆ ತೇರಾಪಂತ್ ಭವನ್, ವಿಜಯನಗರ ಕೊಡವ ಸಮಾಜ, ವಿಶ್ವೇಶ್ವರನಗರದ ಮಾಧವಶೆಣೈ ಕಲ್ಯಾಣ ಮಂಟಪ, ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪ, ಸಿದ್ದಾರ್ಥ ಲೇಔಟ್‍ನ ವೆಂಕಟಲಿಂಗಯ್ಯ ಕಲ್ಯಾಣ ಮಂಟಪ, ಶ್ರೀರಾಂಪುರದ ಭ್ರಮರಾಂಬ ಕಲ್ಯಾಣ ಮಂಟಪದಲ್ಲಿ ರಕ್ತದಾನ ಶಿಬಿರ ನಡೆದವು.

ಕನ್ನಿಕಾ ಮಹಲ್‍ನಲ್ಲಿ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ, ಮಾಜಿ ಶಾಸಕ ವಾಸು, ಎಂ.ಜಿ. ರಸ್ತೆಯ ತೇರಾಪಂತ್ ಭವನದಲ್ಲಿ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್, ಕೊಡವ ಸಮಾಜದಲ್ಲಿ ನಗರಪಾಲಿಕೆ ಸದಸ್ಯ ಸುಬ್ಬಯ್ಯ, ಭ್ರಮರಾಂಬ ಕಲ್ಯಾಣ ಮಂಟಪದಲ್ಲಿ ಬಿ.ಎಸ್.ಪ್ರಶಾಂತ್ ಏಕಕಾಲದಲ್ಲಿ ಶಿಬಿರಕ್ಕೆ ಚಾಲನೆ ನೀಡಿದರು. ಇವರೊಂದಿಗೆ ಹರೇ ಶ್ರೀನಿವಾಸ ಸಮಿತಿ, ಆರ್ಯವೈಶ್ಯ ರಾಜಕೀಯ ಸಮಿತಿ ಇನ್ನಿತರ ಸಂಘಟನೆಗಳು ಕೈಜೋಡಿಸಿದ್ದವು. 7 ಕಡೆಗಳಲ್ಲಿ ನಡೆದ ಶಿಬಿರದಲ್ಲಿ ವಿವಿಧ ವರ್ತಕರು, ವಿವಿಧ ಸಂಘಟನೆಗಳ ಪ್ರಮುಖರು, ಸರ್ಕಾರಿ ನೌಕರರು ಇನ್ನಿತರರು ರಕ್ತದಾನ ಮಾಡಿ ವಿಶ್ವ ರಕ್ತದಾನದ ಮಹತ್ವವನ್ನು ಸಾರಿದರು.

ಸ್ವಯಂ ರಕ್ತದಾನಕ್ಕೆ ಯುವಕರಿಗೆ ಕರೆ: ಎಂ.ಜಿ.ರಸ್ತೆಯ ತೇರಾಪಂತ್ ಭವನದಲ್ಲಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ರಕ್ತದಾನ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಕಾರ್ಯ. ಹೆರಿಗೆ, ಶಸ್ತ್ರಚಿಕಿತ್ಸೆ, ಅಪಘಾತ ಇನ್ನಿತರ ಸಂದರ್ಭ ಗಳಿಗೆ ತುರ್ತಾಗಿ ರಕ್ತದ ಅವಶ್ಯಕತೆ ಇರುತ್ತದೆ. ರಕ್ತದಾನಿಗಳು ಎಷ್ಟೇ ರಕ್ತ ನೀಡಿದ್ದರೂ ರಕ್ತದ ಕೊರತೆ ಇದ್ದೇ ಇರುತ್ತದೆ. ಹಾಗಾಗಿ ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕು. ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್‍ಕುಮಾರ್ ಗೌಡ, ರೋಟರಿ ಮೈಸೂರು ಅಧ್ಯಕ್ಷ ಮಂಜೇಶ್ ಕುಮಾರ್, ಕಾರ್ಯದರ್ಶಿ ರೂಪಾ ವೆಂಕಟೇಶ್, ರೋಟರಿ ಸಮುದಾಯ ಸೇವಾ ನಿರ್ದೇಶಕ ಎಂ.ಎನ್. ವೆಂಕಟೇಶ್, ತೇರಾಪಂತ್ ಯುವ ಪರಿಷದ್‍ನ ಮೈಸೂರು ಘಟಕದ ಅಧ್ಯಕ್ಷ ದಿನೇಶ್ ಜೈನ್ ಡಕ್, ಕಾರ್ಯದರ್ಶಿ ವಿನೋದ್ ಜೈನ್, ಪದಾಧಿಕಾರಿ ಗಳಾದ ಮಹಾವೀರ ದೆರಾಸರಿಯ, ಸೆಜಲ್ ಕೊಠಾರಿ, ಆನಂದ್ ಮಾಂಡೋತ್, ಮುಖೇಶ್ ದುಗ್ಲಿಯಾ, ರಕ್ತದಾನ ಗೋಭಕ್ತ ಸಂಘಟನೆಯ ದೇವೇಂದ್ರ, ಹ್ಯೂಮನ್ ಟಚ್‍ನ ವಿಕ್ರಂ, ಆರ್ಯವೈಶ್ಯ ರಾಜ ಕೀಯ ಸಮಿತಿ ಅಧ್ಯಕ್ಷ ಎಸ್.ಕೆ.ದಿನೇಶ್, ಹರೇ ಶ್ರೀನಿ ವಾಸ ಸಮಿತಿ ಅಧ್ಯಕ್ಷ ಹೆಚ್.ಕೆ.ಗುಂಡು ವೆಂಕಟೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸದಸ್ಯೆ ರೇಣುಕಾರಾಜ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಪರಿಸರ ಜಾಗೃತಿ ಅಧ್ಯಕ್ಷ ಮಹೇಂದ್ರ ಸಿಂಗ್ ಕಾಳಪ್ಪ, ಅಲೋಕ್ ಚಾಜೇಡ್, ಸಂಜಯ್, ದಿನೇಶ್ ಮಾರೋತ್ ಇನ್ನಿತರರು ಇದ್ದರು.

Translate »