ಬಿಎಸ್‍ವೈ, ಬೊಮ್ಮಾಯಿ ಅವರನ್ನು ಬಿಜೆಪಿ ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದನ್ನು ವೀರಶೈವ ಸಮುದಾಯ ಅರ್ಥ ಮಾಡಿಕೊಳ್ಳಬೇಕು
ಮೈಸೂರು

ಬಿಎಸ್‍ವೈ, ಬೊಮ್ಮಾಯಿ ಅವರನ್ನು ಬಿಜೆಪಿ ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದನ್ನು ವೀರಶೈವ ಸಮುದಾಯ ಅರ್ಥ ಮಾಡಿಕೊಳ್ಳಬೇಕು

January 3, 2023

ಮೈಸೂರು, ಜ.2(ಆರ್‍ಕೆಬಿ)- ಬಿಜೆಪಿ ಬೆಂಬಲದ ಮೂಲವಾಗಿರುವ ವೀರಶೈವ ಲಿಂಗಾಯಿತ ಸಮುದಾಯದ ಮುಖಂ ಡರನ್ನು ಬಿಜೆಪಿ ಹೈಕಮಾಂಡ್ ನಿಯಂ ತ್ರಿಸುತ್ತಿದೆ. ಇಂದು ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸ್ಥಿತಿ ಏನಾಗಿದೆ ಎಂಬುದನ್ನು ವೀರಶೈವ ಲಿಂಗಾ ಯತ ಮುಖಂಡರು ಅರ್ಥ ಮಾಡಿಕೊಳ್ಳ ಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಮೈಸೂರಿನ ನೇರಂಬಳ್ಳಿ ಕನ್ವೆನ್ಷನ್ ಹಾಲ್ ನಲ್ಲಿ ಸೋಮವಾರ ಕೃಷ್ಣರಾಜ ಕ್ಷೇತ್ರದ ಘೋಷಿತ ಜೆಡಿಎಸ್ ಅಭ್ಯರ್ಥಿ ಕೆ.ವಿ. ಮಲ್ಲೇಶ್ ಆಯೋಜಿಸಿದ್ದ `ಶರಣರೊಂ ದಿಗೆ ಕುಮಾರಣ್ಣ’ ವೀರಶೈವ ಮುಖಂಡರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಬಿ.ಎಸ್.ಯಡಿಯೂರಪ್ಪ ವೀರಶೈವ ಸಮಾಜದ ಶಕ್ತಿ. ಆದರೆ ಇಂದು ಯಡಿ ಯೂರಪ್ಪ ಅವರನ್ನು ಬಿಜೆಪಿ ಎಲ್ಲಿಟ್ಟಿದೆ. ಅವರು ಹೇಗೆ ಕಡೆಗಣಿಸಲ್ಪಟ್ಟಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಯಾವುದೇ ಸ್ವಂತ ತೀರ್ಮಾನ ಕೈಗೊಳ್ಳದ ಹಾಗೆ ಹೆಸರಿಗೆ ಮಾತ್ರ ಮುಖ್ಯ ಮಂತ್ರಿಯಾಗಿ ಇಟ್ಟುಕೊಂಡಿದ್ದಾರೆ. ಬಿಜೆಪಿಯ ಬೆಂಬಲದ ಮೂಲವಾದ ವೀರಶೈವರ ಬಗ್ಗೆ, ವೀರಶೈವ ಮುಖಂ ಡರ ಬಗ್ಗೆ ಬಿಜೆಪಿಯ ಕೇಂದ್ರ ನಾಯಕರು ತೀರಾ ಅಸಡ್ಡೆಯಿಂದ ಕಾಣುತ್ತಿದ್ದಾರೆ. ವೀರಶೈವ ಲಿಂಗಾಯತ ಸಮುದಾಯವು ಬಿಜೆಪಿಯ ವಿಶ್ವಾಸಘಾತುಕತನವನ್ನು ನಿಧಾನವಾಗಿ ಅರಿತುಕೊಳ್ಳಲು ಪ್ರಾರಂಭಿ ಸಿದೆ. ಇದು ಜೆಡಿಎಸ್‍ಗೆ ಉತ್ತಮ ಸಂಕೇತ ವಾಗಿದೆ ಎಂದು ಹೇಳಿದರು.

ಹೀಗಾಗಿ ಕೃಷ್ಣರಾಜ ಕ್ಷೇತ್ರದಲ್ಲಿ ಪಕ್ಷದ ನಿಷ್ಠಾವಂತರಾದ ಕೆ.ವಿ.ಮಲ್ಲೇಶ್ ಅವರಿಗೆ ಟಿಕೆಟ್ ಘೋಷಿಸಿದ್ದೇವೆ. ಅವರಿಗೆ ಎಲ್ಲಾ ಶಕ್ತಿಯನ್ನು ತುಂಬಲು ಪಕ್ಷ ಸಿದ್ಧವಿದೆ. ಕ್ಷೇತ್ರದ ಮತದಾರರು ಅವರನ್ನು ಗೆಲ್ಲಿಸಿಕೊಡುತ್ತೇನೆಂಬ ಮಾತು ನೀಡಿ. ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಸೇರಿದಂತೆ ನಾವೆಲ್ಲರೂ ಒಗ್ಗಟ್ಟಿನಿಂದ ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

ಸಭೆಯಲ್ಲಿ ಶಾಸಕರಾದ ಜಿ.ಟಿ. ದೇವೇಗೌಡ, ಸಾ.ರಾ.ಮಹೇಶ್, ಅಶ್ವಿನ್ ಕುಮಾರ್, ಎಂಎಲ್‍ಸಿ ಸಿ.ಎನ್.ಮಂಜೇ ಗೌಡ, ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ಕೆ.ವಿ. ಮಲ್ಲೇಶ್, ಜೆಡಿಎಸ್ ನಗರಾಧ್ಯಕ್ಷ ಕೆ.ಟಿ. ಚೆಲುವೇಗೌಡ, ಜಿಲ್ಲಾಧ್ಯಕ್ಷ ನರಸಿಂಹ ಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.

ಈಗಾಗಲೇ 6 ಜಿಲ್ಲೆಗಳಲ್ಲಿ 34 ಕ್ಷೇತ್ರಗಳಲ್ಲಿ ಪಂಚರತ್ನ ಯಾತ್ರೆ ಮಾಡಿದ್ದೇವೆ. ಈ ಪೈಕಿ 32-33 ಸ್ಥಾನ ಗಳಲ್ಲಿ ಜೆಡಿಎಸ್ ವಾತಾವರಣ ಕಾಣು ತ್ತಿದೆ. ಹೊಸ ಬದಲಾವಣೆ ತರಲು ರಾಜ್ಯದ ಜನತೆ ತೀರ್ಮಾನಿಸಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳ ಬಗ್ಗೆ ವೀರಶೈವ ಲಿಂಗಾಯತ ಸಮು ದಾಯದವರು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಬೇಕು. ಈ ನಿಟ್ಟಿನಲ್ಲಿ ಕೃಷ್ಣ ರಾಜ ಕ್ಷೇತ್ರದಲ್ಲೂ ನಿಮ್ಮ ಅಭ್ಯರ್ಥಿಯ ಗೆಲುವಿಗೆ ಸಂಪೂರ್ಣ ಸಹಕಾರ ನೀಡುವಂತೆ ವೀರಶೈವ ಲಿಂಗಾಯತ ಮುಖಂಡರಲ್ಲಿ ಮನವಿ ಮಾಡಿದ್ದೇನೆ.

Translate »