ರಾಜ್ಯದಲ್ಲಿ ಬಿಜೆಪಿ ಕೊನೆಯ ದಿನಗಳನ್ನು ಎಣಿಸುತ್ತಿದೆ
ಮೈಸೂರು

ರಾಜ್ಯದಲ್ಲಿ ಬಿಜೆಪಿ ಕೊನೆಯ ದಿನಗಳನ್ನು ಎಣಿಸುತ್ತಿದೆ

January 3, 2023

ಮೈಸೂರು, ಜ.2(ಆರ್‍ಕೆಬಿ)- ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ. ಜೆಡಿಎಸ್ ವಿರುದ್ಧ ಆಧಾರರಹಿತ ಮತ್ತು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವ ಮೂಲಕ ಬಿಜೆಪಿ ತನ್ನ ಸಮಾಧಿಯನ್ನು ತಾನೇ ತೋಡಿಕೊಳ್ಳುತ್ತಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಮೈಸೂರಿನ ಲಕ್ಷ್ಮೀಪುರಂನಲ್ಲಿರುವ ನೇರಂಬಳ್ಳಿ ಕನ್ವೆನ್ಷನ್ ಹಾಲ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಸಭೆಯಲ್ಲಿ ಅಮಿತ್ ಶಾ ಜೆಡಿಎಸ್ ಬಗ್ಗೆ ಸಾರ್ವಜನಿಕವಾಗಿ ಟೀಕೆ ಮಾಡಿದ್ದಾರೆ. ಜೆಡಿಎಸ್ ಪಕ್ಷವನ್ನು ಭ್ರಷ್ಟ, ಜಾತಿ ವಾದಿ, ಕುಟುಂಬ ಪಕ್ಷ ಎಂದೆಲ್ಲಾ ಜರಿದಿದ್ದಾರೆ. ರಾಜ್ಯ ನಮ್ಮ ಕುಟುಂಬದ ಎಟಿಎಂ ಎಂದಿ ದ್ದಾರೆ. ಯಾವುದಾದರೂ ಪ್ರಕರಣ ದಲ್ಲಿ ದೇವೇಗೌಡ ಪ್ರಧಾನಿ ಆಗಿದ್ದಾಗ, ನಾನು ಮುಖ್ಯಮಂತ್ರಿ ಆಗಿದ್ದಾಗ ಸರ್ಕಾರ ಖಜಾನೆ ಲೂಟಿ ಮಾಡಿದ್ದರೆ ಒಂದೇ ಒಂದು ಪ್ರಕರಣ ತೋರಿಸಲಿ. ಇಂದು ಬಿಜೆಪಿ ಲೂಟಿ ಮಾಡು ತ್ತಿರುವುದು ಎಲ್ಲರಿಗೂ ಗೊತ್ತಿದೆ ಎಂದು ಅಮಿತ್ ಶಾ ವಿರುದ್ಧ ಗುಡುಗಿದರು. ಮಂಡ್ಯಕ್ಕೆ ಅವರು 10 ಬಾರಿ ಅಲ್ಲ, ನೂರು ಬಾರಿ ಬಂದರೂ ಏನೂ ಆಗುವುದಿಲ್ಲ. ಮಂಡ್ಯಕ್ಕೆ ಅವರ ಕೊಡುಗೆ ಏನು, ಏರ್‍ಪೋರ್ಟ್ ಕೊಟ್ಟಿದ್ದಾರಾ, ಬಹಿರಂಗ ಚರ್ಚೆಗೆ ಬರಲಿ ಎಂದು ಅಮಿತ್ ಶಾಗೆ ಸವಾಲು ಹಾಕಿದರು.

ನಾವೇನೂ ನಿಮ್ಮ ಮನೆ ಬಾಗಿಲಿಗೆ ಬಂದಿಲ್ಲ: ಅಮಿತ್ ಶಾ ಅವರು ದೇವೇಗೌಡರ ಉಗು ರಿಗೂ ಸಮವಲ್ಲ. ದೇವೇಗೌಡರಾಗಲೀ, ನಾನಾಗಲೀ
ಸರ್ಕಾರದ ಹಣ ಲೂಟಿ ಮಾಡಿದ್ದರೆ ತೋರಿಸಲಿ. ಒಂದೇ ಒಂದು ಉದಾಹರಣೆ ನೀಡಲಿ ಎಂದು ಶಾ ವಿರುದ್ಧ ಗುಡುಗಿದ ಕುಮಾರಸ್ವಾಮಿ, ರಾಜ್ಯ ಬಿಜೆಪಿ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಹೀಗಿರುವಾಗ ಅವರು ನಮ್ಮ ಬಗ್ಗೆ ಮಾತ ನಾಡುತ್ತಿದ್ದಾರೆ. ಜೆಡಿಎಸ್ ಜತೆ ಹೊಂದಾ ಣಿಕೆ ಇಲ್ಲ ಅಂತ ಹೇಳಿದ್ದಾರೆ. ನಾವೇನು ಅವರ ಮನೆ ಬಾಗಿಲಿಗೆ ಹೋಗಿದ್ದೇವೆಯೇ ನಮ್ಮ ಪಕ್ಷವನ್ನು ನಾವು ಕಟ್ಟುತ್ತಿದ್ದೇವೆ. ಯಾರು ಅವರ ಬಳಿ ಅರ್ಜಿ ಹಾಕಿಕೊಂಡು ಹೋಗಿಲ್ಲ. ಬಿಜೆಪಿಯವರೇ ನಮ್ಮ ಮನೆ ಬಾಗಿಲಿಗೆ ಬಂದಿರೋದು ಎಂದು ಆಕ್ರೋಶ ದಿಂದ ನುಡಿದರು. ಜೆಡಿಎಸ್ ಪಕ್ಷ ಇದು ಕನ್ನಡಿಗರ, 6.5 ಕೋಟಿ ರೂ. ಕನ್ನಡಿಗರ ಪಕ್ಷ. ಹೊಂದಾಣಿಕೆ ಮಾಡಿಕೊಳ್ಳಲು ನಾನು ಬಿಜೆಪಿ ಅವರ ಮನೆ ಬಾಗಿಲಿಗೆ ಹೋಗಿಲ್ಲ. ನಾನು ಅಮಿತ್ ಶಾ ಮನೆಗೆ ಹೋಗಿದ್ದೇನೆಯೇ ಹೊಂದಾಣಿಕೆ ಬಗ್ಗೆ ಯಾಕೆ ಮಾತನಾಡುತ್ತಾರೆ. ನಾನು ಪಂಚರತ್ನ ಯಾತ್ರೆ ಮಾಡ್ತಿರೋದು ಯಾರ ಮನೆ ಬಾಗಿಲಿಗೂ ಹೋಗಲು ಅಲ್ಲ. ಮಾ.20ರವರೆಗೆ ಪಂಚರತ್ನ ಯಾತ್ರೆ ಮಾಡುತ್ತಿದ್ದೇನೆ. ದೇಶದಲ್ಲಿ 800ಕ್ಕೂ ಹೆಚ್ಚು ಶಾಸಕರನ್ನು ಖರೀದಿ ಮಾಡಿರುವ ಇತಿಹಾಸ ಇದ್ದರೆ ಅದು ಚುನಾವಣೆಗೂ ಮುನ್ನವೇ ಆಪರೇಷನ್ ಕಮಲ ಮಾಡಿದೆ. ಸಾಮಥ್ರ್ಯ ಇಲ್ಲದ ಕಡೆ ಖರೀದಿ ಮಾಡಲು ಈಗಾಗಲೇ ಬಿಜೆಪಿ ಹುನ್ನಾರ ನಡೆಸುತ್ತಿದೆ. ರಾಜ್ಯದಿಂದ ಬಿಜೆಪಿ ಪಕ್ಷವನ್ನು ಹೊರ ಹಾಕಲು ಜೆಡಿಎಸ್ ಪಣ ತೊಟ್ಟಿದೆ. ನಮ್ಮ ಪಕ್ಷವನ್ನು ಕೆಣಕಿದ್ದೀರಿ, ನಿಮ್ಮ ರಾಜ ಕಾರಣ ಉತ್ತರ ಭಾರತದಲ್ಲಿ ಇಟ್ಟುಕೊಳ್ಳಿ, ಕರ್ನಾಟಕದಲ್ಲಿ ಇನ್ನು ನಿಮ್ಮ ಆಟ ನಡೆಯುವುದಿಲ್ಲ ಎಂದು ಕುಮಾರಸ್ವಾಮಿ ಕಿಡಿ ಕಾರಿದರು.

Translate »