ಬಸವಣ್ಣನವರ `ಶರಣ ಪರಂಪರೆ’, `ಜಾತ್ಯಾತೀತ ತತ್ವ’ ಪಾಲಿಸುತ್ತಿರುವ ವೀರಶೈವ ಲಿಂಗಾಯತ ಸಮುದಾಯ
ಮೈಸೂರು

ಬಸವಣ್ಣನವರ `ಶರಣ ಪರಂಪರೆ’, `ಜಾತ್ಯಾತೀತ ತತ್ವ’ ಪಾಲಿಸುತ್ತಿರುವ ವೀರಶೈವ ಲಿಂಗಾಯತ ಸಮುದಾಯ

September 7, 2020

ಮೈಸೂರು, ಸೆ.6(ಎಸ್‍ಪಿಎನ್)- ವೀರ ಶೈವ ಲಿಂಗಾಯತ ಸಮುದಾಯ ಹಲವು ದಶಕಗಳಿಂದಲೂ ಬಸವಣ್ಣ ಪ್ರತಿಪಾದಿ ಸಿದ `ಶರಣ ಪರಂಪರೆ’ ಹಾಗೂ `ಜಾತ್ಯಾ ತೀತ ತತ್ವ’ಗಳನ್ನು ಪಾಲಿಸುತ್ತಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ನಂದೀಶ್ ಹಂಚೆ ಅಭಿಪ್ರಾಯಪಟ್ಟರು.

ಮೈಸೂರು ಜೆಎಸ್‍ಎಸ್ ಆಸ್ಪತ್ರೆ ಆವ ರಣದ ರಾಜೇಂದ್ರ ಭವನದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಯವರ 105ನೇ ಜಯಂತಿ ಅಂಗವಾಗಿ ಶ್ರೀಗಳ ಭಾವಚಿತ್ರಕ್ಕೆ ಹೂ ಚೆಲ್ಲಿ ನುಡಿ ನಮನ ಸಲ್ಲಿಸಿ, ಮಾತನಾಡಿದ ಅವರು, ನಮ್ಮ ಸಮು ದಾಯ ಎಲ್ಲಾ ವರ್ಗದೊಂದಿಗೆ ಬೆರೆತು ಬಸವಣ್ಣ ಕಾಯಕ ಸಂದೇಶದಂತೆ ಬದುಕು ತ್ತಿರುವುದು ಸಂತೋಷದ ಸಂಗತಿ ಎಂದರು.
ಸುತ್ತೂರು ಗುರು ಪರಂಪರೆ ಎಲ್ಲಾ ಸಮು ದಾಯದ ಯುವಕರನ್ನು ಶಿಕ್ಷಣದ ಮೂಲಕ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದೆ. ಇದರ ಪ್ರಯತ್ನವಾಗಿ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಜೀವಿತಾವಧಿ ಯಲ್ಲಿ ಜೆಎಸ್‍ಎಸ್ ಸಂಸ್ಥೆಯ ಎಲ್ಲಾ ನೌಕರ ರನ್ನು ವರ್ಷಕ್ಕೊಮ್ಮೆ ಒಂದೆಡೆ ಸೇರಿಸಿ ಮುಕ್ತ ವಾತಾವರಣ ನಿರ್ಮಿಸುತ್ತಿದ್ದರು. ಆ ವಾತಾವರಣದಲ್ಲಿ ಸಿಬ್ಬಂದಿ ವರ್ಗದವರ ನೋವು-ನಲಿವುಗಳನ್ನು ಕಾಣುತ್ತಿದ್ದ ಮಹಾ ಸಂತ ಎಂದು ಬಣ್ಣಿಸಿದರು.

ಅಪರಾಧ ಸಂಖ್ಯೆ ಕಡಿಮೆ: ಪ್ರಸ್ತುತ ರಾಜ ಕೀಯ ಪಕ್ಷಗಳು `ಜಾತ್ಯಾತೀತ ತತ್ವ’ವನ್ನು ಪ್ರತಿಪಾದಿಸುತ್ತಿವೆ. ಈ ತತ್ವವನ್ನು ನಮ್ಮ ಹಿರಿ ಯರು 12ನೇ ಶತಮಾನದಿಂದಲೂ ಅನು ಸರಿಸಿ ಅದರಂತೆ ಬದುಕು ಕಟ್ಟಿಕೊಂಡಿ ದ್ದಾರೆ. ಹಾಗಾಗಿ ವೀರಶೈವ ಲಿಂಗಾಯತ ಸಮಾಜ ಜಾಗೃತರಾಗಿರುವುದರಿಂದ ನಮ್ಮಲ್ಲಿ ಅಪರಾಧಗಳ ಸಂಖ್ಯೆ ಇಂದಿಗೂ ಬೆರಳೆಣಿಕೆಯಷ್ಟಿದೆ. ಸಮಾಜದ ನೌಕರರು 2-3 ವರ್ಷಗಳಿಂದ ಹಿರಿಯ ಅಧಿಕಾರಿ ಗಳು ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಪ್ರವಾಸ ಕೈಗೊಂಡ ಫಲವಾಗಿ ಇಂದು ಒಂದೇ ವೇದಿಕೆಯಡಿ ಕುಳಿತು ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿರುವುದು ಸಂತೋಷ ಸಂಗತಿ. ಇದನ್ನೇ ಹಿರಿಯ ಶ್ರೀಗಳು ಬಯಸಿದ್ದರು ಎಂದರು.

ಸಿದ್ಧಾಂತಗಳ ಜೊತೆಗೆ ಸಮಾಜ ಆರ್ಥಿಕ ವಾಗಿ ಸದೃಢವಾಗಿಸಲು ಕೃಷಿ ಇಲಾಖೆ ಹಿರಿಯ ಕೆಎಎಸ್ ಅಧಿಕಾರಿ ವಿಶ್ವನಾಥ್ ಪಿ.ಹಿರೇಮಠ್, ಪಶುಸಂಗೋಪನಾ ಇಲಾಖೆ ಸಚಿವರ ವಿಶೇಷಾಧಿಕಾರಿ ಡಾ.ಸುರೇಶ್ ಗೌಡ ಪಾಟೀಲ್ ಹಾಗೂ ಕಾನೂನು ಸಚಿ ವರ ವಿಶೇಷಾಧಿಕಾರಿ ಡಾ.ರವಿ ಎಂ. ತಿಲ್ಲಾಪುರ್ ನೇತೃತ್ವದಲ್ಲಿ ಸಮುದಾಯದ ನೌಕರರಿಗಾಗಿಯೇ ಉದ್ದೇಶಿತ `ಕರ್ನಾ ಟಕ ವೀರಶೈವ ಲಿಂಗಾಯತ ನೌಕರರ ಕ್ರೆಡಿಟ್ ಕೋ ಆಪರೇಟೀವ್ ಸೋಸೈಟಿ’ ನೋಂದಣಿ ಮಾಡಿಸಿ, ಸದಸ್ಯ ನೋಂದಣಿ ಅಭಿಯಾನ ಆರಂಭಿಸಿರುವುದು ಉತ್ತಮ ಬೆಳವಣಿಗೆ ಎಂದರು.

ವೀರಶೈವ ಲಿಂಗಾಯತ ನೌಕರರ ಸಂಘದ ಜಿಲ್ಲಾಧ್ಯಕ್ಷ ಹಾಗೂ ವಸತಿ ಸಚಿವರ ವಿಶೇಷಾಧಿಕಾರಿ ಎಂ.ಕೆ.ಸ್ವಾಮಿ ಮಾತ ನಾಡಿ, ನಮ್ಮ ಸಮುದಾಯದ ಕೆಳಹಂತ ನೌಕರರರು, ಬಡವರು, ರೈತರು, ಕಾರ್ಮಿ ಕರು ಹಾಗೂ ಸಮುದಾಯದವರು ಕಚೇ ರಿಗೆ ಬಂದರೆ ಪ್ರಥಮ ಆದ್ಯತೆ ಮೇರೆಗೆ ಎಲ್ಲಾ ಹಂತದ ಅಧಿಕಾರಿಗಳು ತಮ್ಮ ತಮ್ಮ ಹಂತದಲ್ಲಿ ಕಾನೂನು ವ್ಯಾಪ್ತಿಯಲ್ಲಿ ಅನು ಕೂಲ ಮಾಡಿಕೊಡುವಂತೆ ಮನವಿ ಮಾಡಿ ದರಲ್ಲದೆ, ಸುತ್ತೂರು ಗುರು ಪರಂಪರೆ ಎಲ್ಲ ವರ್ಗದ ಸರ್ಕಾರಿ ನೌಕರರ ಬೆನ್ನುಲು ಬಾಗಿ ನಿಂತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಇತ್ತೀಚೆಗೆ ಸರ್ಕಾರಿ ಸೇವೆ ಯಿಂದ ನಿವೃತ್ತರಾದ ಪಿಡಿಒ ಶಿವಯೋಗ, ಪ್ರಾಥಮಿಕ ಶಾಲಾ ಶಿಕ್ಷಕ ಗಂಗಾಧರ್, ಇಂಜಿನಿಯರ್ ಪ್ರಕಾಶ್, ಟೆಲಿಕಾಂ ಇಲಾಖೆ ಅಧಿಕಾರಿ ಅರುಣ್ ಬಿ.ನರಗುಂದ ಅವ ರನ್ನು ಸನ್ಮಾನಿಸಲಾಯಿತು.

ಈ ವೇಳೆ ಮೈಸೂರು ಅಪರ ಜಿಲ್ಲಾ ಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ, ಸಿಎಂಓ ವಿಶೇಷಾಧಿಕಾರಿ ಪ್ರಶಾಂತ ಕುಮಾರ್, ಇಂಧನ ಇಲಾಖೆ ಜೆಡಿ ರಾಜ್‍ಕುಮಾರ್ ಎಸ್.ಬಿರದಾರ್, ವಾಣಿಜ್ಯ ಇಲಾಖೆ ಎಸಿಸಿಟಿ ಸೋಮಶೇಖರ್, ಬೆಂಗಳೂರಿನ ಪೊಲೀಸ್ ಇನ್ಸ್‍ಪೆಕ್ಟರ್ ಪ್ರಶಾಂತ್ ಮಾಡಾಳ್, ಚಾಮರಾಜನಗರ ಡಿವೈಎಸ್ಪಿ ಪ್ರಿಯಾದರ್ಶಿನಿ ನಾಣಿಕೊಪ್ಪ, ಉನ್ನತ ಶಿಕ್ಷಣ ಇಲಾಖೆಯ ಪ್ರೊ.ಶಿವಪುಜಿ ಕೋಟಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗಂಗಪ್ಪ ಹೊಂಬಾಳ್, ಮಮತಾ ಪ್ರಾರ್ಥಿಸಿದರು.

Translate »