ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಮತ್ತೋರ್ವ ಆರೋಪಿ ಬಂಧಿಸಿದ ಸಿಸಿಬಿ
ಮೈಸೂರು

ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಮತ್ತೋರ್ವ ಆರೋಪಿ ಬಂಧಿಸಿದ ಸಿಸಿಬಿ

September 7, 2020

ಬೆಂಗಳೂರು, ಸೆ.6- ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಪ್ರಕ ರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ. ಪ್ರಶಾಂತ್ ರಂಕಾ ಬಂಧಿತ ಆರೋಪಿ. ಈತ ಸಿಲಿಕಾನ್ ಸಿಟಿಯಲ್ಲಿ ನಡೆ ಯುತ್ತಿದ್ದ ದೊಡ್ಡ ದೊಡ್ಡ ಪಾರ್ಟಿ ಗಳು ಹಾಗೂ ನಟಿ ರಾಗಿಣಿ ದ್ವಿವೇದಿ ಆಪ್ತ ಬಿ.ಕೆ.ರವಿಶಂಕರ್ ಇನ್ನಿತರ ಸೆಲೆ ಬ್ರಿಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಎನ್ನಲಾಗಿದೆ. ಪ್ರಶಾಂತ್ ರಂಕಾನ ಮುಂದಿನ ವಿಚಾರಣೆಯನ್ನು ನಡೆಸಲಾಗುತ್ತಿದೆ ಎಂದು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನಿತರ ಆರೋಪಿಗಳನ್ನು ಬಂಧಿಸಲು ಪೆÇಲೀಸರು ಪ್ರಯತ್ನ ನಡೆಸುತ್ತಿದ್ದಾರೆ.ಮಂಗಳೂರು ಮೂಲಕ ಮಹಿಳಾ ಡ್ರಗ್ಸ್ ಪೆಡ್ಲರ್ ಪೃಥ್ವಿ ಶೆಟ್ಟಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಪೃಥ್ವಿ ಹಾಗೂ ರವಿಶಂಕರ್ ಅವರನ್ನು ಒಟ್ಟಿಗೆ ವಿಚಾರಣೆ ನಡೆಸುವ ಸಾಧ್ಯತೆಯಿರು ವುದಾಗಿ ಮೂಲಗಳು ತಿಳಿಸಿವೆ.

ಶನಿವಾರ ಸಂಜೆ ಬಂಧಿಸಲಾಗಿರುವ ಆಫ್ರಿಕಾ ಪ್ರಜೆ ಲೊಮ್ ಪೆಪ್ಪರ್ ಸಾಂಬಾ ಮಾತೃ ಭಾಷೆ ಹೊರತುಪಡಿಸಿ ಇಂಗ್ಲೀಷ್ ಇನ್ನಿತರ ಭಾಷೆಗಳು ಬರುತ್ತಿಲ್ಲ ಎಂದು ನಾಟಕವಾಡು ತ್ತಿದ್ದಾನೆ ಎನ್ನಲಾಗಿದೆ. ರಾಜ್ಯ ಮಹಿಳಾ ಕಾರಾಗೃಹದಲ್ಲಿ ರಾಗಿಣಿಯ ವಿಚಾರಣೆ ಮುಂದು ವರೆದಿದ್ದು, ವಿಚಾರಣೆಗೆ ಆಕೆ ಸಹಕರಿಸುತ್ತಿಲ್ಲ, ಅಲ್ಲಿ ಮೂಲ ಸೌಕರ್ಯಗಳು ಸರಿಯಾಗಿಲ್ಲ, ಆರೋಗ್ಯ ಕೂಡಾ ಹದಗೆಟ್ಟಿರುವುದಾಗಿ ರಾಗಿಣಿ ಹೇಳುತ್ತಿದ್ದು, ಅಧಿಕಾರಿಗಳು ಆರೋಗ್ಯ ತಪಾಸಣೆ ವ್ಯವಸ್ಥೆ ಮಾಡಿದ್ದು, ವಿಚಾರಣೆ ಮುಂದುವರೆಸಿದ್ದಾರೆ. ಒಂದು ವೇಳೆ ಆಕೆ ಸಹಕರಿಸದಿದ್ದರೆ ಪೆÇಲೀಸ್ ಕಸ್ಟಡಿ ಅವಧಿ ವಿಸ್ತರಣೆಗೆ ನ್ಯಾಯಾಲಯವನ್ನು ಕೋರಲು ಅಧಿಕಾರಿಗಳು ಬಯಸಿದ್ದಾರೆ. ಈ ಮಧ್ಯೆ ಇಂದು ಬೆಳಗ್ಗೆ ಸಿಸಿಬಿ ಕಚೇರಿ ಬಳಿಗೆ ಆಗಮಿಸಿದ ವ್ಯಕ್ತಿಯೊಬ್ಬ ತನ್ನನ್ನು ಅರವಿಂದ್ ಎಂದು ಪರಿಚಯಿಸಿಕೊಂಡಿದ್ದು, ಮಾದಕ ಜಾಲ ಪ್ರಕರಣದಲ್ಲಿ 13ನೇ ಆರೋಪಿ ಎಂದು ಹೇಳಿಕೊಂಡಿದ್ದಾನೆ. ಮಾನಸಿಕ ಅಸ್ವಸ್ಥ ಅಥವಾ ಡ್ರಗ್ಸ್ ಪ್ರಭಾವದಿಂದ ಆತ ಈ ರೀತಿಯಲ್ಲಿ ನಡೆದುಕೊಂಡಿರಬಹುದೆಂದು ಸಿಸಿಬಿ ಅಧಿಕಾರಿಗಳು ಶಂಕಿಸಿದ್ದಾರೆ. ಆದಾಗ್ಯೂ, ಆತನ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

 

Translate »