ಮೈಸೂರು, ಮೇ 18(ಆರ್‍ಕೆ)- ಲಾಕ್‍ಡೌನ್ ಸಡಿಲಗೊಂಡು ಅಂತರ ಜಿಲ್ಲಾ ಪ್ರಯಾಣಕ್ಕೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಮೈಸೂರಿನ ಜಿಲ್ಲಾ ಗಡಿಯ ಎಲ್ಲಾ ಚೆಕ್‍ಪೋಸ್ಟ್‍ಗಳಲ್ಲಿ ವಾಹನ ತಪಾಸಣೆ ಕಾರ್ಯಾಚರಣೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ಈ ಮೊದಲಿದ್ದ ಕ್ಲಿಯರ್ ಪಾಸ್ ವ್ಯವಸ್ಥೆಯನ್ನು ರದ್ದುಪಡಿಸಿ ಸೇವಾ ಸಿಂಧು ಆ್ಯಪ್ ಮೂಲಕ ಆನ್‍ಲೈನ್‍ನಲ್ಲಿ ವಾಹನಗಳ ಮೂಲಕ ಖಾಸಗಿ ವ್ಯಕ್ತಿಗಳು ಅಂತರ ಜಿಲ್ಲಾ ಪ್ರಯಾಣಕ್ಕೆ ಅರ್ಜಿ ಸಲ್ಲಿಸಿ ಇ-ಪಾಸ್ ಪಡೆಯಲು ಅವಕಾಶ ನೀಡಿರುವುದ ರಿಂದ ಬೈಕು, ಕಾರು, ಟ್ಯಾಕ್ಸಿಗಳಲ್ಲಿ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಜನರು ಪ್ರಯಾಣಿಸುತ್ತಿರುವುದು ಕಂಡುಬಂದಿದೆ.
ಮೈಸೂರು-ಬೆಂಗಳೂರು ಹೆದ್ದಾರಿಯ ಸಿದ್ಧಲಿಂಗಪುರ ಸಮೀಪ ಮೈಸೂರು-ಮಂಡ್ಯ ಜಿಲ್ಲಾ ಗಡಿಯಲ್ಲಿ ಸ್ಥಾಪಿಸಿರುವ ಕೋವಿಡ್-19 ಚೆಕ್‍ಪೋಸ್ಟ್‍ನಲ್ಲಿ ಹೋಗುವ ಹಾಗೂ ಬರುವ ಎಲ್ಲಾ ಖಾಸಗಿ ವಾಹನಗಳನ್ನು ತಡೆದು ಪಾಸ್ ಅನ್ನು ಪರಿಶೀಲಿಸಲಾಗುತ್ತಿದೆ. ದ್ವಿಚಕ್ರ ವಾಹನದಲ್ಲಿ ಒಬ್ಬರು ಮಾತ್ರ ಮಾಸ್ಕ್ ಧರಿಸಿ ಪ್ರಯಾಣಿಸುತ್ತಿದ್ದಾ ರೆಯೇ ಎಂಬುದನ್ನು ಪೊಲೀಸರು ತಪಾಸಣೆ ಮಾಡುತ್ತಿದ್ದಾರೆ. ಅದೇ ವೇಳೆ ನಿಯಮ ಉಲ್ಲಂಘಿಸಿ ಬರುವ ವಾಹನಗಳನ್ನು ನಿರ್ದಾ ಕ್ಷಿಣ್ಯವಾಗಿ ವಾಪಸ್ ಕಳುಹಿಸಲಾಗುತ್ತಿದ್ದು, ಸಂಶಯ ಬಂದಲ್ಲಿ ತೀವ್ರ ತಪಾಸಣೆಗೊಳಪಡಿಸಲಾಗುತ್ತಿದೆ. ಆದರೆ ಕೃಷಿ ಸಂಬಂಧಿಸಿದ ವಾಹನ ಗಳು, ಹಣ್ಣು-ತರಕಾರಿ, ದಿನಸಿ ಸಾಗಿಸುವ ಸರಕು ವಾಹನಗಳನ್ನು ಮಾತ್ರ ಪೊಲೀಸರು ಮುಕ್ತವಾಗಿ ಸಂಚರಿಸಲು ಅವಕಾಶ ನೀಡು ತ್ತಿದ್ದಾರೆ. ಅದೇ ರೀತಿ ಹೊರ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಗಡಿಗಳ ಚೆಕ್‍ಪೋಸ್ಟ್‍ಗಳಲ್ಲೂ ಜಿಲ್ಲಾ ಪೊಲೀಸರು ವಾಹನಗಳನ್ನು ತಡೆದು, ದಿನದ 24 ಗಂಟೆಯೂ ತೀವ್ರ ತಪಾಸಣೆಗೊಳಪಡಿಸುತ್ತಿ ದ್ದಾರೆ. ಖಾಸಗಿಯವರು ಪಾಸ್, ಸರ್ಕಾರಿ ಅಧಿಕಾರಿಗಳಾದರೆ ಗುರು ತಿನ ಚೀಟಿಯನ್ನು ಕಡ್ಡಾಯವಾಗಿ ಚೆಕ್‍ಪೋಸ್ಟ್‍ಗಳಲ್ಲಿ ಪೊಲೀಸ ರಿಗೆ ತೋರಿಸಬೇಕು. ಪಾಸ್ ಇಲ್ಲದೇ ಹಲವು ದ್ವಿಚಕ್ರ ವಾಹನ ಸವಾರರು ಬಂದು ಚೆಕ್‍ಪೋಸ್ಟ್ ಕಂಡು ದೂರದಿಂದಲೇ ವಾಪಸ್ ಹೋಗಿ ಅಡ್ಡ ದಾರಿ ಹಿಡಿದು ಹೋಗುತ್ತಿರುವುದು ಕಂಡುಬರುತ್ತಿದೆ.