ಜೈವಿಕ ಇಂಧನದಲ್ಲಿ ಚಲಿಸಿದ ವಾಹನಗಳು
ಮೈಸೂರು

ಜೈವಿಕ ಇಂಧನದಲ್ಲಿ ಚಲಿಸಿದ ವಾಹನಗಳು

August 11, 2021

ಮೈಸೂರು, ಆ.10(ಆರ್‍ಕೆಬಿ)- ವಿಶ್ವ ಜೈವಿಕ ಇಂಧನ ದಿನದ ಅಂಗವಾಗಿ ಮೈಸೂರಿನ ಎನ್‍ಐಇ ಕಾಲೇಜಿನ ಜೈವಿಕ ಇಂಧನ ವಿಭಾಗದ ವತಿಯಿಂದ ಎರಡು ವಾಹನಗಳನ್ನು ಜೈವಿಕ ಇಂಧನ ತುಂಬಿಸಿ, ಓಡಿಸಲಾಯಿತು.

ಮೈಸೂರು ಜಿಲ್ಲಾ ಜೈವಿಕ ಇಂಧನ ಕೇಂದ್ರ (ಎನ್‍ಐಇ-ಕ್ರೆಸ್ಟ್), ಜಿಲ್ಲಾ ಪಂಚಾಯತ್ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಮಂಗಳವಾರ ಎನ್‍ಐಇ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ sಸಾಮಾಜಿಕ ಅರಣ್ಯ ಡಿಆರ್‍ಎಫ್‍ಓ ಶ್ರೀಧರ್, ಎನ್‍ಐಇ ಕಾಲೇಜಿನ ಪ್ರಾಂಶು ಪಾಲರಾದ ಡಾ.ಪುಷ್ಪಲತಾ ಅವರು ಜೀಪ್ ಮತ್ತು ಗೂಡ್ಸ್ ಆಟೋಗೆ ಜೈವಿಕ ಇಂಧನ ತುಂಬಿಸುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ವಾಹನದ ಎಂಜಿನ್ (ಬಿ10) ಶೇ.20ರಷ್ಟು ಜೈವಿಕ ಇಂಧನದ ಮೂಲಕ ಚಲಿಸಬಲ್ಲದು ಎಂಬುದರ ಪ್ರಾತ್ಯಕ್ಷಿಕೆ ನೀಡಿದರು.
ಎನ್‍ಐಇ ನವೀಕರಿಸಬಹುದಾದ ಇಂಧನ ಮತ್ತು ಸಮರ್ಥನೀಯ ತಂತ್ರ ಜ್ಞಾನ ಕೇಂದ್ರದ ಪ್ರೊ.ಶ್ಯಾಮಸುಂದರ್ ಅವರು ಜೈವಿಕ ಇಂಧನದ ಬಗ್ಗೆ ವಿವರಿ ಸಿದರು. ಹೊಂಗೆ ಬೀಜ ಮತ್ತು ಬೇವಿನ ಬೀಜ ಬಳಸಿ ಜೈವಿಕ ಇಂಧನ ತಯಾರಿಸ ಲಾಗುತ್ತದೆ. ರೈತರು ಮತ್ತು ವಾಣಿಜ್ಯೋ ದ್ಯಮಿಗಳು ಸುಸ್ಥಿರ ಶಕ್ತಿ ವಿಧಾನಗಳನ್ನು ಅಳವಡಿಸಿಕೊಳ್ಳಲು ಅವಕಾಶವಿದೆ. ರೈತರು ಹೊಂಗೆ ಮತ್ತು ಬೇವಿನ ಬೀಜಗಳನ್ನು ನೀಡಬಹುದಾಗಿದೆ. ಇದು ರೈತರಿಗೆ ಆದಾಯದ ಮೂಲವಾಗಿದೆ ಎಂದರು.

ಎನ್‍ಐಇ ಜೈವಿಕ ಇಂಧನ ಸ್ಥಾವರಗಳನ್ನು ಸ್ಥಾಪಿಸಲು ಉದ್ಯಮಿಗಳನ್ನು ಪ್ರೋತ್ಸಾ ಹಿಸುತ್ತಿದೆ. ಇದರಿಂದಾಗಿ ಸುಮಾರು 20 ಮಂದಿ ರಾಜ್ಯದ ವಿವಿಧ ಭಾಗಗಳಲ್ಲಿ ಜೈವಿಕ ಇಂಧನ ಉತ್ಪಾದನೆಯಲ್ಲಿ ತೊಡಗಿದ್ದಾರೆ. ಬೆಂಗಳೂರಿನಲ್ಲಿಯೇ ಸುಮಾರು 20,000 ಲೀಟರ್ ಜೈವಿಕ ಇಂಧನವನ್ನು ಪೀಣ್ಯದಲ್ಲಿ ಉತ್ಪಾದಿಸಲಾಗುತ್ತಿದೆ ಎಂದು ಹೇಳಿದರು. ಅರಣ್ಯಾಧಿಕಾರಿ ಶ್ರೀಧರ್ ಮಾತನಾಡಿ, ಆದಿವಾಸಿಗಳು ಜೈವಿಕ ಇಂಧನ ಉತ್ಪಾದನೆಯ ಒಂದು ಭಾಗವಾಗಿದ್ದಾರೆ. ಬಿಳಿಗಿರಿರಂಗನಬೆಟ್ಟ ಮತ್ತು ಹೆಚ್.ಡಿ.ಕೋಟೆಯ ಬುಡಕಟ್ಟು ಜನರು ಲ್ಯಾಂಪ್ಸ್ ಸೊಸೈಟಿಯ ಮೂಲಕ ಕಿರು ಅರಣ್ಯ ಉತ್ಪನ್ನಗಳನ್ನು ಪೂರೈಸು ತ್ತಿದ್ದಾರೆ. ಇದು ಅಸಾಂಪ್ರದಾಯಿಕ ಶಕ್ತಿ ಯನ್ನು ಉತ್ಪಾದಿಸಲು ಸಹಾಯವಾಗ ಲಿದೆ. ಮೈಸೂರು ಮತ್ತು ಚಾಮರಾಜ ನಗರದಲ್ಲಿರುವ ಆದಿವಾಸಿಗಳ ಆದಾಯದ ಮೂಲವಾಗಿದೆ ಎಂದರು. ಅಧಿಕಾರಿಗಳಾದ ಅಮ್ಜದ್ ಹುಸೇನ್, ಎಸ್‍ಐಆರ್‍ಡಿಯ ಮನೋಜ್ ಕುಮಾರ್, ಎನ್‍ಐಇ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಸುರೇಶ್ ಭೀಮಪ್ಪ, ಜಿಪಂ ಇಂಜಿ ನಿಯರ್ ಮುರ್ತಾಜ್ ಅಲಿ ಇನ್ನಿತ ರರು ಉಪಸ್ಥಿತರಿದ್ದರು.

Translate »