ಸಚಿವ ಈಶ್ವರಪ್ಪ ಆವಾಚ್ಯ ಪದ ಬಳಕೆ: ಕಾಂಗ್ರೆಸ್‍ ವಾಗ್ದಾಳಿ
News

ಸಚಿವ ಈಶ್ವರಪ್ಪ ಆವಾಚ್ಯ ಪದ ಬಳಕೆ: ಕಾಂಗ್ರೆಸ್‍ ವಾಗ್ದಾಳಿ

August 11, 2021

ಬೆಂಗಳೂರು, ಆ.10(ಕೆಎಂಶಿ)-ಕಾಂಗ್ರೆಸ್ ಮುಖಂಡರ ವಿರುದ್ಧ ಗ್ರಾಮೀಣ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಬಳಸಿದ ಪದ ಭಾರೀ ವಿವಾದ ಹುಟ್ಟುಹಾಕಿದೆ.

ವಿಧಾನಸೌಧದ ಸಮೀಪ ಸುದ್ದಿಗಾರರೊಂದಿಗೆ ಮಾತನಾ ಡುತ್ತಾ, ಕಾಂಗ್ರೆಸ್‍ನವರ ಹೇಳಿಕೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ‘ಯಾರೋ..ಕುಡುಕ, ಸೂ… ಮಕ್ಳು.. ಹೇಳುತ್ತಾರೆ..’ ಎಂದು ಕಿಡಿಕಾರಿದರು.

ತಕ್ಷಣವೇ ಮಾತಿನ ಭರದಲ್ಲಿ ಬಳಸಿದ ಅವಾಚ್ಯ ಶಬ್ದದಿಂದ ಎಚ್ಚೆತ್ತುಕೊಂಡು, ಅದು ಕೋಪದಲ್ಲಿ ಬಂತು, ಈ ಮಾತನ್ನು ವಾಪಸು ಪಡೆಯುತ್ತೇನೆ. ದಯವಿಟ್ಟು ಅದನ್ನು ಮುಂದುವರೆಸುವುದು ಬೇಡ ಎಂದರು. ಶಿವಮೊಗ್ಗದ ಬಿಜೆಪಿ ಕಾರ್ಯಕರ್ತರ ಸಭೆ ಯಲ್ಲಿ ಮಾತನಾಡಿದ ಅವರು, ಇನ್ನು ಹೆದರು ವುದು ಬೇಡ, ನೀವು ಯಾರ ತಂಟೆಗೂ ಹೋಗಬೇಡಿ, ನಿಮ್ಮ ತಂಟೆಗೆ ಬಂದರೆ ಬಿಡಬೇಡಿ, ಮೊದಲಿನಂತೆ ನಾವು ನಿಶ್ಯಕ್ತರಲ್ಲ, ಪಂಚಾಯತ್‍ನಿಂದ ಕೇಂದ್ರದವರೆಗೂ ನಮ್ಮದೇ ಅಧಿಕಾರ ಇದೆ, ಚಲಾಯಿಸಿ ಎಂದರು. ಈಶ್ವರಪ್ಪ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ತರಾಟೆಗೆ ತೆಗೆದು ಕೊಳ್ಳುತ್ತಿರುವುದನ್ನು ಪತ್ರಕರ್ತರು ಅವರ ಗಮನಕ್ಕೆ ತಂದಾಗ ಸಿಟ್ಟಿನಿಂದ ಅನಾಗರಿಕ ಪದ ಬಳಸಿ ನಂತರ ಹಿಂದಕ್ಕೆ ಪಡೆದರು.

ಈಶ್ವರಪ್ಪ ಇಂತಹ ಪದ ಬಳಕೆ ಮಾಡುತ್ತಿದ್ದಂತೆ ಕೋಪೋದ್ರಿಕ್ತಗೊಂಡ ಕಾಂಗ್ರೆಸ್ ನಾಯಕರು ಅವರನ್ನು ಸುಸಜ್ಜಿತ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸು ವಂತೆ ಹಾಗೂ ಸಂಪುಟದಿಂದ ವಜಾ ಮಾಡುವಂತೆ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರದೇಶ ಕಾಂಗ್ರೆಸ್‍ನ ಕಾರ್ಯಾಧ್ಯಕ್ಷ ಹಾಗೂ ಶಾಸಕ ರಾಮಲಿಂಗಾರೆಡ್ಡಿ, ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಸಂಸ್ಕøತಿ ಇಲ್ಲದವರು, ಅವರ ನಾಲಗೆಗೆ ಆಚಾರವೇ ಇಲ್ಲ, ಇಂತಹ ಭಾಷೆ ಬಳಸುವವರನ್ನು ಮಂತ್ರಿ ಸ್ಥಾನದಿಂದ ಮಾತ್ರವಲ್ಲ, ಪಕ್ಷದಿಂದಲೂ ಕಿತ್ತೊಗೆಯಬೇಕು ಎಂದಿದ್ದಾರೆ.

ಅವರ ತಂದೆ-ತಾಯಿ ಹೇಳಿಕೊಟ್ಟಿರುವುದು ಇದೇ, ಇದು ಬಿಜೆಪಿ ನಾಯಕರಿಗೆ ಅವಮಾನ ತರುವ ವಿಷಯ, ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

Translate »