- ಇಲ್ಲಿನ ಆಸ್ತಿ ಖಾತೆ ನೋಂದಣ , ವರ್ಗಾವಣೆ, ನಕ್ಷೆ ಅನುಮೋದನೆ, ಸಿಆರ್, ಉದ್ದಿಮೆ ರಹದಾರಿ ಎಲ್ಲವೂ ಪಾಲಿಕೆಯಿಂದಲೇ ನಿರ್ವಹಣೆ: ಆಯುಕ್ತರ ಆದೇಶ
ಮೈಸೂರು, ಅ. ೨೨-ಇತ್ತೀಚೆಗೆ ಶಾಸಕ ಜಿ.ಟಿ.ದೇವೇಗೌಡ ನೇತೃ ತ್ವದಲ್ಲಿ ನಡೆದ ಸಭೆಯ ಫಲಶೃತಿ ಯಾಗಿ ಮೈಸೂರಿನ ವಿಜಯನಗರ ೩ನೇ ಹಂತ ಬಡಾವಣೆಯ ಎಲ್ಲಾ ಆಸ್ತಿಗಳಿಗೆ ಖಾತಾ ನೋಂದಣ , ಖಾತಾ ವರ್ಗಾವಣೆ, ಕಟ್ಟಡ ನಕ್ಷೆ ಅನುಮೋದನೆ ಮತ್ತು ಕಟ್ಟಡ ಪೂರ್ಣಗೊಂಡ ಪ್ರಮಾಣ ಪತ್ರ ಹಾಗೂ ಉದ್ದಿಮೆ ರಹ ದಾರಿಯನ್ನು ಮೈಸೂರು ನಗರ ಪಾಲಿಕೆಯಿಂದ ನೀಡುವಂತೆ ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಈವರೆಗೆ ವಿಜಯನಗರ ೩ನೇ ಹಂತದ ಕೆಲ ಆಸ್ತಿಗಳ ಖಾತೆಗಳು ನಗರ ಪಾಲಿಕೆಯಲ್ಲಿ ನೋಂದಣ ಯಾಗದೇ ಹಿನಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿತ್ತು. ಪಾಲಿಕೆಯಿಂದ ಸ್ವಚ್ಛತೆ, ಕುಡಿಯುವ ನೀರು, ಒಳ ಚರಂಡಿ, ಬೀದಿ ದೀಪ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತಿದ್ದರೂ, ಪಾಲಿಕೆಯಲ್ಲಿ ಆಸ್ತಿ ನೋಂದಣ ಯಾಗದ ಕಾರಣ ಅಲ್ಲಿನ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಂಡ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ಸಮಸ್ಯೆಯನ್ನು ಪಾಲಿಕೆ ಮತ್ತು ಮುಡಾದಲ್ಲಿ ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ಜಿ.ಟಿ.ದೇವೇಗೌಡ, ಮೇಯರ್ ಸುನಂದಾ ಪಾಲನೇತ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಪಾಲಿಕೆ ಮತ್ತು ಮುಡಾ ಆಯುಕ್ತರ ಸಮ್ಮುಖದಲ್ಲಿ ಅ.೧೮ರಂದು ಸಭೆ ನಡೆಸಿ ವಿಜಯನಗರ ೩ನೇ ಹಂತದ ನಿವಾಸಿಗಳ ಬವಣೆ ನೀಗಿಸಲು ತೀರ್ಮಾನ ಕೈಗೊಳ್ಳ ಲಾಗಿತ್ತು. ಈ ಸಭೆಯ ನಡಾವಳಿ ಆಧರಿಸಿ ಅ.೨೧ರಂದು ಪಾಲಿಕೆ ಆಯುಕ್ತರು ವಿಜಯನಗರ ೩ನೇ ಹಂತದ ಆಸ್ತಿಗಳಿಗೆ ಸಂಬAಧ ಪಟ್ಟಂತೆ ಎಲ್ಲಾ ದಾಖಲಾತಿಗಳನ್ನೂ ಪಾಲಿಕೆಯಿಂದಲೇ ನಿರ್ವ ಹಿಸುವಂತೆ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಎಲ್ಲಾ ಆಸ್ತಿ ಕಡತಗಳು ಹಾಗೂ ಕಟ್ಟಡ ನಿರ್ಮಾಣ ಕಡತಗಳನ್ನು ಪಾಲಿಕೆಗೆ ಹಸ್ತಾಂತರಿಸುವAತೆ ಮುಡಾಗೆ ಪತ್ರ ರವಾನಿಸಿ, ಕೋರಿದ್ದಾರೆ.