ಮೈಸೂರಲ್ಲಿ ಜೋಡಿ ಕೊಲೆ
ಮೈಸೂರು

ಮೈಸೂರಲ್ಲಿ ಜೋಡಿ ಕೊಲೆ

October 23, 2021

ಗುರುವಾರ ರಾತ್ರಿ ತಂದೆ, ಅವರ ಜೊತೆ ಇದ್ದ ಮಹಿಳೆ ಹತ್ಯೆಗೈದ ಮಗ
ಮಹಿಳೆ ಕುಟುಂಬಕ್ಕೆ ಹಣಕಾಸು ನೆರವಿನ ಹಿನ್ನೆಲೆಯಲ್ಲಿ ಮತ್ಸರ
ಮೈಸೂರು ಹೊರ ವಲಯದ ರಮಾಬಾಯಿನಗರದಲ್ಲಿ ನಡೆದ ಕಗ್ಗೊಲೆ

ಮೈಸೂರು, ಅ.೨೨(ಆರ್‌ಕೆ)-ಯುವಕನೋರ್ವ ತನ್ನ ತಂದೆ ಹಾಗೂ ಅವರ ಜೊತೆಗಿದ್ದ ಮಹಿಳೆಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಗೈದು, ಮಹಿಳೆಯ ಪುತ್ರನ ಮೇಲೂ ಹಲ್ಲೆ ನಡೆಸಿದ ಘಟನೆ ಮೈಸೂರು ಹೊರ ವಲಯದ ರಮಾಬಾಯಿನಗರದ ಬಳಿಯ ಶ್ರೀನಗರ ಬಡಾವಣೆಯಲ್ಲಿ ಗುರುವಾರ ರಾತ್ರಿ ನಡೆದಿದೆ.

ಕೆ.ಜಿ.ಕೊಪ್ಪಲು ನಿವಾಸಿ ಶಿವಪ್ರಕಾಶ್ (೫೪), ಅವರ ಜೊತೆ ಇದ್ದ ೪೮ ವರ್ಷದ ಮಹಿಳೆ ಹತ್ಯೆಗೀಡಾದವರಾಗಿದ್ದು, ಆಕೆಯ ಪುತ್ರ ನಾಗಾರ್ಜುನ್ ತೀವ್ರವಾಗಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹತ್ಯೆ ನಡೆಸಿ ಪರಾರಿಯಾಗಿ ರುವ ಶಿವಪ್ರಕಾಶ್ ಪುತ್ರ ಸಾಗರ್ (೩೦) ಪತ್ತೆ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ವಿವರ: ಕೆ.ಜಿ.ಕೊಪ್ಪಲಿನ ಶಿವಪ್ರಕಾಶ್ ಜಮೀನ್ದಾರರಾಗಿದ್ದು, ಈ ಹಿಂದೆ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದರು. ೪ ಮನೆಗಳನ್ನು ಬಾಡಿಗೆಗೆ ನೀಡಿರುವ ಅವರು, ಲೇವಾ ದೇವಿಯನ್ನೂ ನಡೆಸುತ್ತಿದ್ದರು. ಪತ್ನಿ, ಪುತ್ರ ಹಾಗೂ ಪುತ್ರಿಯೊಂದಿಗೆ ಕೆ.ಜಿ.ಕೊಪ್ಪಲಿ ನಲ್ಲಿ ನೆಲೆಸಿದ್ದರು. ಈತ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದಾಗ ಸುಮಾರು ೧೦ ವರ್ಷದ ಹಿಂದೆ ಮೃತಪಟ್ಟ ಚಾಲಕನ ಸಂಸಾರಕ್ಕೆ ಸಹಾಯ ಮಾಡುತ್ತಿದ್ದರು ಎಂದು ಹೇಳ ಲಾಗಿದೆ. ಬಸ್ ಚಾಲಕನ ವಿಧವಾ ಪತ್ನಿ ಹಾಗೂ ಅವರ ಮಕ್ಕಳಿಗೆ ಶಿವಪ್ರಕಾಶ್ ಸಹಾಯ ಮಾಡುತ್ತಿರುವುದಕ್ಕೆ ಸಾಗರ್ ವಿರೋಧ ವ್ಯಕ್ತಪಡಿಸುತ್ತಿದ್ದ ಎಂದು ಹೇಳಲಾಗಿದೆ. ಈ ಸಂಬAಧ ಮನೆಯಲ್ಲಿ ಆಗಾಗ ಜಗಳವೂ ಆಗಿತ್ತು ಎನ್ನಲಾಗಿದೆ. ಈ ಮಧ್ಯೆ ಸಾಗರ್ ಮಾಡಿದ್ದ ಸಾಲವನ್ನೂ ಶಿವಪ್ರಕಾಶ್ ತೀರಿಸಿದ್ದರೆನ್ನಲಾಗಿದೆ. ಗುರು ವಾರ ರಾತ್ರಿ ಮನೆಯಿಂದ ಹೊರ ಹೋದ ಶಿವಪ್ರಕಾಶ್, ಶ್ರೀನಗರ ಬಡಾವಣೆಯ ಮಹಿಳೆ ಮನೆಗೆ ಹೋಗಿದ್ದಾರೆ. ಅಲ್ಲಿಗೆ ತೆರಳಿದ ಸಾಗರ್, ಮನೆ ಬಾಗಿಲು ಬಡಿ ದಿದ್ದಾನೆ. ಶಿವಪ್ರಕಾಶ್ ಬಾಗಿಲು ತೆರೆಯು ತ್ತಿದ್ದಂತೆಯೇ ಏಕಾಏಕಿ ಅವರ ಮೇಲೆ ಮಚ್ಚು ಬೀಸಿದ್ದಾನೆ ಎನ್ನಲಾಗಿದ್ದು, ಆತ ನಿಂದ ತಪ್ಪಿಸಿಕೊಳ್ಳಲು ಹೊರಗೆ ಓಡಿದ ಶಿವಪ್ರಕಾಶ್‌ರನ್ನು ಅಟ್ಟಾಡಿಸಿಕೊಂಡು ಕೊಚ್ಚಿ ಕೊಲೆ ಮಾಡಿದ್ದಾನೆ. ಆ ವೇಳೆ ಅರಚಾಡುವುದನ್ನು ಕೇಳಿ ಮನೆಯಿಂದ ಹೊರ ಬಂದ ಮಹಿಳೆಯನ್ನೂ ಕೊಚ್ಚಿ ಹತ್ಯೆಗೈದಿದ್ದಾನೆ. ಈ ವೇಳೆ ಅವರ ರಕ್ಷಣೆಗೆ ಮುಂದಾದ ಮಹಿಳೆ ಪುತ್ರ ನಾಗಾರ್ಜು ನನ ಮೇಲೆ ಮಚ್ಚಿನಿಂದ ಸಾಗರ್ ಹಲ್ಲೆ ನಡೆಸಿದನಾದರೂ, ಆತನಿಂದ ತಪ್ಪಿಸಿ ಕೊಳ್ಳುವಲ್ಲಿ ನಾಗಾರ್ಜುನ್ ಯಶಸ್ವಿಯಾಗಿ ದ್ದಾನೆಂದು ಹೇಳಲಾಗಿದೆ. ಈಗ ನಾಗಾರ್ಜು ನನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾ ಎಸ್ಪಿ ಆರ್.ಚೇತನ್, ಅಡಿಷನಲ್ ಎಸ್ಪಿ ಶಿವಕುಮಾರ್, ಡಿವೈಎಸ್‌ಪಿ ಸುನೀಲ್, ಮೈಸೂರು ದಕ್ಷಿಣ ಠಾಣೆ ಇನ್ಸ್ಪೆಕ್ಟರ್ ಶಶಿಕುಮಾರ್ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದ್ದಾರೆ. ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಸಾಕ್ಷö್ಯಗಳನ್ನು ಕಲೆ ಹಾಕಿದ್ದಾರೆ. ಹತ್ಯೆಗೀಡಾದ ಮಹಿಳೆಯ ಅಳಿಯ ಜಯಶಂಕರ್ ನೀಡಿದ ದೂರು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿರುವ ಮಹಿಳೆಯ ಪುತ್ರ ನಾಗಾ ರ್ಜುನ್ ನೀಡಿದ ಹೇಳಿಕೆಯನ್ವಯ ಪ್ರಕ ರಣ ದಾಖಲಿಸಿಕೊಂಡಿರುವ ಮೈಸೂರು ದಕ್ಷಿಣ ಠಾಣೆಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ತನ್ನ ಟ್ರಾವೆಲ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ೧೦ ವರ್ಷದ ಹಿಂದೆ ಮೃತಪಟ್ಟಿದ್ದ ಚಾಲಕನ ಪತ್ನಿಯ ಸಂಸಾರಕ್ಕೆ ಸಹಾಯ ಮಾಡುತ್ತಿದ್ದ ಶಿವಪ್ರಕಾಶ್, ಆಕೆಯೊಂದಿಗೆ ಸಂಬAಧ ವಿರಿಸಿಕೊಂಡು ತಾನು ಸಂಪಾದನೆ ಮಾಡಿದ್ದನ್ನೆಲ್ಲಾ ಆಕೆಗಾಗಿಯೇ ನೀಡುತ್ತಿ ದ್ದರು. ಆಕೆಯ ಕುಟುಂಬಕ್ಕೆ ಎಲ್ಲಾ ರೀತಿಯ ಅನುಕೂಲಗಳನ್ನು ಮಾಡಿಕೊಡುತ್ತಿದ್ದಾರೆ ಅಂದುಕೊAಡು ಸಾಗರ್, ತನ್ನ ತಂದೆ ಮತ್ತು ಮಹಿಳೆಯನ್ನು ಹತ್ಯೆಗೈದಿದ್ದಾನೆ ಎಂದು ಮಹಿಳೆಯ ಅಳಿಯ ಜಯಶಂಕರ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
-ಆರ್.ಚೇತನ್, ಮೈಸೂರು ಎಸ್ಪಿ

Translate »