ಪಾಂಡವಪುರ ರೈಲು ನಿಲ್ದಾಣದ ಬಳಿ ಚಲಿಸುವ ರೈಲು ಮುಂದೆ ಹಾರಿ ಮೈಸೂರು ಬಟ್ಟೆ ವ್ಯಾಪಾರಿ ಆತ್ಮಹತ್ಯೆ
ಮೈಸೂರು

ಪಾಂಡವಪುರ ರೈಲು ನಿಲ್ದಾಣದ ಬಳಿ ಚಲಿಸುವ ರೈಲು ಮುಂದೆ ಹಾರಿ ಮೈಸೂರು ಬಟ್ಟೆ ವ್ಯಾಪಾರಿ ಆತ್ಮಹತ್ಯೆ

October 23, 2021

ಮೈಸೂರು, ಅ. ೨೨(ಆರ್‌ಕೆ)- ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಮೈಸೂರಿನ ಬಟ್ಟೆ ವ್ಯಾಪಾರಿ ಆತ್ಮಹತ್ಯೆ ಮಾಡಿಕೊಂಡಿ ರುವ ಘಟನೆ ಗುರುವಾರ ಸಂಜೆ ಪಾಂಡವಪುರ ರೈಲು ನಿಲ್ದಾಣದ ಸಮೀಪ ಸಂಭವಿಸಿದೆ.

ಮೈಸೂರಿನ ಸುಣ್ಣದಕೇರಿಯ ನಾಲಾಬೀದಿ ನಿವಾಸಿ ಲೇಟ್ ಟಿ.ಶ್ರೀನಿವಾಸ ಅವರ ಮಗ ಎಸ್.ಮಾಣ ಕ್ಯಂ (೫೨), ರೈಲಿನ ಮುಂದೆ ಹಾರಿ, ಆತ್ಮಹತ್ಯೆ ಮಾಡಿ ಕೊಂಡವರಾಗಿದ್ದಾರೆ. ಮೈಸೂರಿನ ಲಷ್ಕರ್ ಮೊಹಲ್ಲಾ ಕುಂಬಾರಗೇರಿಯ ಉಮಾ ಟಾಕೀಸ್ ರಸ್ತೆಯಲ್ಲಿ ಎಸ್. ಮಾಣ ಕ್ಯಂ ಸೀರೆ ವ್ಯಾಪಾರದ ಅಂಗಡಿ ಹೊಂದಿದ್ದು, ಅವರ ಮೃತದೇಹ ಪಾಂಡವಪುರ ರೈಲು ನಿಲ್ದಾಣದ ಬಳಿಯ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ(ಪಿಎಸ್‌ಎಸ್‌ಕೆ) ಹಿಂಭಾಗ ನಿನ್ನೆ ಸಂಜೆ ಪತ್ತೆಯಾಗಿದೆ.

ಗುರುವಾರ ಸಂಜೆ ಮೈಸೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಟ್ಯುಟಿಕಾರನ್ ರೈಲು ಪಿಎಸ್‌ಎಸ್‌ಕೆ ಬಳಿ ಬರುತ್ತಿದ್ದಂತೆ ಮಾಣ ಕ್ಯಂ ದಿಢೀರ್ ಹಳಿ ಮೇಲೆ ಹಾರಿದ್ದಾರೆ. ಮುಂದೆ ಪಾಂಡವಪುರ ರೈಲು ನಿಲ್ದಾಣವಿದ್ದಿದ್ದರಿಂದ ರೈಲಿನ ವೇಗ ತಗ್ಗಿತ್ತು. ಹಾಗಾಗಿ ಲೊಕೊ ಪೈಲಟ್ ರೈಲು ನಿಲ್ಲಿಸಿ, ಮೈಸೂರು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿ, ಹಳಿ ಮೇಲಿದ್ದ ಮಾಣ ಕ್ಯ ದೇಹವನ್ನು ಪಕ್ಕಕ್ಕೆ ಸರಿಸಿ ಪ್ರಯಾಣ ಮುಂದುವರೆಸಿದ. ಮೈಸೂರು ರೈಲ್ವೇ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಮಾಣ ಕ್ಯಂ ಅವರ ಬಲ ಮುಂಗಾಲು ತುಂಡರಿಸಿದ್ದು, ತಲೆ ಭಾಗದಲ್ಲಿ ಗಾಯವಾಗಿ ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿರುವುದು ತಿಳಿಯಿತು. ಪ್ಯಾಂಟ್ ಜೇಬಿನಲ್ಲಿ ಲಭ್ಯವಾದ ಅಂಗಡಿ ವಿಸಿಟಿಂಗ್ ಕಾರ್ಡ್ನಲ್ಲಿದ್ದ ಮೊಬೈಲ್ ಸಂಖ್ಯೆಗೆ ಫೋನ್ ಮಾಡಿ ಪುತ್ರ ಚೇತನ್‌ಗೆ ವಿಷಯ ತಿಳಿಸಿದ ರೈಲ್ವೇ ಪೊಲೀಸರು, ಮಹಜರು ನಡೆಸಿ ಮೃತದೇಹವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರಕ್ಕೆ ಸ್ಥಳಾಂತರಿಸಿದರು. ಮಾಮೂಲಿ ನಂತೆ ಸೀರೆ ವ್ಯಾಪಾರದ ಬಾಕಿ ಹಣ ವಸೂಲಿ ಮಾಡಿಕೊಂಡು ಬರುತ್ತೇನೆಂದು ಹೇಳಿ ಗುರುವಾರ ಬೆಳಗ್ಗೆ ೧೦-೧೫ ಗಂಟೆಗೆ
ಅಂಗಡಿಯಿAದ ಹೊರ ಹೋಗಿದ್ದ ಮಾಣ ಕ್ಯಂ ಅವರು, ಸಂಜೆ ೫ ಗಂಟೆಗೆ ತಾನು ವಾಪಸ್ಸಾಗುತ್ತಿರುವುದಾಗಿ ಪುತ್ರ ಚೇತನ್‌ಗೆ ಹೇಳಿದ್ದರು. ಆದರೆ ರಾತ್ರಿಯಾದರೂ ತಂದೆ ಮನೆಗೆ ಬರದಿದ್ದಾಗ, ಚೇತನ್ ಫೋನ್ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎಂದು ಸಂಬAಧಿಕರು ತಿಳಿಸಿದ್ದಾರೆ. ಯಾರೋ ಮಾಣ ಕ್ಯಂರನ್ನು ಹತ್ಯೆ ಮಾಡಿರಬಹುದೆಂದು ಸಂಶಯ ವ್ಯಕ್ತವಾಗಿತ್ತಾದರೂ, ಇದ್ದಕ್ಕಿದಂತೆ ಹಳಿ ಮೇಲೆ ಬಂದ ವ್ಯಕ್ತಿ, ಎಷ್ಟೇ ಹಾರನ್ ಮಾಡಿದರೂ ಜಗ್ಗಲಿಲ್ಲ ಎಂದು ರೈಲು ಚಾಲಕರೇ ಮಾಹಿತಿ ನೀಡಿರುವುದರಿಂದ ಆತ್ಮಹತ್ಯೆ ಪ್ರಕರಣ ದಾಖಲು ಮಾಡಲಾಗಿದೆ ಎಂದು ಮೈಸೂರು ರೈಲ್ವೇ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

Translate »