ನಮ್ಮ ಗೆಳೆತನದಲ್ಲಿ `ನೋ ಪಾಲಿಟಿಕ್ಸ್’; ಎಲ್ಲವೂ ಮುಕ್ತ… ಮುಕ್ತ…!
ಮೈಸೂರು

ನಮ್ಮ ಗೆಳೆತನದಲ್ಲಿ `ನೋ ಪಾಲಿಟಿಕ್ಸ್’; ಎಲ್ಲವೂ ಮುಕ್ತ… ಮುಕ್ತ…!

October 23, 2021

ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ, ಶಾಸಕರಾದ ಜಿಟಿಡಿ ಪುತ್ರ ಹರೀಶ್‌ಗೌಡ, ಮಹದೇವ್ ಪುತ್ರ ಪ್ರಸನ್ನ, ಪುಟ್ಟರಾಜು ಪುತ್ರ ಶಿವರಾಜ್ ಸಮಾಗಮ ಸಂಭ್ರಮ

ರಾಜಕೀಯವಾಗಿ ಆರಂಭವಾಗಿದೆ ಹೊಸ ವಿಶ್ಲೇಷಣೆ

ಮೈಸೂರು,ಅ.೨೨(ಎಂಟಿವೈ)- ನಮ್ಮ ಹಿರಿಯರ ರಾಜಕೀಯ ಮುನಿಸು, ಭಿನ್ನಾಭಿಪ್ರಾಯ ನಮಗೆ ಸಂಬAಧಿಸಿದ್ದಲ್ಲ. ಅದಕ್ಕೂ ನಮಗೂ ಸಂಬAಧವಿಲ್ಲ. ನಮ್ಮದೇನಿದ್ದರೂ ಮುಕ್ತ… ಮುಕ್ತ… ಮುಕ್ತ… ನಮಗ್ಯಾವ ಅಡ್ಡಿ ಆತಂಕಗಳಿಲ್ಲ. ನಾವು ಒಳ್ಳೆಯ ಸ್ನೇಹಿತರು, ಚೆನ್ನಾಗಿದ್ದೇವೆ. ಈಗ, ಮುಂದೆಯೂ…!!

ರಾಜಕೀಯ ಬಿನ್ನಾಭಿಪ್ರಾಯದಿಂದ ಅಂತರ ಕಾಯ್ದುಕೊಂಡಿರುವ ಜೆಡಿಎಸ್ ನಾಯಕರ ಪುತ್ರರು ಶುಕ್ರವಾರ ಒಟ್ಟಿಗೆ ತಾಯಿ ಚಾಮುಂಡೇಶ್ವರಿಯ ದರ್ಶನ ಮಾಡುವ ಮೂಲಕ ಗೆಳೆತನದ ಮೌಲ್ಯ ಹಾಗೂ ಗಟ್ಟಿತನವನ್ನು ಸಾಬೀತುಪಡಿಸುವುದರ ಜೊತೆಗೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಯನ್ನೂ ಹುಟ್ಟುಹಾಕಿದ್ದಾರೆ.
ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡು ಪಕ್ಷ ತ್ಯಜಿಸುವ ಸಂದೇಶವನ್ನು ವರಿಷ್ಠರಿಗೆ ರವಾನಿಸಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರ ಪುತ್ರ, ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಹಾಗೂ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ ಸ್ವಾಮಿ ಜೊತೆ ಚಾಮುಂಡಿ ಬೆಟ್ಟಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿದರು. ಇವರಿಗೆ ಪಿರಿಯಾಪಟ್ಟಣ ಶಾಸಕ ಕೆ.ಮಹ ದೇವ್ ಪುತ್ರ, ಮೈಮುಲ್ ಅಧ್ಯಕ್ಷ ಪ್ರಸನ್ನ ಹಾಗೂ ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು ಪುತ್ರ ಶಿವರಾಜ್ ಸಾಥ್ ನೀಡಿದರು. ಈ ನಾಲ್ವರು ನಾಯಕರ ಪುತ್ರರು ಒಟ್ಟಾಗಿ ಕಾಣ ಸಿಕೊಂಡ ಅಪರೂಪದ ಕ್ಷಣ, ಸ್ನೇಹಬಂಧದ ಸೆಳೆತವನ್ನು ಸಮಾಜದ ಮುಂದೆ ತೆರೆದಿಟ್ಟಂತಿತ್ತು. ಅಲ್ಲದೆ ಜೆಡಿಎಸ್ ಟೀಕಿಸುವವರಿಗೂ ಪರೋಕ್ಷವಾಗಿ ಯುವ ಶಕ್ತಿಯ ಬಗ್ಗೆ ಎಚ್ಚರಿಕೆ ನೀಡಿದಂತಿತ್ತು.

ಜೆಡಿಎಸ್ ಹೊಸ ಪ್ಲಾನ್?: `ರಾಜ ಕೀಯದಲ್ಲಿ ಶಾಶ್ವತವಾಗಿ ಯಾರೂ ಮಿತ್ರರೂ ಅಲ್ಲ, ಶತ್ರುವೂ ಅಲ್ಲ’ ಎಂಬ ಮಾತು ಸಹಜ. ಆದರೆ ಪ್ರತಿಯೊಂದು ಸನ್ನಿವೇಶದ ಹಿಂದೆಯೂ ಏನಾದರೂ ಇದ್ದೇ ಇರುತ್ತದೆ. ಅನಿರೀಕ್ಷಿತ ಬೆಳವಣ ಗೆಯಾದಾಗ ಅದರ ಬಗ್ಗೆ ವಿವಿಧ ಆಯಾಮಗಳಲ್ಲಿ ಚರ್ಚೆ ನಡೆಯುತ್ತದೆ. ಇದಕ್ಕೆ ನಾಲ್ವರು ನಾಯಕರ ಪುತ್ರರ ಭೇಟಿಯೂ ಹೊರತಾಗಿಲ್ಲ. ರಾಜಕೀಯ ಬೆಳವಣ ಗೆ, ಭಿನ್ನಾಭಿಪ್ರಾಯ ದಿಂದ ಅಂತರ ಕಾಯ್ದುಕೊಂಡಿರುವ ಹಿರಿ ಯರು, ಮತ್ತೆ ಒಟ್ಟಾಗಿ ಮುಂದುವರೆ ಯಲು ನಿರ್ಧರಿಸಿದ್ದಾರೆ. ಇದಕ್ಕೆ ಪೂರ್ವ ಭಾವಿ ಯಾಗಿ ಭವಿಷ್ಯ ನಾಯಕರು ಒಗ್ಗೂಡಿದ್ದಾರೆ. ಮುಂದಿನ ದಿನಗಳಲ್ಲಿ ಮಕ್ಕಳ ಮೂಲಕವೇ ಹಿರಿಯರ ಪುನರ್ಮಿಲನವಾಗಬಹುದು. ಪ್ರಸ್ತುತದ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶಿಸುವ ಉದ್ದೇಶದಿಂದ ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹೆಣೆದಿರುವ ಹೊಸ ಯೋಜನೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹಿರಿಯರ ವಾಕ್ಸಮರ: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಖಾತೆ ಹಂಚಿಕೆ ವಿಚಾರದಲ್ಲಿ ಹಿರಿಯ ಶಾಸಕ ಜಿ.ಟಿ.ದೇವೇಗೌಡರು ಅಸಮಾಧಾನ ಹೊರ ಹಾಕಿದ್ದರು. ನಂತರದ ದಿನಗಳಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರು ಪರೋಕ್ಷವಾಗಿ ಟಾಂಗ್ ನೀಡಲಾರಂಭಿಸಿದರು. ಹೀಗೆ ಮುಂದು ವರೆದು ಉಭಯ ನಾಯಕರ ನಡುವೆ ವಾಕ್ಸಮರವೂ ನಡೆದಿತ್ತು. ಇತ್ತೀಚೆಗೆ ಕಾಂಗ್ರೆಸ್ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಮಾತನಾಡಿರುವುದನ್ನು ಬಹಿರಂಗಗೊಳಿಸುವ ಮೂಲಕ ಜೆಡಿಎಸ್ ತೊರೆ ಯುವ ಸಂದೇಶವನ್ನು ವರಿಷ್ಠರಿಗೆ ಜಿಟಿಡಿ ರವಾನಿಸಿದ್ದರು. ಈ ಬಗ್ಗೆ ಮೈಸೂರಿ ನಲ್ಲೇ ಪ್ರತಿಕ್ರಿಯಿಸಿದ ಹೆಚ್.ಡಿ.ದೇವೇಗೌಡರು, ಜಿಟಿಡಿ ಪಕ್ಷ ಬಿಟ್ಟಿದ್ದಾರಾ? ಎಂದು ಮಾಧ್ಯಮ ದವರನ್ನೇ ಪ್ರಶ್ನಿಸಿದ್ದರ ಹೊರತಾಗಿ ಜಿಟಿಡಿ ವಿರುದ್ಧವಾಗಿ ಮಾತನಾಡಿರಲಿಲ್ಲ. ಬದಲಾಗಿ ಪಕ್ಷದಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ. ಎಂಬ ಮಾತುಗಳು ಕೇಳಿಬಂದಿದ್ದವು. ಅತ್ತ ಊಹಾಪೋಹಗಳನ್ನು ಪುಷ್ಟೀಕರಿ ಸುವಂತೆ ಪಿರಿಯಾಪಟ್ಟಣ ಶಾಸಕ ಕೆ.ಮಹದೇವ್ ಹಾಗೂ ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು ಪಕ್ಷದ ನಾಯಕರೊಟ್ಟಿಗೆ ಕಾಣ ಸಿ ಕೊಂಡಿರಲಿಲ್ಲ. ಈ ಎಲ್ಲಾ ಬೆಳವಣ ಗೆಯಿಂದ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಶಕ್ತಿ ಕಳೆದುಕೊಳ್ಳುವ ಮುನ್ಸೂಚನೆ ಅರಿತ ಹೆಚ್.ಡಿ.ದೇವೇಗೌಡರು, ಎಲ್ಲಾ ನಾಯ ಕರ ಅಸಮಾಧಾನವನ್ನು ಉಪಶಮನ ಮಾಡಿ, ಪಕ್ಷ ಸಂಘಟಿಸುವ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ಕುಮಾರಸ್ವಾಮಿ ಹೇಳಿದ್ದರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗಳು ಕೆಲವೊಮ್ಮೆ ಮಾರ್ಮಿಕವಾಗಿರುತ್ತವೆ. ಹಾಗೆಯೇ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಮೈಸೂರು ಭಾಗದಲ್ಲಿ ಸಂಘಟನೆ ಆರಂಭಿ ಸುವುದಾಗಿ ಹೇಳಿದ್ದರು. ಇದಕ್ಕೆ ಪೂರಕ ವಾಗಿ ಇಂದು ನಾಲ್ವರು ನಾಯಕರ ಪುತ್ರರು ಚಾಮುಂಡಿಬೆಟ್ಟದಲ್ಲಿ ಒಟ್ಟಾಗಿ ಕಾಣ ಸಿಕೊಂಡಿದ್ದಾರೆ. ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜಿ.ಟಿ.ದೇವೇಗೌಡರು ಪಕ್ಷದಲ್ಲೇ ಉಳಿಯಲಿದ್ದಾರೆ ಎಂದು ಪ್ರತಿಪಾದಿಸಿದ್ದರು. ಕೆಲ ದಿನಗಳÀ ಹಿಂದೆಯಷ್ಟೇ ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ, ಜಿಟಿಡಿಯವರ ಪತ್ನಿ ಲಲಿತಾ ಜಿ.ಟಿ.ದೇವೇಗೌಡ ಅವರನ್ನು ಭೇಟಿ ಮಾಡಿ ಕುಶಲೋಪರಿ ನಡೆಸಿದ್ದರು.

ಆತ್ಮೀಯ ಸ್ವಾಗತ: ನಿಖಿಲ್ ಹಾಗೂ ಹರೀಶ್‌ಗೌಡ ಚಾಮುಂಡಿಬೆಟ್ಟಕ್ಕೆ ಆಗಮಿ ಸುತ್ತಿದ್ದಂತೆ ಅವರ ಅಬಿಮಾನಿಗಳು ಇಬ್ಬರಿಗೂ ಹಾರ ಹಾಕಿ ಸನ್ಮಾನಿಸಿ, ಆತ್ಮೀಯವಾಗಿ ಬರಮಾಡಿಕೊಂಡರು.

ರಾಜಕೀಯ ಮಾತನಾಡಿಲ್ಲ ಎಂದ ಗೆಳೆಯರು
ಮೈಸೂರು: ದೇವರ ದರ್ಶನ ಪಡೆದ ಬಳಿಕ ಪತ್ರಕರ್ತರೊಂದಿಗೆ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ನಾನು ಅಭಿನಯಿಸಿರುವ ಹೊಸ ಚಿತ್ರ `ರೈಡರ್’ ತಂಡಕ್ಕೆ ಒಳಿತಾಗಲೆಂದು ಪ್ರಾರ್ಥಿಸಲು ಇಂದು ಚಾಮುಂಡಿಬೆಟ್ಟಕ್ಕೆ ಆಗಮಿಸಿದ್ದೇನೆ. ಚಿತ್ರದ ಯಶಸ್ಸಿಗೆ ಪ್ರಾರ್ಥಿಸಿ, ಪೂಜೆ ಸಲ್ಲಿಸಿದ್ದೇನೆ. ಕೆಲವೇ ದಿನಗಳಲ್ಲಿ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿಯ ಅರ್ಶೀವಾದ ಪಡೆಯಲು ಬಂದಿದ್ದೇನೆ. ರಾಜ್ಯಕ್ಕೆ ಒಳಿತಾಗಲೆಂದು ಪೂಜೆ ಸಲ್ಲಿಸಿದ್ದೇನೆ. ನಾನು ಯಾವುದೇ ರೀತಿಯ ರಾಜಕೀಯ ಮಾಡಲು ಬಂದಿಲ್ಲ. ನಾನು ಮತ್ತು ಜಿ.ಡಿ. ಹರೀಶ್‌ಗೌಡ ಉತ್ತಮ ಸ್ನೇಹಿತರು. ನಮ್ಮಿಬ್ಬರ ಸ್ನೇಹ ದೊಡ್ಡದು. ರಾಜಕೀಯ ಹೊರತಾಗಿಯೂ ನಮ್ಮ ಸ್ನೇಹ ಮುಂದುವರೆದಿದೆ. ಮೈಸೂರು ಭಾಗದಲ್ಲಿ ಜಿ.ಡಿ.ಹರೀಶ್ ಗೌಡ ದೊಡ್ಡ ಯುವ ಶಕ್ತಿಯಾಗಿ ಹೊರ ಹೊಮ್ಮಿದ್ದಾರೆ. ಪಕ್ಷ ಸಂಘಟನೆ ವಿಚಾರಕ್ಕೆ ಬಂದಾಗ ಈ ಕುರಿತು ಉತ್ತರಿಸುತ್ತೇನೆ. ಕಾಲ ಬದಲಾದಂತೆ ಎಲ್ಲವೂ ಸರಿ ಹೋಗುತ್ತದೆ. ಮುಂದಿನ ದಿನಗಳಲ್ಲಿ ಬದಲಾವಣೆಗಳು ನಡೆಯಲಿವೆ. ಎಲ್ಲ ಸಮಸ್ಯೆಗಳು ಸರಿ ಹೋಗುತ್ತೆ. ಕಾದು ನೋಡಿ ಎಂದು ಮಾರ್ಮಿಕವಾಗಿ ನುಡಿದರು.

ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ ಮಾತನಾಡಿ, ಈ ಭೇಟಿಯಲ್ಲಿ ಯಾವುದೇ ರಾಜಕೀಯ ಇಲ್ಲ. ನಾನು ಮತ್ತು ನಿಖಿಲ್ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದೇವೆ. ಮೈಸೂರಿಗೆ ಬಂದಾಗ ಅವರನ್ನು ಭೇಟಿ ಮಾಡುತ್ತೇನೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ರಾಜಕೀಯ ಬೆಳವಣ ಗೆಗಳ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ ಎಂದಷ್ಟೇ ಹೇಳಿದರು.

Translate »