೧೦ ದಿನಗಳ ಗಾಂಧಿ ಶಿಲ್ಪ ಬಜಾರ್ ಕರಕುಶಲ ಮೇಳ ಆರಂಭ
ಮೈಸೂರು

೧೦ ದಿನಗಳ ಗಾಂಧಿ ಶಿಲ್ಪ ಬಜಾರ್ ಕರಕುಶಲ ಮೇಳ ಆರಂಭ

October 23, 2021
  • ಬೆಳಗ್ಗೆ ೧೦.೩೦ರಿಂದ ರಾತ್ರಿ ೯ ಗಂಟೆಯವರೆಗೆ ಉಚಿತ ಪ್ರವೇಶ

ಮೈಸೂರು, ಅ.೨೨(ವೈಡಿಎಸ್)- ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ಇಂದಿನಿAದ ೧೦ ದಿನಗಳ ಕಾಲ `ಗಾಂಧಿ ಶಿಲ್ಪ ಬಜಾರ್’ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ.

ಜೆಎಸ್‌ಎಸ್ ಅರ್ಬನ್ ಹಾತ್, ಭಾರತ ಸರ್ಕಾರದ ಜವಳಿ ಮಂತ್ರಾಲಯದ ಸಹಯೋಗದಲ್ಲಿ ಅ.೨೨ರಿಂದ ೩೧ರವರೆಗೆ ಮೇಳವನ್ನು ಆಯೋಜಿಸಿದ್ದು, ದೇಶದ ವಿವಿಧ ಭಾಗಗಳ ಪ್ರಸಿದ್ಧ ಹಾಗೂ ಕ್ರಿಯಾಶೀಲ ರಾಗಿರುವ ೧೦೦ಕ್ಕೂ ಹೆಚ್ಚು ಕುಶಲಕರ್ಮಿ ಗಳು ಭಾಗವಹಿಸಿ ತಮ್ಮ ಉತ್ಕೃಷ್ಟ ಕಲಾ ವಸ್ತುಗಳನ್ನು ಪ್ರದರ್ಶಿಸಿದ್ದಾರೆ.
ಈ ಮೇಳದಲ್ಲಿ ಮರದ ಕೆತ್ತನೆ, ಶಿಲಾ ಶಿಲ್ಪ, ಕಂಚಿನ ವಿಗ್ರಹಗಳು, ಮರದ ಕುಂದಣ ಕಲೆ, ರತ್ನಕಂಬಳಿ, ಹತ್ತಿ ಜಮಕಾನ, ಮರದ ಅರಗಿನ ಕಲಾ ವಸ್ತುಗಳು, ಬಾಟಿಕ್, ಕಲಾಂಕರಿ ಚಿತ್ರಕಲೆ, ಚರ್ಮದ ಆಕರ್ಷಕ ವಸ್ತುಗಳು, ತಂಜಾ ವೂರ್/ಮೈಸೂರು ಶೈಲಿಯ ಚಿತ್ರಕಲೆ, ಕಲಾತ್ಮಕ ಚರ್ಮದ ಚಪ್ಪಲಿಗಳು, ಚಂದೇರಿ/ ಪಟೋಲ ಸೀರೆಗಳು, ಬಿದಿರು-ಬೆತ್ತದ ವಸ್ತುಗಳು, ಅಲಂಕಾರಿಕ ಒಣ ಹೂಗಳು, ಬಿಹಾರದ ಮಧುವನಿ ಚಿತ್ರಕಲೆ ಇನ್ನಿತರೆ ಆಕರ್ಷಣ Ãಯ ಕಲಾತ್ಮಕ ವಸ್ತುಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿವೆ.
೧೦ ದಿನಗಳ ಮೇಳವು ಪ್ರತಿ ದಿನ ಬೆಳಗ್ಗೆ ೧೦.೩೦ರಿಂದ ರಾತ್ರಿ ೯ ಗಂಟೆವರೆಗೆ ತೆರೆದಿದ್ದು, ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿದೆ. ಮದ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಖರೀದಿಸಬಹು ದಾಗಿದೆ. ಮೈಸೂರು ಹಾಗೂ ಸುತ್ತ ಮುತ್ತಲಿನ ಗ್ರಾಹಕರಿಗೆ ವಿವಿಧ ರಾಜ್ಯಗಳ ವಿಭಿನ್ನ, ವೈಶಿಷ್ಟö್ಯವಾದ ಕರಕುಶಲ ವಸ್ತುಗಳು ದೊರೆಯಲಿವೆ. ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮೇಳಕ್ಕೆ ಚಾಲನೆ ನೀಡಿದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ. ಜಿ.ಬೆಟಸೂರಮಠ, ಲೆಕ್ಕ ಮತ್ತು ಲೆಕ್ಕಪರಿಶೋಧನಾ ವಿಭಾಗದ ನಿರ್ದೇಶಕ ಕೆ.ಆರ್.ಸಂತಾನA, ತಾಂತ್ರಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಡಾ.ಹೆಚ್.ಆರ್.ಮಹದೇವಸ್ವಾಮಿ, ರಾಕೇಶ್ ರೈ ಉಪಸ್ಥಿತರಿದ್ದರು.

Translate »