ದೇಶದ ಜನತೆಗೆ ‘ಒನ್ ಮ್ಯಾನ್ ಒನ್ ವೋಟ್’ ಡಾ. ಅಂಬೇಡ್ಕರ್ ಕೊಡುಗೆ
ಮೈಸೂರು

ದೇಶದ ಜನತೆಗೆ ‘ಒನ್ ಮ್ಯಾನ್ ಒನ್ ವೋಟ್’ ಡಾ. ಅಂಬೇಡ್ಕರ್ ಕೊಡುಗೆ

October 23, 2021

ಮೈಸೂರು, ಅ.೨೨(ಎಸ್‌ಪಿಎನ್)- ನಮ್ಮ ದೇಶಕ್ಕೆ ಸ್ವಾತಂತ್ರö್ಯ ಬಂದ ನಂತರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರಿಗೂ `ಒನ್ ಮ್ಯಾನ್ ಒನ್ ವೋಟ್’ ಹಕ್ಕನ್ನು ಕಲ್ಪಿಸಿಕೊಟ್ಟ ಕೀರ್ತಿ ನಮ್ಮ ಸಂವಿಧಾನಕ್ಕೆ ಸಲ್ಲುತ್ತದೆ ಎಂದು ಮೈಸೂರು ವಿವಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಸೋಮಶೇಖರ್ ಅಭಿಪ್ರಾಯಪಟ್ಟರು.

ಮೈಸೂರು ಸಿಎಫ್‌ಟಿಆರ್‌ಐನ ಚೆಲುವಾಂಬ ಸಭಾಂಗಣದಲ್ಲಿ ಸಿಎಸ್‌ಐಆರ್- ಸಿಎಫ್‌ಟಿಆರ್‌ಐನ ಎಸ್ಸಿ-ಎಸ್ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೦ನೇ ಜಯಂತೋತ್ಸವ ಅಂಗವಾಗಿ ಏರ್ಪಡಿಸಲಾಗಿದ್ದ `ಡಾ.ಬಿ,ಆರ್.ಅಂಬೇಡ್ಕರ್ ಮತ್ತು ಭಾರತದ ಸಂವಿಧಾನ’ ಕುರಿತ ಉಪನ್ಯಾಸದಲ್ಲಿ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರö್ಯ ದೊರೆತ ನಂತರ ಈ ನೆಲಕ್ಕೆ ಹೊಂದಿ ಕೊಳ್ಳುವ ಸಂವಿಧಾನ ಅಳವಡಿಸಿಕೊಳ್ಳಲು ಎಲ್ಲರೂ ಚರ್ಚಿಸು ತ್ತಿರುವಾಗ ಇಂಗ್ಲೆAಡಿನ ಸಂವಿಧಾನ ತಜ್ಞರೊಬ್ಬರು ಅಂಬೇಡ್ಕರ್ ಅವರ ಹೆಸರು ಸೂಚಿಸಿದರು. ಆಗ ಭಾರತೀಯರಿಗೆ ಅಂಬೇಡ್ಕರ್ ಅವರಲ್ಲಿದ್ದ ವಿದ್ವತ್ ಅರ್ಥವಾಗುತ್ತದೆ. ನಂತರ ಅವರು ರಚಿಸಿದ ಸಂವಿಧಾನದಲ್ಲಿ ಸಹೋದರತ್ವ, ಸಮಾನತೆ, ಮಾತೃತ್ವದ ಗುಣ ಗಳಿರುವ ಬೃಹತ್ ಸಂವಿಧಾನವನ್ನು ರಚಿಸಿ, ದೇಶದ ಪ್ರಗತಿಗೆ ಒತ್ತು ಕೊಡುವ ಅಂಶಗಳಿದ್ದವು. ಪ್ರಸ್ತುತ ಇಡೀ ವಿಶ್ವದಲ್ಲಿ ಅಂಬೇಡ್ಕರ್ ಅವರನ್ನು ಜ್ಞಾನದ ಸಂಕೇತವಾಗಿ ನೋಡುತ್ತಿದ್ದಾರೆ. ಹಾಗಾಗಿ ಭಾರತೀಯರರಾದ ನಾವು ಅಂಬೇಡ್ಕರ್ ವಿಚಾರಧಾರೆ, ಆದರ್ಶ ಗಳನ್ನು ಮೈಗೂಡಿಸಿಕೊಂಡು ವಿಶ್ವಮಾನವರಾಗುವತ್ತ ಚಿಂತಿಸಬೇಕು. ಇಂತಹ ಮಹಾನ್ ವ್ಯಕ್ತಿಯ ಆಚರಣೆಯಲ್ಲಿ ಪಾಲ್ಗೊಳ್ಳುತ್ತಿರು ವುದೇ ನನಗೆ ಸಂತೋಷದ ಸಂಗತಿ. ಮೈಸೂರು ಭಾಗದಲ್ಲಿ ಮಿನಿ ಭಾರತ ಎಂದೇ ಕರೆಯಲ್ಪಡುವ ಸಿಎಫ್‌ಟಿಆರ್‌ಐನಲ್ಲಿ ಅಂಬೇಡ್ಕರ್ ಅವರ ನೆನಪು ಮಾಡಿಕೊಳ್ಳುತ್ತಿರುವುದು ಉತ್ತಮ ಬೆಳವಣ ಗೆ ಎಂದರು. ಕಾರ್ಯಕ್ರಮದ ಅಧ್ಯP್ಷÀತೆಯನ್ನು ಸಿಎಫ್‌ಟಿಆರ್‌ಐನ ಪ್ರಭಾರ ನಿರ್ದೇಶಕ ಅಲೋಕ್ ಕುಮಾರ್ ಶ್ರೀವತ್ಸ ವಹಿಸಿದ್ದರು. ರಾಜ್ಯ ಸರ್ಕಾರಿ, ಅರೆ ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳ ಪರಿಷತ್‌ನ ಗೌರವಾಧ್ಯP್ಷÀ ಶಾಂತರಾಜು, ನಿವೃತ್ತ ಪ್ರಾಧ್ಯಾಪಕ ಟಿ.ಎಂ.ಮಹೇಶ್, ರಾಜ್ಯ ಪ.ಜಾತಿ, ಪ.ಪಂಗಡ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಡಾ.ಎಂ.ನಾಗರಾಜು, ಸಿಎಫ್‌ಟಿಆರ್‌ಐ-ಸಿಎಸ್‌ಐಆರ್‌ನ ಪ.ಜಾತಿ, ಪ.ಪಂಗಡದ ಸಂಪರ್ಕಾಧಿಕಾರಿ ಡಾ.ಎಂ.ಪ್ರಕಾಶ್, ಸಂಘದ ಅಧ್ಯP್ಷÀ ಶಿವಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಚ್.ಇ. ಕೃಷ್ಣಯ್ಯ, ಉಪಾಧ್ಯP್ಷÀ ಡಾ. ಅಜಯ್, ಖಜಾಂಚಿ ಡಾ.ಡಿ.ಸ್ವರೂಪ ರಾಣ ಮತ್ತು ಜಂಟಿ ಕಾರ್ಯದರ್ಶಿ ನರಸಿಂಹಮೂರ್ತಿ ಇದ್ದರು.

Translate »