ಪ್ರತಿಭಾವಂತ ವಿದ್ಯಾರ್ಥಿಗಳಿಗೆ `ರೋಟರಿ ಯಶಸ್ವಿ ಪ್ರತಿಭಾ ಪುರಸ್ಕಾರ’
ಮೈಸೂರು

ಪ್ರತಿಭಾವಂತ ವಿದ್ಯಾರ್ಥಿಗಳಿಗೆ `ರೋಟರಿ ಯಶಸ್ವಿ ಪ್ರತಿಭಾ ಪುರಸ್ಕಾರ’

October 23, 2021

ಮೈಸೂರು, ಅ.೨೨(ವೈಡಿಎಸ್)- ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣ ದಲ್ಲಿ ಶುಕ್ರವಾರ ರೋಟರಿ ಮೈಸೂರು ಉತ್ತರ ವತಿಯಿಂದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ `ರೋಟರಿ ಯಶಸ್ವಿ ಪ್ರತಿಭಾ ಪುರಸ್ಕಾರ’ ವಿತರಿಸಲಾಯಿತು.

ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಲಕ್ಷಿö್ಮÃಕಾಂತ್, ರಾಜೇಶ್, ಶ್ರೀಶಾ, ಸಚಿನ್, ದೀಪಿಕಾ, ಉಲ್ಲಾಸ್, ಅನನ್ಯ, ಸಿಂಚನ, ವಿನಯ್, ನಂದಿನಿ, ಹರ್ಷಿತ್, ಕಿಶೋರ್, ತೇಜಸ್ ಹಾಗೂ ದ್ವೀತೀಯ ಪಿಯುಸಿಯ ಚೈತ್ರ‍್ರಾ, ರೋಹನ್, ಸೌಮ್ಯ, ಭಾರದ್ವಾಜ್, ಪವನ್ ಅವರಿಗೆ ರೋಟರಿ ಯಶಸ್ವಿ ಪ್ರತಿಭಾ ಪುರಸ್ಕಾರವನ್ನು ವಿತರಿಸಿದರು. ಬಳಿಕ ಮೈಸೂರು ಜಿಲ್ಲಾ ನಿಯಂತ್ರಣ ಕೊಠಡಿಯ ಸಬ್ ಇನ್ಸ್ ಪೆಕ್ಟರ್ ವಿ.ಮಹೇಶ್ ಮಾತನಾಡಿ, ಎಲ್ಲ ರಲ್ಲೂ ಪ್ರತಿಭೆ ಇರುತ್ತದೆ. ಅದನ್ನು ನಾವೇ ಹೊರಹಾಕಬೇಕು. ಈಗಿನಿಂದಲೇ ಸ್ಪರ್ಧಾ ತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದರೆ ಯಶಸ್ವಿಯಾಗಿ ಎದುರಿಸಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ವಿದ್ಯಾರ್ಥಿ ಗಳು ಇಂದು ಶೇ.೫ರಷ್ಟು ಮಾತ್ರ ಸಾಧನೆ ಮಾಡಿದ್ದು, ಇನ್ನೂ ೯೫ರಷ್ಟು ಸಾಧನೆಗೈಯ್ಯ ಬೇಕಿದೆ. ಜೀವನದಲ್ಲಿ ಗುರಿ ಇರಬೇಕು. ಇದೇ ಉತ್ಸಾಹದಲ್ಲಿ ಶ್ರಮಪಟ್ಟು ಓದಿದರೆ ಅಂದುಕೊAಡ ಗುರಿ ತಲುಪಬಹುದು ಎಂದರು. ನಾನು ೧೬ ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ಅದರಲ್ಲಿ ೯ ವರ್ಷ ಜಮ್ಮು-ಕಾಶ್ಮೀರದಲ್ಲಿ ಕೆಲಸ ಮಾಡಿದ್ದೇನೆ. ಯಾವಾ ಗಲೂ ಕಷ್ಟವಾಯಿತು ಅನಿಸಲಿಲ್ಲ. ಸೇವೆ ಯಿಂದ ನಿವೃತ್ತಿಯಾದ ಬಳಿಕ ಪೊಲೀಸ್ ಇಲಾಖೆಗೆ ಸೇರಿ ಸಬ್‌ಇನ್ಸ್ಪೆಕ್ಟರ್ ಆಗ ಬೇಕೆಂದು ಶ್ರಮಪಟ್ಟು ಓದಿದೆ. ಇದರ ಫಲ ವಾಗಿ ೭ ಪರೀಕ್ಷೆಗಳನ್ನು ಪಾಸು ಮಾಡಿದೆ. ಅದರಲ್ಲಿ ಪೊಲೀಸ್ ಇಲಾಖೆ ಆಯ್ಕೆ ಮಾಡಿಕೊಂಡೆ. ಹಾಗಾಗಿ ವಿದ್ಯಾರ್ಥಿಗಳು ನಿಗದಿತ ಗುರಿಯಿಟ್ಟುಕೊಂಡು ಶ್ರಮಪಟ್ಟು ಓದಿ ಸಾಧನೆಗೈಯ್ಯಬೇಕು ಎಂದು ಹೇಳಿದರು.

ರೋಟರಿ ಮೈಸೂರು ಉತ್ತರ ಅಧ್ಯಕ್ಷ ಎಲ್.ಬಸವರಾಜು, ಕಾರ್ಯದರ್ಶಿ ಸಿ.ಪ್ರಶಾಂತ್, ಸದಸ್ಯ ಯಶಸ್ವಿ ಎಸ್.ಸೋಮ ಶೇಖರ್ ಉಪಸ್ಥಿತರಿದ್ದರು.

Translate »