100 ಕೋಟಿ ಡೋಸ್ ಲಸಿಕೆ: ಭಾರತದ ದಾಖಲೆ
ಮೈಸೂರು

100 ಕೋಟಿ ಡೋಸ್ ಲಸಿಕೆ: ಭಾರತದ ದಾಖಲೆ

October 22, 2021

೯ ತಿಂಗಳಲ್ಲಿ ಈ ಸಾಧನೆ

ಚೈನಾ ಬಿಟ್ಟರೆ ಭಾರತದ ಹೆಗ್ಗಳಿಕೆ

ಉತ್ತರ ಪ್ರದೇಶ, ಮಹಾರಾಷ್ಟç, ಪಶ್ಚಿಮ ಬಂಗಾಳ, ಗುಜರಾತ್, ಮಧ್ಯಪ್ರದೇಶ ಕ್ರಮವಾಗಿ ಮೊದಲ ಐದು ಸ್ಥಾನ ಪಡೆದ ರಾಜ್ಯಗಳು

ಜ.೧೬ರಲ್ಲಿ ಮೊದಲ ಡೋಸ್,ಫೆ.೧೫ರಲ್ಲಿ ೧ ಕೋಟಿ, ಏ.೧೫ರಲ್ಲಿ ೧೦ಕೋಟಿ, ಜೂ.೧೫ರಲ್ಲಿ ೨೫ ಕೋಟಿ, ಸೆ.೧೫ರಲ್ಲಿ ೭೫ ಕೋಟಿ, ಅ.೨೧ಕ್ಕೆ ೧೦೦ ಕೋಟಿ ಸಾಧನೆ

ನವದೆಹಲಿ: ಕೋವಿಡ್ ಪಿಡುಗಿನ ವಿರುದ್ಧ ದೇಶದಾದ್ಯಂತ ಆರಂಭವಾದ ಲಸಿಕಾ ಅಭಿಯಾನವು ೯ ತಿಂಗಳ ಬಳಿಕ ೧೦೦ ಕೋಟಿ ಡೋಸ್‌ಗಳನ್ನು ಪೂರ್ಣಗೊಳಿಸಿದೆ. ಈ ಮೂಲಕ ಭಾರತ ಮಹತ್ವದ ಮೈಲಿಗಲ್ಲನ್ನು ಗುರುವಾರ ದಾಖಲಿಸಿದೆ.

೧೦೦ ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಿದ ಹಿನ್ನೆಲೆ ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಮ್ ಮನೋ ಹರ ಲೋಹಿಯಾ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ಸಿಬ್ಬಂದಿ ಯೊಂದಿಗೆ ಸಮಾಲೋಚನೆ ನಡೆಸಿದರು. ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

‘ಕೋವಿಡ್ ಲಸಿಕೆ ಅಭಿಯಾನ ಶುರುವಾಗಿ ಕೇವಲ ೯ ತಿಂಗಳಲ್ಲಿ ೧೦೦ ಕೋಟಿ ಡೋಸ್ ಲಸಿಕೆ ವಿತರಿಸಿರುವುದು ಯಾವುದೇ ರಾಷ್ಟçಕ್ಕೇ ಆದರೂ ಅತ್ಯಂತ ಹೆಮ್ಮೆಯ ಸಂಗತಿ ಎಂದು ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ.ವಿ.ಕೆ.ಪೌಲ್ ಹೇಳಿದ್ದಾರೆ. ಭಾರತದ ಜನರು ಮತ್ತು ಆರೋಗ್ಯ ಕಾರ್ಯ ಕರ್ತರಿಗೆ ಅಭಿನಂದನೆ ತಿಳಿಸಿರುವ ಅವರು, ‘ಲಸಿಕೆ ಅಭಿಯಾ ನವು ಸ್ಥಿರವಾಗಿ ಮುಂದುವರಿಯುವುದು ಮುಖ್ಯವಾಗಿದೆ. ದೇಶದ ಶೇಕಡ ೭೫ರಷ್ಟು ವಯಸ್ಕರಿಗೆ ಮೊದಲ ಡೋಸ್ ಲಸಿಕೆ ಹಾಕ ಲಾಗಿದ್ದು, ಶೇಕಡ ೨೫ರಷ್ಟು ವಯಸ್ಕರು ಇನ್ನೂ ಲಸಿಕೆ ಹಾಕಿಸಿ ಕೊಂಡಿಲ್ಲ. ಉಚಿತ ಲಸಿಕೆ ಪಡೆಯಲು ಅರ್ಹರಾಗಿದ್ದರೂ ಅವರು ದೂರ ಉಳಿದಿದ್ದಾರೆ ಎಂದಿದ್ದಾರೆ.

ದೇಶದ ಶೇಕಡ ೩೦ರಷ್ಟು ಜನರು ಮಾತ್ರವೇ ಕೋವಿಡ್೧೯ ಲಸಿಕೆಯ ಎರಡೂ ಡೋಸ್‌ಗಳನ್ನು ಹಾಕಿಸಿಕೊಂಡಿದ್ದಾರೆ. ಈಗಾಗಲೇ ಮೊದಲ ಡೋಸ್ ಲಸಿಕೆ ಪಡೆದಿರುವ ಸುಮಾರು ೧೦ ಕೋಟಿ ಜನರು ಎರಡನೇ ಡೋಸ್ ಲಸಿಕೆ ಪಡೆಯಬೇಕಿದೆ. ಅವರಿಗೆ ೨ನೇ ಡೋಸ್ ಹಾಕಿಸಿಕೊಳ್ಳುವಂತೆ ನೆನಪಿಸುವ ಸಂದೇಶಗಳನ್ನು ಕಳುಹಿಸಬೇಕಿದೆ ಎಂದು ಪೌಲ್ ತಿಳಿಸಿದ್ದಾರೆ. ಕೋವಿನ್ ಪೋರ್ಟಲ್‌ನಲ್ಲಿ ಬುಧವಾರ ದಾಖಲಾಗಿದ್ದ ಅಂಕಿ ಅಂಶಗಳ ಪ್ರಕಾರ ದೇಶದಾದ್ಯಂತ ೯೯.೮೫ ಕೋಟಿ ಡೋಸ್ ಲಸಿಕೆ ನೀಡಲಾಗಿತ್ತು. ಎಲ್ಲ ಅರ್ಹರು ವಿಳಂಬ ಮಾಡದೇ ಲಸಿಕೆ ಹಾಕಿಸಿಕೊಳ್ಳುವಂತೆ ಕೋರಿರುವ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಅವರು, ಈ ಮೂಲಕ ಭಾರತದ ಐತಿಹಾಸಿಕ ಲಸಿಕಾ ಅಭಿಯಾನಕ್ಕೆ ಕೊಡುಗೆ ನೀಡುವಂತೆ ಮನವಿ ಮಾಡಿದ್ದಾರೆ.೧೦೦ ಕೋಟಿ ಡೋಸ್ ಲಸಿಕೆ ಹಾಕಿದ ಸಾಧನೆಯ ಬಗ್ಗೆ ರೈಲು, ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಧ್ವನಿವರ್ಧಕಗಳ ಮೂಲಕ ಮಾಹಿತಿ ಭಿತ್ತರಿಸಲು ಸರ್ಕಾರ ಯೋಜಿಸಿದೆ. ಅಲ್ಲದೆ ಈ ವೇಳೆ ದೆಹಲಿಯ ಕೆಂಪುಕೋಟೆಯಲ್ಲೂ ಸರ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದೆ. ಇಲ್ಲಿ ಸಚಿವ ಮನ್‌ಸುಖ್ ಮಾಂಡವೀಯ ಅವರು ಗಾಯಕ ಕೈಲಾಶ್ ಖೇರ್ ಅವರ ಹಾಡು ಮತ್ತು ದೃಶ್ಯ ಶ್ರವಣ ಫಿಲಂ ಅನ್ನು ಬಿಡುಗಡೆ ಮಾಡುವರು. ವಿಶ್ವದಲ್ಲಿ ಇಲ್ಲಿಯವರೆಗೆ ಚೀನಾ ಮಾತ್ರ ೧೦೦ ಕೋಟಿ ಡೋಸ್ ಲಸಿಕೆ ನೀಡಿರುವ ಸಾಧನೆ ಮಾಡಿದೆ. ಅದು ಜೂನ್‌ನಲ್ಲಿಯೇ ಈ ಸಾಧನೆ ಮಾಡಿತ್ತು. ಅದರ ನಂತರ ಈ ಮೈಲಿಗಲ್ಲು ದಾಟಿರುವ ದೇಶ ಎಂಬ ಹೆಗ್ಗಳಿಕೆ ಭಾರತದ್ದಾಗಿದೆ. ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರ ೭೧ನೇ ಹುಟ್ಟುಹಬ್ಬದ ದಿನ ದೇಶದಲ್ಲಿ ೨.೫ ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡುವ ಮೂಲಕ ಭಾರತ ಸಾಧನೆ ಮಾಡಿತ್ತು.

ಬಲವಾದ ರಕ್ಷಾ ಕವಚ

ನವದೆಹಲಿ: ಕಳೆದ ೧೦೦ ವರ್ಷಗಳಲ್ಲಿನ ಅತಿದೊಡ್ಡ ಸಾಂಕ್ರಾ ಮಿಕ ರೋಗವನ್ನು ಎದುರಿಸಲು ದೇಶವು ಈಗ ೧೦೦ ಕೋಟಿ ಡೋಸ್ ಲಸಿಕೆಯ ಬಲವಾದ ‘ರಕ್ಷಾ ಕವಚ’ವನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿ ದ್ದಾರೆ. ದೆಹಲಿಯ ಏಮ್ಸ್ ಆವರಣದಲ್ಲಿನ ರಾಷ್ಟಿçÃಯ ಕ್ಯಾನ್ಸರ್ ಸಂಸ್ಥೆಯಲ್ಲಿ (ಎನ್‌ಸಿಐ) ಇನ್ಫೋಸಿಸ್ ಫೌಂಡೇಷನ್ ಸ್ಥಾಪಿಸಿದ ವಿಶ್ರಾಮ ಸದನವನ್ನು ಉದ್ಘಾಟಿಸಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ದೇಶದಲ್ಲಿ ನೀಡುತ್ತಿರುವ ಕೋವಿಡ್ ಲಸಿಕೆಯ ಡೋಸ್‌ಗಳು ಗುರುವಾರ ೧೦೦ ಕೋಟಿ ದಾಟಿದ್ದು ಲಸಿಕಾ ಕಾರ್ಯಕ್ರಮದಲ್ಲಿ ಭಾರತವು ಮಹತ್ವದ ಮೈಲುಗಲ್ಲನ್ನು ಸ್ಥಾಪಿಸಿದೆ ಎಂದರು.೨೦೨೧ರ ಅಕ್ಟೋಬರ್ ೨೧ ಇತಿಹಾಸದಲ್ಲಿ ದಾಖಲಾಗಿದೆ. ಭಾರತದ ಪ್ರತಿಯೊಬ್ಬ ನಾಗರಿಕನಿಗೆ ಈ ಶ್ರೇಯ ಸಲ್ಲುತ್ತದೆ ಎಂದ ಅವರು, ದೇಶದ ಎಲ್ಲಾ ಲಸಿಕಾ ಉತ್ಪಾದನಾ ಕಂಪನಿಗಳು, ಲಸಿಕೆ ಸಾಗಣೆಯಲ್ಲಿ ತೊಡಗಿರುವ ಕಾರ್ಮಿಕರು ಮತ್ತು ಲಸಿಕೆಗಳನ್ನು ನಿರ್ವಹಿಸುವ ಆರೋಗ್ಯ ವಲಯದ ವೃತ್ತಿಪರರಿಗೆ ಕೃತಜ್ಞತೆ ಸಲ್ಲಿಸಿದರು. ಭಾರತದ ಕಾರ್ಪೊರೇಟ್ ವಲಯ, ಖಾಸಗಿ ವಲಯ ಮತ್ತು ಸಾಮಾಜಿಕ ಸಂಸ್ಥೆಗಳು ದೇಶದ ಆರೋಗ್ಯ ಸೇವೆಗಳನ್ನು ಬಲಪಡಿಸುವಲ್ಲಿ ನಿರಂತರವಾಗಿ ಕೊಡುಗೆ ನೀಡುತ್ತಿವೆ ಎಂದರು. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ವೈದ್ಯಕೀಯ ಕಾಲೇಜನ್ನು ಹೊಂದುವ ನಮ್ಮ ಪ್ರಯತ್ನಗಳಲ್ಲಿ ಖಾಸಗಿ ವಲಯವು ಪ್ರಮುಖ ಪಾತ್ರ ವಹಿಸುತ್ತದೆ ಎಂದೂ ಅವರು ಹೇಳಿದರು. ಇನ್ಫೋಸಿಸ್ ಫೌಂಡೇಷನ್ ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಯೋಜನೆಯ ಭಾಗವಾಗಿ ೮೦೬ ಹಾಸಿಗೆಗಳ ವಿಶ್ರಾಮ ಸದನವನ್ನು ನಿರ್ಮಿಸಿದೆ. ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು.

ಮೋದಿಗೆ WHO ಅಭಿನಂದನೆ
ನವದೆಹಲಿ: ಕೋವಿಡ್ ಲಸಿಕೆ ನೀಡುವಲ್ಲಿ ಭಾರತ ೧೦೦ ಕೋಟಿ ಡೋಸ್ ದಾಟಿರುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲೂ÷್ಯಎಚ್‌ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕೋವಿಡ್ ಪಿಡುಗಿನಿಂದ ದುರ್ಬಲ ಜನತೆಯನ್ನು ರಕ್ಷಿಸಲು ಮತ್ತು ಲಸಿಕೆ ಹಂಚಿಕೆಯ ಗುರಿ ತಲುಪಲು ಪ್ರಯತ್ನಿಸಿದ ಪ್ರಧಾನಿ ನರೇಂದ್ರ ಮೋದಿ, ವಿಜ್ಞಾನಿಗಳು, ಆರೋಗ್ಯ ಕಾರ್ಯ ಕರ್ತರು ಮತ್ತು ಭಾರತದ ಜನರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ. ಡಬ್ಲೂ÷್ಯಎಚ್‌ಒನ ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕಿ ಡಾ.ಪೂನಮ್ ಖೇತ್ರಪಾಲ್ ಸಿಂಗ್ ಲಸಿಕೆಯ ಹೆಗ್ಗುರುತಿನ ಬಗ್ಗೆ ದೇಶವನ್ನು ಅಭಿನಂದಿಸಿದರು. ೧೦೦ ಕೋಟಿ ಡೋಸ್ ಲಸಿಕೆ ನೀಡಿದ್ದಕ್ಕೆ ಭಾರತಕ್ಕೆ ಅಭಿನಂದನೆಗಳು.

Translate »