ಬಿಹಾರದಲ್ಲಿ ಬಿಜೆಪಿ ಸೋಲಿಗೆ ವಿಜಯೇಂದ್ರ ಸಂಚು
ಮೈಸೂರು

ಬಿಹಾರದಲ್ಲಿ ಬಿಜೆಪಿ ಸೋಲಿಗೆ ವಿಜಯೇಂದ್ರ ಸಂಚು

February 19, 2021

ಬೆಂಗಳೂರು, ಫೆ.18 (ಕೆಎಂಶಿ)- ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಯನ್ನು ಸೋಲಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ತಮ್ಮ ಆಪ್ತರ ಮೂಲಕ ಎಷ್ಟು ಹಣ ಕಳು ಹಿಸಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.

ಬಿಹಾರದಲ್ಲಿ ಬಿಜೆಪಿ ಸೋತರೆ ಪ್ರಧಾನಿಯವರ ಬಲ ಕುಗ್ಗುತ್ತದೆ. ಅದರಿಂದ ಇಲ್ಲಿನ ತಮ್ಮ ತಂದೆಯ ಆಡಳಿತಕ್ಕೆ ಯಾವುದೇ ರೀತಿಯ ಅಡಚಣೆ ಇರುವುದಿಲ್ಲ ಎಂಬ ಹಿನ್ನೆಲೆಯಲ್ಲಿ ವಿಜಯೇಂದ್ರ ಇಂತಹ ಕೆಲಸ ಮಾಡಿದ್ದಾರೆ ಎಂದು ದೂರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರು ನೀಡಿದ್ದ ನೋಟಿಸ್‍ಗೆ 11 ಪುಟಗಳ ಉತ್ತರ ನೀಡಿರುವುದಲ್ಲದೆ, ಸಿಎಂ ಯಡಿಯೂರಪ್ಪ ಅವರಿಂದ ಸರ್ಕಾರಕ್ಕೆ ಹೇಗೆ ಕೆಟ್ಟ ಹೆಸರು ಬರುತ್ತದೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದೇನೆ. ನರೇಂದ್ರ ಮೋದಿ ಅವರ ಆಶಯದಂತೆ ಕರ್ನಾಟಕದಲ್ಲೂ ಕುಟುಂಬ ಹಸ್ತಕ್ಷೇಪವಿಲ್ಲದ ಸರ್ಕಾರವಿರಬೇಕು. ಯಡಿಯೂರಪ್ಪ ಅವರ ಕುಟುಂಬದ ರಾಜಕಾರಣ ವನ್ನು 45 ಪ್ಯಾರಾದಲ್ಲಿ ಬರೆದಿದ್ದೇನೆ. ಅವರ ಕುಟುಂಬ ಬಿಜೆಪಿ ಶಾಸಕರ ಗೌರವಿ ಸುತ್ತಿಲ್ಲ. ಬಿಜೆಪಿಯ ಆಶಯಕ್ಕೆ ತಕ್ಕಂತೆ ಅಧಿಕಾರ ನಡೆಸುತ್ತಿಲ್ಲ ಎಂದರು.

ಬಿಹಾರ್ ಚುನಾವಣೆಗೆ ಸಂಬಂಧಿಸಿದಂತೆ ಮುಂದುವರೆದು ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬರದಂತೆ ಅಲ್ಲಿ ನಡೆಸಿದ ಇವರ ಕುತಂತ್ರದ ಬಗ್ಗೆ ತನಿಖೆಯಾಗ ಬೇಕು. ಕಾಂಗ್ರೆಸ್ ಮಿತ್ರ ಆರ್‍ಜೆಡಿ ಪಕ್ಷಕ್ಕೆ ವಿಜಯೇಂದ್ರ ಫಂಡಿಂಗ್ ಮಾಡಿದ್ದಾರೆ ಎಂದು ದೂರಿದರು. ಭ್ರಷ್ಟಾಚಾರ ಹಸ್ತಕ್ಷೇಪ ವರ್ಗಾವಣೆ ದಂಧೆ ಬಗ್ಗೆ ತನಿಖೆ ಮಾಡಬೇಕು. ನೋಟಿಸ್‍ಗೆ ಉತ್ತರ ಕೊಡುವಾಗ ನಾನು ಎಲ್ಲಿಯೂ ಕ್ಷಮೆಯಾಚಿ ಸಿಲ್ಲ. ಅದರ ಬದಲು ಸಿಡಿ-ಇಡಿ ಬಗ್ಗೆಯು ಉಲ್ಲೇಖಿಸಿದ್ದೇನೆ. ಮಾರಿಷಸ್ ವಿಚಾರವನ್ನೂ ಬರೆದಿದ್ದೇನೆ. ಮಾರಿಷಸ್‍ಗೆ ಯಾಕೆ ಹೋಗಿದ್ದರು, ಎಷ್ಟು ಮಂದಿ ಹೋಗಿದ್ದರು, ಯಾವ ಪ್ಲೈಟ್‍ನಲ್ಲಿ ಹೋಗಿದ್ದರು, ಪ್ಲೈಟ್ ನಂಬರ್ ಏನು ಎಂಬ ಮಾಹಿತಿ ನೀಡಿದ್ದೇನೆ. ಮಾಜಿ ಗೃಹ ಸಚಿವರ ಪರ ಆಪ್ತ ಸಹಾಯಕರ ಮೂಲಕ ಮಾರಿಷಸ್‍ಗೆ ಹೋಗಿ ಏನೇನು ತೆಗೆದುಕೊಂಡಿದ್ದಾರೆ, ಇವೆಲ್ಲವನ್ನೂ ಉಲ್ಲೇಖಿಸಿದ್ದೇನೆ ಎಂದು ಹೇಳಿದರು.

Translate »