ಮೈಸೂರು,ಜ.22(ಎಂಟಿವೈ)-ಮೈಸೂರಿನ ಸರಸ್ವತಿಪುರಂನಲ್ಲಿ ಜಲಭವನ ಉದ್ಘಾಟನೆ ಸೇರಿದಂತೆ ಸರ್ಕಾರದ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಶಿಷ್ಟಾಚಾರ ಉಲ್ಲಂಘನೆಯಾಗಿದ್ದು, ಪ್ರಮಾದ ಎಸಗುತ್ತಿ ರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಸ್ಪೀಕರ್‍ಗೆ ಮನವಿ ಸಲ್ಲಿಸುತ್ತೇವೆ. ಅನುದಾನ ಹಂಚಿಕೆಯಲ್ಲಿ ತಾರತಮ್ಯ ತೋರಿಸು ತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಕ್ರಮಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಕಾಂಗ್ರೆಸ್ ಶಾಸಕರು ಎಚ್ಚರಿಕೆ ನೀಡಿದ್ದಾರೆ.
ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಜಂಟಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಶಾಸಕರಾದ ಹೆಚ್.ಪಿ.ಮಂಜುನಾಥ್ (ಹುಣಸೂರು), ಡಾ. ಯತೀಂದ್ರ ಸಿದ್ದರಾಮಯ್ಯ (ವರುಣ) ಮತ್ತು ಅನಿಲ್ ಚಿಕ್ಕಮಾದು (ಹೆಚ್.ಡಿ. ಕೋಟೆ), ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಹರಿ ಹಾಯ್ದರು. ರಾಜ್ಯ ಸರ್ಕಾರ ಜನ ವಿರೋಧಿ, ಪ್ರಜಾತಂತ್ರ ವಿರೋಧಿ ನೀತಿ ಅನುಸರಿಸುತ್ತಿದೆ. ಶಿಷ್ಟಾಚಾರ ಉಲ್ಲಂಘಿಸುವ ಮೂಲಕ ಶಾಸಕರಿಗೆ ಮಾತ್ರ ವಲ್ಲದೆ ಕ್ಷೇತ್ರದ ಜನರಿಗೆ ಅಪಮಾನ ಮಾಡಿದೆ. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಜಲಭವನ ಉದ್ಘಾಟನಾ ಸಮಾರಂಭದಲ್ಲಿ ಗ್ರಾಮೀಣ ಶಾಸಕರನ್ನು ದೂರವಿಟ್ಟು, ಬಿಜೆಪಿ ಕಾರ್ಯ ಕ್ರಮದಂತೆ ಮಾಡಿ ಶಿಷ್ಠಾಚಾರ ಉಲ್ಲಂಘಿಸಲಾಗಿದೆ ಎಂದು ದೂರಿದರು.
ಆ.15 ಮತ್ತು ಜ.26ರಂದು ಧ್ವಜಾರೋಹಣ ಮಾಡಲು ಮಾತ್ರ ಜಿಲ್ಲಾ ಉಸ್ತುವಾರಿ ಸಚಿವರು ಸೀಮಿತರಾಗಿದ್ದಾರೆ. ಯಾವುದೇ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಪ್ರತಿಪP್ಷÀದ ಶಾಸಕರು ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಆದರೆ ನಮ್ಮ ವಿಶ್ವಾಸಕ್ಕೆ ಅವರು ಚ್ಯುತಿ ತಂದಿದ್ದಾರೆ. ಜಲಭವನ ಉದ್ಘಾಟನಾ ಸಮಾರಂಭ ಮದುವೆ ಕಾರ್ಯಕ್ರಮವಲ್ಲ, ಸರ್ಕಾರದ ಕಾರ್ಯಕ್ರಮ. ಮೈಸೂರು ನಗರದ ಶಾಸಕರನ್ನು ಕರೆದು, ಗ್ರಾಮೀಣ ಪ್ರದೇಶದ ಶಾಸಕರನ್ನು ನಿರ್ಲಕ್ಷಿಸಿದ್ದಾರೆ. ಮಂಡ್ಯ ಸಂಸದರು, ಚಾಮರಾಜನಗರ ಸಂಸದರನ್ನು ಆಹ್ವಾನಿಸಿದ್ದಾರೆ. ಎಲ್ಲಾ ನಿಗಮ, ಮಂಡಳಿ ಅಧ್ಯಕ್ಷÀರನ್ನು ಕರೆದಿದ್ದಾರೆ. ಆದರೆ ಗ್ರಾಮೀಣ ಶಾಸಕರಿಗೆ ಮಾತ್ರ ಅಪಮಾನ ಮಾಡಿದ್ದಾರೆ ಅಸಮಾದಾನ ವ್ಯಕ್ತಪಡಿಸಿದರು.
ಡಿ.ದೇವರಾಜ ಅರಸು ಅವರ ನಂತರ ಸಿದ್ದರಾಮಯ್ಯ ಅವರು ಮೈಸೂ ರಿಗೆ ಹೆಚ್ಚು ಕೊಡುಗೆ ನೀಡಿದ್ದಾರೆ. 2017ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿದ್ದ ವೇಳೆಯೇ ಜಲಭವನಕ್ಕೆ ಶಂಕುಸ್ಥಾಪನೆ ಮಾಡಿ, ಅನುದಾನ ಮಂಜೂರಾಗಿತ್ತು. ಸಿದ್ದರಾಮಯ್ಯ ಅವರು ಜಿಲ್ಲೆಗೆ ಒಟ್ಟಾರೆ 22,365 ಕೋಟಿ ರೂ. ನೀಡಿದ್ದು, ಮೈಸೂರು ನಗರಕ್ಕೆ 3,800 ಕೋಟಿ ಮಂಜೂರು ಮಾಡಿದ್ದಾರೆ. ಆದರೆ ಜಲಭವನದ ಶಿಲಾನ್ಯಾಸದ ಫಲಕದಲ್ಲಿ ಸಿದ್ದ ರಾಮಯ್ಯ ಅವರ ಹೆಸರು ಇಲ್ಲ. ಯೋಜನೆಗೆ ಶಂಕುಸ್ಥಾಪನೆ ನೆರವೇರಿ ಸಿದ ಮತ್ತು ಅನುದಾನ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೆಸರು ಹಾಕಿಸುವ ಯೋಗ್ಯತೆ ಇವರಿಗೆ ಇಲ್ಲ. ಶಿಷ್ಟಾಚಾರಕ್ಕೆ ಜಿಲ್ಲಾಧಿಕಾರಿ ಅನುಮೋದನೆ ಪಡೆಯಲಾಗಿದೆಯೋ ಇಲ್ಲವೋ ಎಂಬುದು ಗೊತ್ತಾಗ ಬೇಕು. ಹಕ್ಕು ಚ್ಯುತಿ ಮಂಡನೆಗೆ ಸ್ಪೀಕರ್‍ಗೆ ದೂರು ನೀಡುತ್ತೇವೆ.
ತಾರತಮ್ಯ ಸಲ್ಲ: ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಪ್ರವಾಹ, ಕೊರೊನಾ ಬಂದರೂ ನಾವು ರಾಜಕೀಯ ಮಾಡದೆ ಸಂಪೂರ್ಣ ಬೆಂಬಲ ನೀಡುತ್ತಿz್ದÉೀವೆ. ಆದರೆ ಅನುದಾನದಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಎಸ್‍ಡಿಪಿ (ವಿಶೇಷ ಅಭಿವೃದ್ಧಿ ಯೋಜನೆ) ಅಡಿ ಮೈಸೂರು ಜಿಲ್ಲೆಗೆ ನೀಡಿದ ಕಾಮಗಾರಿಯಲ್ಲಿ 44 ಕಾಮಗಾರಿ ಕಡಿಮೆ ಆಗಿದೆ. ಹೊಸ ಕಾಮಗಾರಿಗೆ 7 ಕೋಟಿ ನೀಡಿದ್ದಾರೆ. ಪಿರಿಯಾಪಟ್ಟಣ, ಚಾಮರಾಜ ಕ್ಷೇತ್ರಕ್ಕೆ ಮಾತ್ರ ಹೆಚ್ಚು ಅನುದಾನ ನೀಡಿ, ಉಳಿದ ಕ್ಷೇತ್ರಕ್ಕೆ 7 ರಿಂದ 8 ಲP್ಷÀ ಮಾತ್ರ ನೀಡಿದ್ದಾರೆ ಎಂದು ಕಿಡಿಕಾರಿದರು.
ಎಲ್ಲಾ ಶಾಸಕರಿಗೆ ಘನತೆ ಇದೆ: ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ವಯಸ್ಸಿನಲ್ಲಿ ಚಿಕ್ಕವರಾದರೂ ಶಾಸಕರಾದವರಿಗೆ ಸ್ಥಾನಮಾನ ಇರುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಈ ನ್ಯೂನತೆ ಸರಿಪಡಿಸಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಡಾ. ನಂಜುಂಡಪ್ಪ ವರದಿಯಲ್ಲಿ ಹೆಚ್.ಡಿ. ಕೋಟೆ ಹಿಂದುಳಿದ ತಾಲೂಕಾಗಿದೆ. ಆದರೂ ಕೂಡ ಅನುದಾನ ನೀಡಿಲ್ಲ. 17 ಲP್ಷÀ ನೀಡಲಾಗಿದೆ. ಪಿರಿಯಾಪಟ್ಟಣ ಮತ್ತು ಕೆ.ಆರ್.ನಗರ ಶಾಸಕರಿಗೆ ಹೆಚ್ಚು ನೀಡಿದ್ದಾರೆ. ಮಲೆನಾಡು ಮತ್ತು ಗಡಿನಾಡು ಅಭಿವೃದ್ಧಿಯಲ್ಲೂ ಹೆಚ್.ಡಿ.ಕೋಟೆ ಸೇರುತ್ತದೆ. ಆದರೂ ತಾರತಮ್ಯವಿದೆ. ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಶೇ.50 ಕಮಿಷನ್ ಸಂಗ್ರಹ: ಗುತ್ತಿಗೆದಾರರಿಗೆ ನೇರವಾಗಿ ಕಾಮಗಾರಿ ಮಾರಾಟ ಮಾಡಲಾಗುತ್ತಿದೆ ಎಂದು ಶಾಸಕ ಹೆಚ್.ಪಿ.ಮಂಜುನಾಥ್ ಆರೋಪಿಸಿದರು. ಈ ಹಿಂದೆ ಶೇ.40 ಕಮಿಷನ್ ಪ್ರಸ್ತಾಪವಾಗುತ್ತಿತ್ತು. ಈಗ ಶೇ.50ರಷ್ಟು ನಡೆಯುತ್ತಿದೆ. ಕಮಿಷನ್ ಕೊಟ್ಟು ಟೆಂಡರ್ ಪಡೆಯು ತ್ತಿದ್ದಾರೆ. ಬರ ಪರಿಹಾರ ಕಾಮಗಾರಿಗೆ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಹೋಗುತ್ತದೆ. 100 ಕೋಟಿ ನಷ್ಟವಾಗಿದ್ದರೆ, 20 ಕೋಟಿ ಬಿಡುಗಡೆ ಗೊಳಿಸುತ್ತಾರೆ. 11 ಕ್ಷೇತ್ರದ ಪೈಕಿ ಹೆಚ್ಚು ನಷ್ಟವಾದ ಕ್ಷೇತ್ರಕ್ಕೆ ಹೆಚ್ಚು ಅನು ದಾನ ನೀಡುತ್ತಿಲ್ಲ. ಬೇಕಾಬಿಟ್ಟಿಯಾಗಿ ನೀಡುತ್ತಿದ್ದಾರೆ. ಗುತ್ತಿಗೆದಾರರೇ ಕಮಿಷನ್ ಕೊಟ್ಟು ಟೆಂಡರ್ ತರುತ್ತಿರುವುದರಿಂದ ತನಿಖೆ ನಡೆಸಬೇಕು. ಈಗ ವಿಶೇಷ ಅಭಿವೃದ್ಧಿ ಯೋಜನೆಯಡಿ ಮೈಸೂರು ಭಾಗಕ್ಕೆ ನೀಡಿದ್ದ 48 ಕಾಮಗಾರಿ ಹಿಂದಕ್ಕೆ ಪಡೆದಿದ್ದಾರೆ. ಇದರಿಂದ ಮೈಸೂರು ಜಿಲ್ಲೆಗೆ ತುಂಬಾ ಅನ್ಯಾಯವಾಗುತ್ತಿದೆ ಎಂದು ದೂರಿದರು.
ಬಿಜೆಪಿ ಸರ್ಕಾರ ಅಸಮರ್ಥ ಸರ್ಕಾರ, ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ. ಇವರು ನಂಜುಂಡಪ್ಪ ವರದಿ ಸೇರಿದಂತೆ ಎಲ್ಲಾ ವರದಿ ತಿರಸ್ಕರಿಸಿ ತಮಗಿಷ್ಟ ಬಂದಂತೆ ಆಡಳಿತ ಮಾಡುತ್ತಿದ್ದಾರೆ. ಮೊದಲು ಬಿಜೆಪಿ ಶಾಸಕರಿಗೆ 25 ಕೋಟಿ, ಜೆಡಿಎಸ್ ಶಾಸಕರಿಗೆ 15, ಕಾಂಗ್ರೆಸ್ ಶಾಸಕರಿಗೆ 7 ಕೋಟಿ ರೂ. ಎಂದು ಬಹಿರಂಗವಾಗಿ ಹಂಚಿಕೆ ಮಾಡಿಕೊಂಡಿದ್ದರು. ಇದನ್ನು ನಾವು ವಿಧಾನಸಭೆಯಲ್ಲಿ ಪ್ರಶ್ನಿಸಿದ್ದೆವು. ಈಗ ಕಾಮಗಾರಿಯಲ್ಲಿಯೂ ಕಡಿತಗೊಳಿಸುತ್ತಿ ದ್ದಾರೆ. ಮೈಸೂರು ಜಿಲ್ಲೆಗೆ ಅಯಾ ಕ್ಷೇತ್ರಕ್ಕೆ ಅನ್ಯಾಯ ಆಗಿರುವುದನ್ನು ಜನರ ಮುಂದಿಡುತ್ತೇವೆ ಎಂದರು. ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯP್ಷÀ ಡಾ.ಬಿ.ಜೆ. ವಿಜಯಕುಮಾರ್, ಕೆಪಿಸಿಸಿ ವಕ್ತಾರ ಎಂ.ಲP್ಷÀ್ಮಣ್, ಮಹೇಶ್ ಇದ್ದರು.