ಮಿತಿ ಮೀರಿದ ಸಂಚಾರ ನಿಯಮ ಉಲ್ಲಂಘನೆ ಮೈಸೂರಲ್ಲಿ ಸಂಚಾರ ಪೊಲೀಸರಿಂದ ತೀವ್ರ ತಪಾಸಣೆ
ಮೈಸೂರು

ಮಿತಿ ಮೀರಿದ ಸಂಚಾರ ನಿಯಮ ಉಲ್ಲಂಘನೆ ಮೈಸೂರಲ್ಲಿ ಸಂಚಾರ ಪೊಲೀಸರಿಂದ ತೀವ್ರ ತಪಾಸಣೆ

May 26, 2022

ತ್ರಿಬಲ್ ರೈಡಿಂಗ್, ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದೆ ವಾಹನ ಚಾಲನೆ, ಡ್ರೆöÊವಿಂಗ್ ವೇಳೆ ಮೊಬೈಲ್ ಬಳಕೆ ವಿರುದ್ಧ ಕಾರ್ಯಾಚರಣೆ
ಮೈಸೂರು, ಮೇ ೨೫(ಆರ್‌ಕೆ)- ಮೈಸೂರು ನಗರದಾ ದ್ಯಂತ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಪೊಲೀಸರು ವಿಶೇಷ ತಪಾಸಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ತ್ರಿಬಲ್ ರೈಡಿಂಗ್, ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದೇ ಇರುವುದು, ವಾಹನ ಚಾಲನೆ ಚಾಲನೆ ವೇಳೆ ಮೊಬೈಲ್ ಬಳಸುವುದೂ ಸೇರಿದಂತೆ ಸಂಚಾರ ನಿಯಮ ಉಲ್ಲಂಘಿಸುವುದು ಮಿತಿ ಮೀರಿರುವ ಹಿನ್ನೆಲೆ ಯಲ್ಲಿ ಮೈಸೂರಿನ ಎಲ್ಲಾ ಸಂಚಾರ ಠಾಣೆಗಳ ಪೊಲೀ ಸರು ಇಂದಿನಿAದ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದು, ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡುತ್ತಿದ್ದಾರೆ.

ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರ ನಿರ್ದೇಶನದಂತೆ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಗೀತಾ ಪ್ರಸನ್ನ ಅವರ ಮಾರ್ಗದರ್ಶನ ಹಾಗೂ ಸಂಚಾರ ಎಸಿಪಿ ಎಸ್.ಇ.ಗಂಗಾಧರಸ್ವಾಮಿ ಅವರ ಮೇಲ್ವಿ ಚಾರಣೆಯಲ್ಲಿ ದೇವರಾಜ ಸಂಚಾರ ಠಾಣೆ ಇನ್ಸ್ಪೆಕ್ಟರ್ ಮುನಿಯಪ್ಪ, ಕೆ.ಆರ್. ಸಂಚಾರ ಠಾಣೆಯ ಮಂಜು ನಾಥ್, ಸಿದ್ಧಾರ್ಥ ನಗರ ಸಂಚಾರ ಠಾಣೆಯ ಸುರೇಶ್ ಕುಮಾರ್, ವಿವಿಪುರಂ ಸಂಚಾರ ಠಾಣೆಯ ಪ್ರಸನ್ನ ಕುಮಾರ್ ತಮ್ಮ ತಮ್ಮ ಸರಹದ್ದಿನ ಪ್ರಮುಖ ಸರ್ಕಲ್, ಜಂಕ್ಷನ್, ರಸ್ತೆಗಳಲ್ಲಿ ಇಂದು ಬೆಳಗ್ಗೆಯಿಂದ ಸಂಜೆವರೆಗೂ ತಪಾಸಣೆ ನಡೆಸಿ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸುತ್ತಿದ್ದಾರೆ.

ಏಕ ಕಾಲದಲ್ಲಿ ನಗರದಾದ್ಯಂತ ಸಂಚಾರ ಪೊಲೀಸರು ಕಾರ್ಯಾಚರಣೆ ನಡೆಸುತ್ತಿರುವುದರಿಂದ ಅಲ್ಲಲ್ಲಿ ಕೆಲವರು ಪೊಲೀಸರಿಂದ ತಪ್ಪಿಸಿಕೊಳ್ಳಲು ಯು-ಟರ್ನ್ ತೆಗೆದು ಕೊಂಡು ಪರ್ಯಾಯ ರಸ್ತೆಗಳಲ್ಲಿ ಓಡಾಡುತ್ತಿದ್ದುದು ಕಂಡುಬAತು. ದ್ವಿಚಕ್ರ ವಾಹನಗಳಲ್ಲಿ ೩ ಮಂದಿ ಸವಾರಿ, ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದಿರುವುದು, ವಾಹನ ಚಾಲನೆ ಮಾಡುವಾಗ ಮೊಬೈಲ್‌ನಲ್ಲಿ ಮಾತನಾಡುವುದು, ಮದ್ಯ ಪಾನ ಮಾಡಿ ಡ್ರೆöÊವಿಂಗ್, ಸಿಗ್ನಲ್ ಜಂಪ್, ಅತೀ ವೇಗ ಚಾಲನೆಯಂತಹ ಸಂಚಾರ ನಿಯಮಗಳ ಉಲ್ಲಂಘನೆ ಮಾಡುವವರ ವಿರುದ್ಧ ಪೊಲೀಸರು ದಂಡ ವಸೂಲಿ ಮಾಡುತ್ತಿದ್ದಾರೆ. ಕೆ.ಆರ್.ಸರ್ಕಲ್, ಆಯುರ್ವೇದ ಕಾಲೇಜು ಸರ್ಕಲ್, ಗನ್‌ಹೌಸ್ ಸರ್ಕಲ್, ಫೌಂಟನ್ ಸರ್ಕಲ್, ಮಾತೃ ಮಂಡಳಿ ಸರ್ಕಲ್, ಕೆಆರ್‌ಎಸ್ ರಸ್ತೆ ಸೇರಿದಂತೆ ನಗರ ದಾದ್ಯಂತ ತಪಾಸಣೆ ತೀವ್ರಗೊಳಿಸಲಾಗಿದ್ದು, ಸಂಚಾರ ಕುರಿತ ನಿಯಮ ಉಲ್ಲಂಘನೆ ಪ್ರಕರಣ ತಪ್ಪಿಸಲು ಮುಂದಾ ಗಿದ್ದಾರೆ. ಇಂದು ಒಂದೇ ದಿನ ನೂರಾರು ಪ್ರಕರಣ ದಾಖ ಲಿಸಲಾಗಿದ್ದು, ತಪಾಸಣೆ ಮುಂದುವರಿಯಲಿದೆ. ಅಪಘಾತ ಗಳನ್ನು ತಪ್ಪಿಸಿ ಅಮೂಲ್ಯ ಪ್ರಾಣ ರಕ್ಷಣೆ ಮಾಡುವುದೇ ಇದರ ಉದ್ದೇಶ ಹೊರತು, ದಂಡ ವಸೂಲಿ ಮಾಡಿ ಸಾರ್ವ ಜನಿಕರಿಗೆ ತೊಂದರೆ ಕೊಡುವುದಲ್ಲ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.

Translate »