ಕ್ಲಿಷ್ಟಕರ ಅಯೋರ್ಟಾ ಸಮಸ್ಯೆಗೆ ಯಶಸ್ವಿ ಶಸ್ತçಚಿಕಿತ್ಸೆ; ಇಬ್ಬರು ರೋಗಿಗಳ ಜೀವ ರಕ್ಷಣೆ
ಮೈಸೂರು

ಕ್ಲಿಷ್ಟಕರ ಅಯೋರ್ಟಾ ಸಮಸ್ಯೆಗೆ ಯಶಸ್ವಿ ಶಸ್ತçಚಿಕಿತ್ಸೆ; ಇಬ್ಬರು ರೋಗಿಗಳ ಜೀವ ರಕ್ಷಣೆ

May 26, 2022

ಮೈಸೂರಿನ ಮಣ ಪಾಲ್ ಆಸ್ಪತ್ರೆ ವೈದ್ಯರ ಹೇಳಿಕೆ
ಮೈಸೂರು, ಮೇ ೨೫(ಆರ್‌ಕೆಬಿ)- ಮೈಸೂರು-ಬೆಂಗಳೂರು ರಿಂಗ್ ರಸ್ತೆ ಜಂಕ್ಷನ್‌ನ ಬಳಿಯಿರುವ ತಮ್ಮ ಮಣ ಪಾಲ್ ಆಸ್ಪತ್ರೆಯಲ್ಲಿ ಇಬ್ಬರು ರೋಗಿಗಳಿಗೆ ಯಶಸ್ವಿಯಾಗಿ ಆಯೋರ್ಟಾ ಸಮಸ್ಯೆಗೆ ಶಸ್ತçಚಿಕಿತ್ಸೆ ನಡೆಸಿ ಅವರ ಜೀವ ಉಳಿಸಲಾಗಿದೆ ಎಂದು ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಉಪೇಂದ್ರ ಶೆಣೈ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ೨೫ ವರ್ಷಗಳಿಗೂ ಮೀರಿದ ಅನುಭವವುಳ್ಳ ಇಡೀ ತಂಡದ ಪ್ರಯತ್ನದಿಂದ ೩೮ರಿಂದ ೭೭ ವರ್ಷದವರೆಗಿನ ವಿವಿಧ ವಯೋಮಾನದವರಿಗೆ ಅತ್ಯಂತ ಕ್ಲಿಷ್ಟಕರವಾಗಿದ್ದರೂ ಯಶಸ್ವಿ ಶಸ್ತçಚಿಕಿತ್ಸೆ ನಡೆಸಲಾಗಿದೆ ಎಂದರು. ಇದ್ದಕ್ಕಿದ್ದಂತೆ ಎದೆನೋವು ಕಾಣ ಸಿಕೊಂಡು ಕುಸಿದು ಬಿದ್ದ ೩೮ ವರ್ಷದ ಗೃಹಿಣ ಯೊಬ್ಬರಿಗೆ ತಕ್ಷಣ ಹತ್ತಿರದ ಆಸ್ಪತ್ರೆಯಲ್ಲಿ ಪ್ರಾಥಮಿಕ ಹಂತದ ಚಿಕಿತ್ಸೆ ನೀಡಲಾಯಿತು. ನಂತರ ಇತರ ಪರೀಕ್ಷೆ ಗಳನ್ನು ಮಾಡಿದಾಗ ಅಯೋರ್ಟಾ ಒಡೆದಿರುವುದು ಕಂಡು ಬಂತು. ಇದರಿಂದಾಗಿ ಸೋರಿಕೆಯಾಗಿ ಹೃದಯದ ಸುತ್ತಲೂ ರಕ್ತ ಸ್ರಾವವಾಗಿತ್ತು. ತಕ್ಷಣ ಚಿಕಿತ್ಸೆ ಕೊಡಿಸದಿದ್ದರೆ ರೋಗಿಯ ಜೀವಕ್ಕೆ ಅಪಾಯವಾಗುತ್ತಿತ್ತು. ರಕ್ತದೊತ್ತಡ ಕಡಿಮೆಯಾಗಿ, ಪದೇ ಪದೇ ಹೃದಯ ಸ್ತಂಭನವಾಗಿ ಪರಿಸ್ಥಿತಿ ಗಂಭೀರ ವಾದಾಗ ಆಕೆಯನ್ನು ಮಣ ಪಾಲ್ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಯಶಸ್ವಿಯಾಗಿ ಶಸ್ತçಚಿಕಿತ್ಸೆ ನಡೆಸಲಾಯಿತು ಎಂದರು. ಮತ್ತೊಂದು ಪ್ರಕರಣದಲ್ಲಿ ೭೭ ವರ್ಷ ವಯಸ್ಸಿನ ರೈತರೊ ಬ್ಬರಿಗೆ ಇದ್ದಕ್ಕಿದ್ದಂತೆ ಕೈ-ಕಾಲು ಸೋತಂತಾಗಿ ಎದೆನೋವು ಕಾಣ ಸಿಕೊಳ್ಳುತ್ತಿತ್ತು. ಪರೀಕ್ಷಿಸಿದಾಗ ಅಯೋರ್ಟಾದಿಂದ ಮೆದುಳಿಗೆ ರಕ್ತ ಸರಬರಾಜು ಮಾಡುವ ರಕ್ತನಾಳದಲ್ಲಿ ಸಮಸ್ಯೆಯಾಗಿರುವುದು ಕಂಡುಬAತು. ನಂತರ ಆ ರೋಗಿಗೆ ಮೆದುಳಿಗೆ ರಕ್ತ ಸರಬರಾಜು ಮಾಡುವ ನಾಳಕ್ಕೆ ಬೈಪಾಸ್ ಸರ್ಜರಿ ಮಾಡಿ ಅಯೋರ್ಟಾಗೆ ಸ್ಟಂಟ್ ಅಳವಡಿಸಲಾಯಿತು. ಈ ರೀತಿ ಎರಡೂ ಶಸ್ತçಚಿಕಿತ್ಸೆಗಳನ್ನು ಒಟ್ಟಿಗೆ ಮಾಡಿದ್ದು ಮೈಸೂರಲ್ಲಿ ಇದೇ ಮೊದಲು. ನಂತರ ಚೇತರಿಸಿಕೊಂಡಿ ರುವ ರೋಗಿಯು ಯಾವ ಸಮಸ್ಯೆಯೂ ಇಲ್ಲದೆ ಆರೋಗ್ಯ ವಾಗಿದ್ದಾರೆ ಎಂದರು. ಗೋಷ್ಠಿಯಲ್ಲಿ ತಜ್ಞ ವೈದ್ಯರಾದ ಡಾ.ಕೇಶವಮೂಗರ್ತಿ, ಪ್ರಮೋದ್ ಉಪಸ್ಥಿತರಿದ್ದರು.

Translate »