ಭೂ ಪರಿವರ್ತನೆ ಇನ್ನು ಬಲು ಸುಲಭ ಕೇವಲ ೭೨ ಗಂಟೆಯಲ್ಲಿ ಅನುಮತಿ
ಮೈಸೂರು

ಭೂ ಪರಿವರ್ತನೆ ಇನ್ನು ಬಲು ಸುಲಭ ಕೇವಲ ೭೨ ಗಂಟೆಯಲ್ಲಿ ಅನುಮತಿ

May 25, 2022

ವಾರದಲ್ಲಿ ಸರ್ಕಾರಿ ಆದೇಶ

ಗ್ರಾಮೀಣ ಪ್ರದೇಶದಲ್ಲಿ ಹಾಲಿ ಶುಲ್ಕ

ಪಾಲಿಕೆ, ನಗರ ಪ್ರದೇಶದಲ್ಲಿ ಎರಡ್ಮೂರು ಪಟ್ಟು ಹೆಚ್ಚಳ

ತಪ್ಪು ಮಾಹಿತಿ ನೀಡಿದರೆ ಭೂ ಪರಿವರ್ತನೆ ರದ್ದು, ಶುಲ್ಕವೂ ಮುಟ್ಟುಗೋಲು

ಜಿಲ್ಲಾಧಿಕಾರಿ ಕಚೇರಿ ಏಕಗವಾಕ್ಷಿಗೆ ಅರ್ಜಿ, ಶುಲ್ಕ, ಪ್ರಮಾಣಪತ್ರ ಸಲ್ಲಿಸಿದರೆ ಕೆಲಸ ಆಯ್ತು

ಬೆಂಗಳೂರು, ಮೇ೨೪(ಕೆಎಂಶಿ)-ಭೂ ಪರಿವರ್ತ ನೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದವರಿಗೆ ೭೨ ಗಂಟೆ ಗಳಲ್ಲಿ ಅನುಮತಿ ನೀಡಲು ಸರ್ಕಾರ ನಿರ್ಧರಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಈ ವಿಷಯ ತಿಳಿಸಿದ್ದಲ್ಲದೆ, ಭೂ ಪರಿವರ್ತನೆಗೆ ಅಧಿಕಾರಿಗಳ ಮಟ್ಟದಲ್ಲಿ ನಡೆಯು ತ್ತಿದ್ದ ದೊಡ್ಡ ಪ್ರಮಾಣದ ಭ್ರಷ್ಟಾ ಚಾರಕ್ಕೆ ತೆರೆ ಎಳೆಯಲಾಗುತ್ತಿದೆ. ಸರ್ಕಾರದ ಈ ನಿರ್ಧಾರವನ್ನು ಇನ್ನೊಂದು ವಾರದಲ್ಲಿ ಆದೇಶ ಹೊರ ಡಿಸಿ, ಜಾರಿಗೊಳಿಸಲಾಗುವುದು ಎಂದರು. ಆದರೆ, ಗ್ರಾಮೀಣ ಪ್ರದೇಶದಲ್ಲಿನ ಹಾಲಿ ಪರಿವರ್ತನಾ ಶುಲ್ಕದಲ್ಲಿ ಬದಲಾವಣೆ ಇಲ್ಲ, ಇನ್ನು ಪಾಲಿಕೆ ಮತ್ತು ನಗರ ಪ್ರದೇಶ ದಲ್ಲಿ ವಲಯವಾರು ದರ ನಿಗದಿಯಲ್ಲಿ ಎರಡರಿಂದ ಮೂರು ಪಟ್ಟು ಹೆಚ್ಚಳವಾಗಲಿದೆ. ಇನ್ನು ಮುಂದೆ ನಿವೇಶನ ಪರಿವರ್ತನೆ ಇಲ್ಲವೇ ಬಡಾವಣೆ ನಿರ್ಮಾಣ, ಕೈಗಾ ರಿಕಾ ಬಳಕೆ ಸೇರಿದಂತೆ ಯಾವುದೇ ಭೂ ಪರಿವರ್ತ ನೆಗೂ ಸಂಬAಧಪಟ್ಟ ಜಿಲ್ಲಾಧಿಕಾರಿ ಕಚೇರಿಯಲ್ಲಿನ ಏಕಗವಾಕ್ಷಿಗೆ ಅರ್ಜಿ, ಶುಲ್ಕ ಹಾಗೂ ಪ್ರಮಾಣಪತ್ರ ಸಲ್ಲಿಸಿ ನಿಗದಿತ ನಮೂನೆಯಲ್ಲಿ ಅನುಮೋದನೆ ಪಡೆದು ಕೊಳ್ಳಬಹುದು. ಕೈಗಾರಿಕೆ, ಮನೆ ಸೇರಿದಂತೆ ಹಲವು ಉದ್ದೇಶಗಳಿಗಾಗಿ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗೆ ಪರಿವರ್ತನೆ ಮಾಡುವ ಕೆಲಸ ವಿನಾ ಕಾರಣ ವಿಳಂಬವಾಗುತ್ತಿದ್ದು, ಅರ್ಜಿ ಸಲ್ಲಿಸಿದವರು ತಿಂಗಳಾನುಗಟ್ಟಲೆ ಕಾಯುವ ಪರಿಸ್ಥಿತಿ ಇದೆ. ಇಂತಹ ವಿಳಂಬದಿAದಾಗಿ ಕೈಗಾರಿಕೆ
ಪ್ರಾರಂಭಿಸುವುದು ಸೇರಿದಂತೆ ಹಲವು ಉದ್ದೇಶಗಳಿಗೆ ಹೊಡೆತ ಬೀಳುತ್ತಿದೆ ಎಂದ ಅವರು, ಕೈಗಾರಿಕೆಗಳ ಸ್ಥಾಪನೆಯಾಗಬೇಕು. ಉದ್ಯೋಗ ಸೃಷ್ಟಿಯಾಗಬೇಕು ಎಂಬುದು ಸರ್ಕಾರದ ಉದ್ದೇಶ. ಆದರೆ ಭೂಪರಿವರ್ತನೆಗೆ ಆಗುತ್ತಿರುವ ವಿಳಂಬ ಧೋರಣೆಯಿಂದ ದೊಡ್ಡ ಮಟ್ಟದ ಸಮಸ್ಯೆಗಳಾಗುತ್ತಿವೆ. ಭೂ ಪರಿವರ್ತನೆಗೆ ಅನುಮತಿ ಪಡೆಯಲು ವಿಳಂಬವಾಗುತ್ತಿರುವುದರಿAದ ಕೈಗಾರಿಕೆ ಸ್ಥಾಪಿಸಲು ಬಂಡವಾಳಕ್ಕಾಗಿ ಸಾಲ ಪಡೆಯುವ ಉದ್ಯಮಿಗಳು ತಮ್ಮ ಉದ್ದೇಶದಿಂದ ಹಿಂದೆ ಸರಿಯುವ ಪ್ರಕರಣಗಳು ಹೆಚ್ಚುತ್ತಿವೆ ಎಂದರು.

ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಪರಿವರ್ತನೆ ಮಾಡುವ ಕಾರ್ಯದಲ್ಲಿ ವಿಳಂಬವಾಗಕೂಡದು ಎಂಬುದು ಸರ್ಕಾರದ ನಿಲುವು ಎಂದು ಸ್ಪಷ್ಟಪಡಿಸಿದರು. ಇದೇ ಕಾರಣಕ್ಕಾಗಿ ಇನ್ನು ಮುಂದೆ ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಿದವರಿಗೆ ೭೨ ಗಂಟೆಗಳಲ್ಲಿ ಅನುಮತಿ ನೀಡಲು ತೀರ್ಮಾನಿಸಲಾಗಿದೆ. ಅರ್ಜಿ ಸಲ್ಲಿಸಿದವರು ಪರಿವರ್ತನೆಯನ್ನು ಕೋರಿದ ಭೂಮಿ ಸರ್ಕಾರದ್ದಾಗಲೀ, ಪರಿಶಿಷ್ಟರಿ ಗಾಗಲೀ ಅಥವಾ ಯಾವುದೇ ನಿಯಮಗಳಿಗೆ ವಿರುದ್ಧವಾಗಿಲ್ಲ ಎಂದು ಪ್ರಮಾಣ ಪತ್ರ ನೀಡಬೇಕು. ಅವರು ನೀಡುವ ಪ್ರಮಾಣ ಪತ್ರವನ್ನು ಪಡೆದು ೭೨ ಗಂಟೆಗಳಲ್ಲಿ ಭೂ ಪರಿವರ್ತನೆಗೆ ಅನುಮತಿ ನೀಡಲಾಗುವುದು.ಒಂದು ವೇಳೆ ಅರ್ಜಿದಾರರು ಸಲ್ಲಿಸಿದ ಪ್ರಮಾಣಪತ್ರದಲ್ಲಿರುವುದು ತಪುö್ಪ ಎಂದು ಕಂಡು ಬಂದರೆ ತಕ್ಷಣವೇ ಭೂ ಪರಿವರ್ತನೆಗೆ ನೀಡಿದ ಅನುಮತಿ ರದ್ದಾಗಲಿದೆ ಮತ್ತು ಭೂ ಪರಿವರ್ತನೆಗಾಗಿ ಸಲ್ಲಿಸಿದ ಶುಲ್ಕವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿದೆ ಎಂದರು.

ಈ ಮಧ್ಯೆ ಭೂ ಪರಿವರ್ತನೆ ಕೋರಿ ಸಲ್ಲಿಕೆಯಾದ ಅರ್ಜಿಗಳನ್ನು ವಜಾ ಮಾಡ ಕೂಡದು. ಬದಲಿಗೆ ಪ್ರಮಾಣ ಪತ್ರ ಪಡೆದುಕೊಂಡು ಅನುಮತಿ ನೀಡಬೇಕು. ಯಾಕೆಂ ದರೆ ಪ್ರಮಾಣ ಪತ್ರದಲ್ಲಿ ತಪ್ಪಿದ್ದರೆ ಅದರಿಂದ ಅರ್ಜಿದಾರನಿಗೇ ಸಮಸ್ಯೆ ಎಂದರು. ಮೇ ೧೫ರಿಂದ ೨೧ರವರೆಗೆ ರಾಜ್ಯದಲ್ಲಿ ಸುರಿದ ಮಳೆಯಿಂದಾಗಿ ಕೋಟ್ಯಾಂತರ ರೂ. ಹಾನಿಗೀಡಾಗಿದ್ದು ಜನ, ಜಾನುವಾರು, ಆಸ್ತಿಗೆ ಹಾನಿಯಾಗಿದೆ ಎಂದು ವಿವರ ನೀಡಿ ದರು. ಮಳೆಯಿಂದಾಗಿ ೧೨ ಮಂದಿ ಮೃತಪಟ್ಟಿದ್ದರೆ,೪೩೨ ಜಾನುವಾರು ಗಳು ಮೃತಪಟ್ಟಿವೆ. ೫೧ ಮನೆ ಪೂರ್ಣ ಹಾನಿಯಾಗಿದ್ದು, ೪೨೪೨ ಮನೆಗಳು ಭಾಗಶಃ ಹಾನಿಗೊಳಗಾಗಿವೆ. ೪೧ ಗುಡಿಸಲುಗಳು ನೆಲಕ್ಕುರುಳಿವೆ. ೭೦೧೦ ಹೆಕ್ಟೇರ್ ಕೃಷಿ ಜಮೀನು, ೫೭೩೬ ಎಕರೆ ತೋಟಗಾರಿಕೆ ಜಮೀನು ಹಾನಿಯಾಗಿದ್ದು ೪೭೧೧ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ೧೦೯ ಶಾಲೆಗಳು ಹಾನಿಗೊಳಗಾಗಿವೆ ಎಂದು ಸಚಿವ ಅಶೋಕ್ ವಿವರಿಸಿದರು.

Translate »