ಕಡೇ ದಿನ ಮೂರು ಪಕ್ಷಗಳಿಂದ ಅಭ್ಯರ್ಥಿಗಳು ಕಣಕ್ಕೆ
ಅಧಿಕೃತ ಘೋಷಣೆಯಷ್ಟೇ ಬಾಕಿ
ಬೆಂಗಳೂರು, ಮೇ೨೪(ಕೆಎಂಶಿ)- ಮಾಜಿ ಉಪಮುಖ್ಯಮಂತ್ರಿ ಲಕ್ಷö್ಮಣ ಸವದಿ ಸೇರಿದಂತೆ ಏಳು ಮಂದಿ ವಿಧಾನಪರಿಷತ್ತಿಗೆ ಅವಿರೋಧ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ವಿಧಾನಸಭೆಯಿಂದ ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ನಡೆಯುತ್ತಿರುವ ದ್ವೆöÊವಾರ್ಷಿಕ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಮಂಗಳವಾರ ಎಲ್ಲಾ ಪ್ರಮುಖ ರಾಜಕೀಯ ಪಕ್ಷ ಗಳು ವಿಧಾನಸಭೆಯಲ್ಲಿನ ತಮ್ಮ ಸದಸ್ಯ ಸಂಖ್ಯಾಬಲಕ್ಕೆ ತಕ್ಕಂತೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಎಲ್ಲರ ಅವಿರೋಧ ಆಯ್ಕೆಗೆ ದಾರಿ ಮಾಡಿದೆ. ವಿಧಾನಸಭೆಯ ಬಲಾಬಲದ ಆಧಾರದ ಮೇಲೆ ಆಡಳಿತಾರೂಢ ಬಿಜೆಪಿಗೆ ನಾಲ್ಕು, ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ಗೆ ೨ ಹಾಗೂ ಜೆಡಿಎಸ್‌ಗೆ ೧ ಸ್ಥಾನ ದೊರೆಯಲಿದೆ. ಬಿಜೆಪಿಯು ಲಕ್ಷö್ಮಣ ಸವದಿ (ಬೆಳಗಾವಿ), ಎಸ್.ಕೇಶವ ಪ್ರಸಾದ್ (ಬೆಂಗಳೂರು ಉತ್ತರ), ಹೇಮಲತಾ ನಾಯಕ್ (ಕೊಪ್ಪಳ) ಹಾಗೂ ಛಲವಾದಿ ನಾರಾಯಣಸ್ವಾಮಿ (ಬೆಂಗಳೂರು ಗ್ರಾಮಾಂತರ) ಇವರನ್ನು ಕಣಕ್ಕಿ ಳಿಸಿದೆ. ಕಾಂಗ್ರೆಸ್‌ನಿAದ ಎಂ.ನಾಗರಾಜ್ ಯಾದವ್, ಅಬ್ದುಲ್ ಜಬ್ಬಾರ್ ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್‌ನ ಒಂದು ಸ್ಥಾನಕ್ಕೆ ಟಿ.ಎ.ಶರವಣ ನಾಮಪತ್ರ ಸಲ್ಲಿಸಿದರು. ಈ ಬಾರಿ ಯಾವುದೇ ರಾಜಕೀಯ ಪಕ್ಷ ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವ ಜೊತೆಗೆ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಮುಂದಾ ಗದ ಕಾರಣ ಪ್ರಸ್ತುತ ನಾಮಪತ್ರ ಸಲ್ಲಿಸಿರುವ ಎಲ್ಲರೂ ಅವಿರೋಧ ಆಯ್ಕೆ ಘೋಷಣೆ ಮಾತ್ರ ಬಾಕಿ ಉಳಿದಿದೆ. ಬಹುತೇಕ ಎಲ್ಲಾ ಅಭ್ಯರ್ಥಿಗಳು ಮೂರು ಸೆಟ್ ನಾಮಪತ್ರಗಳನ್ನು ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ಸಲ್ಲಿಸಿದರು.
ನಾಮಪತ್ರ ಪರಿಶೀಲನೆ ಹಾಗೂ ವಾಪಸ್ ಪಡೆಯುವ ದಿನಾಂಕದ ನಂತರ ಅಧಿಕೃತ ಘೋಷಣೆಯಾಗಲಿದೆ. ಅಭ್ಯರ್ಥಿಗಳ ಹೆಸರನ್ನು ಒಂದೆರಡು ದಿನ ಮೊದಲೇ ಪ್ರಕಟಿಸು ತ್ತಿದ್ದ ಬಿಜೆಪಿ ಇಂದು ಕಡೆ ಗಳಿಗೆಯಲ್ಲಿ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಿಸಿತು. ತಡರಾತ್ರಿ ಅಭ್ಯರ್ಥಿಗಳಿಗೆ ಮಾಹಿತಿ ರವಾನೆಯಾಯಿತು. ಆದರೆ ಕೊನೆ ಗಳಿಗೆಯಲ್ಲಿ ಮಂಜುಳಾ ಹಾಗೂ ಲಿಂಗರಾಜು ಪಾಟೀಲ್ ಅವರಿಂದ ನಾಮ ಪತ್ರಕ್ಕೆ ಸಹಿ ಹಾಕಿಸಿ ಕೊಂಡ ನಂತರ ಇವರನ್ನು ಬದಲಾಯಿಸಿ ಲಕ್ಷö್ಮಣ ಸವದಿ ಹಾಗೂ ಹೇಮಲತಾ ನಾಯಕ್ ಅವರಿಗೆ ಟಿಕೆಟ್ ನೀಡಿತು. ಕೊಪ್ಪಳದಿಂದ ಹೇಮಲತಾ ನಾಯಕ್ ಅವರು ಬೆಂಗಳೂ ರಿಗೆ ಬಂದು ನಾಮಪತ್ರ ಸಲ್ಲಿಸಲು ವಿಳಂಬ ವಾಗಬಹುದೆಂದು, ಅವರನ್ನು ತುಮಕೂರಿ ನಿಂದ ರಾಜಧಾನಿಗೆ ಹೆಲಿಕಾಪ್ಟರ್‌ನಲ್ಲಿ ಕರೆತರಲಾಯಿತು. ನಾಮಪತ್ರ ಸಲ್ಲಿಕೆ ಸಂದರ್ಭ ದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಸಚಿವ ಆರ್.ಅಶೋಕ್ ಮತ್ತಿತರರು ಇದ್ದರು. ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದ ರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಜರಿದ್ದರೆ, ಜೆಡಿಎಸ್ ಅಭ್ಯರ್ಥಿ ಜೊತೆ ಆ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿA, ಜೆಡಿಎಲ್‌ಪಿ ನಾಯಕ ಎಚ್.ಡಿ.ಕುಮಾರ ಸ್ವಾಮಿ, ಉಪನಾಯಕ ಬಂಡೆಪ್ಪ ಕಾಶೆಂಪೂರ್ ಮತ್ತಿತರರು ಉಪಸ್ಥಿತರಿದ್ದರು.