ಲಾರಿಯಲ್ಲಿ ಸೋರುತ್ತಿತ್ತು ಚಿಲ್ಲಿ ಸಾಸ್ ಮಾರ್ಗದುದ್ದಕ್ಕೂ ಮಕ್ಕಳಾದಿ ಸುಸ್ತು!
ಮೈಸೂರು

ಲಾರಿಯಲ್ಲಿ ಸೋರುತ್ತಿತ್ತು ಚಿಲ್ಲಿ ಸಾಸ್ ಮಾರ್ಗದುದ್ದಕ್ಕೂ ಮಕ್ಕಳಾದಿ ಸುಸ್ತು!

May 25, 2022

ಬಸ್‌ನಲ್ಲಿದ್ದವರಿಗೂ ನಾನಾ ಕಿರಿಕಿರಿ

ಬಸ್ ನಿಂತ ಕೂಡಲೇ ದಿಕ್ಕಾಪಾಲಾಗಿ ಓಡಿದರು

ಮಾಕುಟ್ಟ ಚೆಕ್‌ಪೋಸ್ಟ್ನಲ್ಲಿ ಲಾರಿ ತಡೆ, ಅಧಿಕಾರಿಗಳಿಂದ ಪರಿಶೀಲನೆ, ಮಾದರಿ ಪರೀಕ್ಷೆಗೆ

ಬೆಂಗಳೂರಿAದ ಎರ್ನಾಕುಲಂಗೆ ಲಾರಿ ತೆರಳುತ್ತಿತ್ತು

ಮಡಿಕೇರಿ/ವಿರಾಜಪೇಟೆ, ಮೇ ೨೪- ಬೆಂಗಳೂರಿನಿAದ ಕುಶಾಲನಗರ-ವಿರಾಜಪೇಟೆ ಮಾರ್ಗವಾಗಿ ಕೇರಳದ ಎರ್ನಾಕುಲಂಗೆ ಲಾರಿಯಲ್ಲಿ ಸಾಗಿಸುತ್ತಿದ್ದ ಬ್ಯಾಡಗಿ ಮೆಣಸಿನ ಕಾಯಿ (ಚಿಲ್ಲಿ) ಸಾಸ್ ರಸ್ತೆಯಲ್ಲಿ ಸೋರಿಕೆಯಾಗಿ ಕೊಡಗಿನ ವಿವಿಧೆಡೆ ಕೆಲಕಾಲ ಆತಂಕ ಸೃಷ್ಟಿಯಾಯಿತು. ಪ್ರಾರಂಭದಲ್ಲಿ ವಿಷಯುಕ್ತ ದ್ರಾವಣ ಸೋರಿಕೆಯಾಗಿದೆ ಎಂದು ಶಂಕಿಸ ಲಾಗಿತ್ತಾದರೂ, ಮಾಕುಟ್ಟ ಬಳಿ ಲಾರಿಯನ್ನು ತಡೆದು ಪರಿಶೀಲನೆ ನಡೆಸಿದ ಸಂದರ್ಭ ಬ್ಯಾಡಗಿ ಮೆಣಸಿನ ಕಾಯಿಯ ಸಾಸ್ ಸೋರಿಕೆಯಾಗಿರುವುದು ಖಚಿತವಾಗಿದೆ.

ಘಟನೆ ಹಿನ್ನೆಲೆ: ಕೇರಳದ ಎರ್ನಾಕುಲಂಗೆ ಕೇರಳ ನೋಂದಣ ಸಂಖ್ಯೆ ಹೊಂದಿದ್ದ ಲಾರಿಯಲ್ಲಿ ಬ್ಯಾಡಗಿ ಮೆಣಸಿನ ಕಾಯಿಯ ಸಾಸ್ ಅನ್ನು ಪ್ಲಾಸ್ಟಿಕ್ ಡ್ರಮ್‌ಗಳಲ್ಲಿ ತುಂಬಿಸಿ ಸಾಗಿಸ ಲಾಗುತ್ತಿತ್ತು. ಬೆಂಗಳೂರು-ಕುಶಾಲನಗರ-ನೆಲ್ಯಹುದಿಕೇರಿ-ವಿರಾಜಪೇಟೆ ಮಾರ್ಗವಾಗಿ ಲಾರಿ ಸಂಚರಿಸಿದ್ದು, ಈ ವೇಳೆ ಚಾಲಕನ ಅರಿವಿಗೆ ಬಾರದೇ ಡ್ರಮ್‌ಗಳಿಂದ ಸಾಸ್ ಸೋರಿಕೆಯಾಗಿದೆ. ಬೆಳ್ಳಂಬೆಳಗೆ ರಸ್ತೆಯಲ್ಲಿ ಕೆಂಪು ಬಣ್ಣದ ದ್ರವ ಸೋರಿಕೆಯಾಗಿ ರುವುದನ್ನು ಕಂಡು, ಜನ ಬೆಚ್ಚಿಬಿದ್ದಿದ್ದಾರೆ. ಕೆಲವರಿಗೆ ತಲೆಸುತ್ತು ಬಂದಿದ್ದು, ಅತೀವ ಘಾಟಿನಿಂದ ತಲೆ ನೋವು, ಕೆಮ್ಮು, ಕಣ್ಣು ಉರಿ ಮತ್ತಿತರ ಬಾಧೆ ಕಾಣ ಸಿಕೊಂಡಿದೆ.

ಸಿದ್ದಾಪುರಕ್ಕೆ ಬಸ್‌ನಲ್ಲಿ ಬರು ತ್ತಿದ್ದ ಶಾಲಾ ವಿದ್ಯಾರ್ಥಿಗಳು, ಪ್ರಯಾಣ ಕರಿಗೆ ಕೆಮ್ಮು, ಸೀನು, ಕಣ್ಣು ಉರಿ ಕಾಣ ಸಿಕೊಂಡಿದೆ. ಬಸ್ ಸಿದ್ದಾಪುರ ನಿಲ್ದಾಣ ತಲು ಪುತ್ತಿದ್ದಂತೆ ಭೀತರಾದ ಇತರ ಪ್ರಯಾಣ ಕರು ಬಸ್ಸಿನಿಂದ ಇಳಿದು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಕೆಲವರು ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ.

ಈ ಬೆಳವಣ ಗೆಯಿಂದ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ಪೊಲೀಸರು ಎಚ್ಚೆತ್ತು ಪರಿಶೀಲಿಸಿದಾಗ ರಸ್ತೆ ಬದಿಯಲ್ಲಿ ಕೆಂಪು ಬಣ್ಣ ಮಿಶ್ರಿತ ದ್ರವ ಸೋರಿಕೆ ಯಾಗಿರುವುದು ಕಂಡು ಬಂದಿದೆ. ಟಾರ್ಪಾಲ್‌ನಿಂದ ಮುಚ್ಚಲಾಗಿದ್ದ ಲಾರಿಯಲ್ಲಿ ರಾಸಾಯನಿಕ ಸೋರಿಕೆಯಾಗಿರುವುದು ಕಂಡು ಬಂದಿದೆ. ಸಿದ್ದಾಪುರ, ಅಮ್ಮತ್ತಿ, ವಿರಾಜಪೇಟೆಯಲ್ಲೂ ರಸ್ತೆ ಉದ್ದಕ್ಕೂ ದ್ರವ ಸೋರಿಕೆಯಾಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ತಕ್ಷಣ ಎಚ್ಚೆತ್ತುಕೊಂಡ ಸಿದ್ದಾಪುರ ಪೊಲೀಸರು, ಮಾಕುಟ್ಟ ಚೆಕ್‌ಪೋಸ್ಟ್ ನಲ್ಲಿ ವಾಹನಗಳ ತಪಾಸಣೆಗೆ ಮುಂದಾದರು. ಈ ವೇಳೆ ಕೇರಳ ನೋಂದಣ ಯ ಲಾರಿಯೊಂದರಲ್ಲಿ ಪ್ಲಾಸ್ಟಿಕ್ ಡ್ರಮ್‌ಗಳಲ್ಲಿ ದ್ರವ ರೂಪದ ಪದಾರ್ಥ ಸಾಗಿಸುತ್ತಿರುವುದು ಕಂಡು ಬಂದಿದ್ದು, ಅದರಿಂದಲೇ ಈ ಸೋರಿಕೆ ಆಗಿರುವುದು ಮನದಟ್ಟಾಗಿದೆ.

ಲಾರಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭ ಬೆಂಗಳೂರಿನಿAದ ಕುಶಾಲನಗರ-ಗುಡ್ಡೆಹೊಸೂರು-ವಿರಾಜಪೇಟೆ ಮಾರ್ಗವಾಗಿ ಕೇರಳದ ಎರ್ನಾ ಕುಲಂಗೆ ಬ್ಯಾಡಗಿ ಮೆಣಸಿನ ಕಾಯಿ ಚಿಲ್ಲಿ ಸಾಸ್ ಹಾಗೂ ಇನ್ನಿತರ ಆಹಾರ ಪದಾರ್ಥಗಳಿಗೆ ಬಳಸುವ ವಸ್ತುಗಳ ಸಾಗಾಟ ಮಾಡುತ್ತಿರುವುದಾಗಿ ಹೇಳಿಕೆ ನೀಡಿದ್ದಾನೆ. ಸ್ಥಳಕ್ಕೆ ಆಹಾರ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ದ್ರವದ ಮಾದರಿಗಳನ್ನು ಸಂಗ್ರಹಿಸಿದರು.

ಆತAಕ ಬೇಡ: ಲಾರಿಯಿಂದ ಸೋರಿಕೆಯಾದ ದ್ರವದ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಮಾದರಿಯನ್ನೂ ಸಂಗ್ರಹಿಸಲಾಗಿದೆ. ಮೇಲ್ನೋಟಕ್ಕೆ ಇದು ಮೆಣಸಿನ ಕಾಯಿ ಸಾಸ್ ಎಂದು ಕಂಡು ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಹೇಳಿದ್ದಾರೆ. ದ್ರವದ ಮಾದರಿಯನ್ನು ತಿಳಿಯಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಕುರಿತು ಯಾರೂ ಆತಂಕ ಪಡಬೇಕಾಗಿಲ್ಲ ಎಂದು ಹೇಳಿದರು.

ಸಿದ್ದಾಪುರ ಹಾಗೂ ವಿರಾಜಪೇಟೆ ಪಟ್ಟಣ ಪಂಚಾಯಿತಿ ವತಿಯಿಂದ ರಸ್ತೆಯಲ್ಲಿ ಸೋರಿಕೆಯಾಗಿದ್ದ ದ್ರವಕ್ಕೆ ನೀರು ಸಿಂಪಡಿಸಿ ಸ್ವಚ್ಚಗೊಳಿಸಲಾಯಿತು. ಅಗ್ನಿಶಾಮಕ ದಳ ಸಿಬ್ಬಂದಿ ಕೂಡ ರಸ್ತೆ ಉದ್ದಕ್ಕೂ ನೀರು ಸಿಂಪಡಿಸಿದರು. ಲಾರಿಯನ್ನು ಮಾಕುಟ್ಟ ಬಳಿ ವಶಕ್ಕೆ ಪಡೆಯಲಾಗಿದ್ದು, ಅಲ್ಲಿಯೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

ವಿದ್ಯಾರ್ಥಿಗಳು ಅಸ್ವಸ್ಥ
ದ್ರವದ ಘಾಟು ವಾಸನೆಗೆ ಸಿದ್ದಾಪುರ ಸಂತ ಅನ್ನಮ್ಮ ಶಾಲೆಯ ಆರು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ಮಕ್ಕಳನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಮಕ್ಕಳಲ್ಲಿ ಉಸಿರಾಟದ ತೊಂದರೆ ಕಾಣ ಸಿಕೊಂಡ ಹಿನ್ನೆಲೆಯಲ್ಲಿ ಆಕ್ಸಿಜನ್ ನೀಡಲಾಗಿದೆ. ತದನಂತರ ವಿದ್ಯಾರ್ಥಿಗಳು ಚೇತರಿಸಿಕೊಂಡರು. ಸಿದ್ದಾಪುರ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ವಿದ್ಯಾರ್ಥಿಗಳ ಆರೋಗ್ಯ ಪರಿಶೀಲಿಸಿದರು.

 

Translate »