ಬಿ.ವೈ.ವಿಜಯೇಂದ್ರಗೆ ಮಣೆ ಹಾಕದ ವರಿಷ್ಠರು
ಮೈಸೂರು

ಬಿ.ವೈ.ವಿಜಯೇಂದ್ರಗೆ ಮಣೆ ಹಾಕದ ವರಿಷ್ಠರು

May 25, 2022

ಬೆಂಬಲಿಗರಲ್ಲಿ ತೀವ್ರ ಅಸಮಾಧಾನ
ಆಪ್ತರಿಗೆ ಪಕ್ಷ ಸಂಘಟನೆ ಸಂದೇಶ
ಬೆAಗಳೂರು, ಮೇ೨೪(ಕೆಎಂಶಿ)-ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ವರಿಷ್ಠರು ವಿಧಾನಪರಿಷತ್ ಟಿಕೆಟ್ ನಿರಾಕರಿಸಿದ್ದಾರೆ. ಇದರಿಂದ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ತೀವ್ರ ಅಸಮಾಧಾನಗೊಂಡಿದ್ದರೂ ಅದನ್ನು ಬಹಿರಂಗಪಡಿಸಿಲ್ಲ, ಆದರೆ, ರಾಜ್ಯ ಬಿಜೆಪಿ ‘ಎಲ್ಲವೂ ಸಂತೋಷಮಯವಾಗಿದೆ’ ಎಂದು ಹೇಳುತ್ತಿದೆ. ಟಿಕೆಟ್ ನಿರಾ ಕರಣೆ ಆಗುತ್ತಿದ್ದಂತೆ ವಿಜಯೇಂದ್ರ ತಮ್ಮ ಬೆಂಬಲಿಗರು ಅಸಮಾ ಧಾನಗೊಳ್ಳದೆ ಪಕ್ಷ ಸಂಘಟನೆಯಲ್ಲಿ
ತೊಡಗಿಸಿಕೊಳ್ಳಬೇಕು ಎಂದಿದ್ದರೆ, ಯಡಿಯೂರಪ್ಪ ಟ್ವೀಟ್ ಮಾಡಿ, ವಿಧಾನಪರಿಷತ್ತಿಗೆ ಅಭ್ಯರ್ಥಿಗಳಾಗಿರುವವರು ಜಯಗಳಿಸಿ ಜನರ ಧ್ವನಿಯನ್ನು ಇನ್ನಷ್ಟು ಗಟ್ಟಿಗೊಳಿಸಲಿ ಎಂದು ಹಾರೈಸಿದ್ದಾರೆ. ವಿಜಯೇಂದ್ರ ಅವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಿಸಿ, ಹಾಲಿ ಸರ್ಕಾರದಲ್ಲಿ ಮಂತ್ರಿ ಮಾಡಬೇಕೆಂದು ಯಡಿಯೂರಪ್ಪ ಕಂಡಿದ್ದ ಕನಸಿಗೆ ವರಿಷ್ಠರು ಬ್ರೇಕ್ ಹಾಕಿದ್ದಾರೆ. ಬಿಜೆಪಿಯ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ವಿಜಯೇಂದ್ರ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕೆಂದು ಕೇಂದ್ರೀಯ ಸಂಸದೀಯ ಮಂಡಳಿಗೆ ಶಿಫಾರಸು ಮಾಡಲಾಗಿತ್ತು. ಕೋರ್ ಕಮಿಟಿ ಸಭೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರು ವಿಜಯೇಂದ್ರ ಅವರ ಹೆಸರನ್ನು ಪ್ರಸ್ತಾಪಿಸಿದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನುಮೋದನೆ ನೀಡಿದ್ದರು.

ಮುಖ್ಯಮಂತ್ರಿ ಅವರ ಶಿಫಾರಸ್ಸಿಗೂ ಪಕ್ಷದ ದೆಹಲಿ ವರಿಷ್ಠರು ಮಣೆ ಹಾಕದೆ ಕುಟುಂಬ ರಾಜಕಾರಣಕ್ಕೆ ಅವಕಾಶ ಮಾಡಿಕೊಡಲಿಲ್ಲ. ಯಡಿಯೂರಪ್ಪ ಹಾಲಿ ವಿಧಾನಸಭಾ ಸದಸ್ಯರು, ಅವರ ಹಿರಿಯ ಪುತ್ರ ರಾಘವೇಂದ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಪುತ್ರ ವಿಜಯೇಂದ್ರ ಅವರಿಗೆ ವಿಧಾನಪರಿಷತ್ ಟಿಕೆಟ್ ಕೊಡಿಸಲು ತಮ್ಮ ಎಲ್ಲಾ ಶಕ್ತಿ ಒಗ್ಗೂಡಿಸಿ ಪ್ರಯತ್ನ ಪಟ್ಟರೂ ವರಿಷ್ಠರು ಅವಕಾಶ ಮಾಡಿಕೊಡಲಿಲ್ಲ. ಪರಿಷತ್ತಿನ ನಾಲ್ಕು ಸ್ಥಾನಗಳು ಪಕ್ಷಕ್ಕೆ ಲಭ್ಯವಾಗುವ ಆಧಾರದ ಮೇಲೆ ಪ್ರತಿ ಸ್ಥಾನಕ್ಕೆ ತಲಾ ಐದು ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು, ಆದರೆ ಒಂದು ಸ್ಥಾನಕ್ಕೆ ಮಾಡಿದ ಶಿಫಾರಸಿನಲ್ಲಿ ವಿಜಯೇಂದ್ರ ಅವರ ಹೆಸರನ್ನು ಮಾತ್ರ ಸೂಚಿಸಲಾಗಿತ್ತು. ಪಕ್ಷದ ಮೂಲಗಳ ಪ್ರಕಾರ ಪಕ್ಷಕ್ಕೆ ವಿಜಯೇಂದ್ರ ಅವರ ವಿಶೇಷ ಕೊಡುಗೆ ಏನೂ ಇಲ್ಲ, ಮುಂದೆ ಪಕ್ಷ ಸಂಘಟನಗೆ ಕೆಲಸ ಮಾಡಲಿ ಆಗ ತಾನಾಗಿಯೇ ಅವಕಾಶ ದೊರೆಯಲಿದೆ ಎಂದು ಸಮಾಧಾನಪಡಿಸಲಾಗಿದೆ.

ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ಆಯ್ಕೆಗೊಂಡವರಲ್ಲಿ ಕಾಂಗ್ರೆಸ್‌ನಿAದ ಬಂದ ಮಲ್ಲಿಕಾರ್ಜುನ ಖರ್ಗೆ ಶಿಷ್ಯ ಛಲವಾದಿ ನಾರಾಯಣ ಸ್ವಾಮಿ ಅವರಿಗೆ ಟಿಕೆಟ್ ನೀಡಿದೆ, ಇನ್ನು ಜನತಾ ಪರಿವಾರದ ಸವದಿ ವಿಧಾನಪರಿಷತ್ತಿಗೆ ಪುನರಾಯ್ಕೆಗೆ ಅವಕಾಶ ಮಾಡಿಕೊಟ್ಟಿದೆ. ಇನ್ನುಳಿದ ಹೇಮಲತಾ ನಾಯಕ್ ಹಾಗೂ ಎಸ್. ಕೇಶವ ಪ್ರಸಾದ್ ಪಕ್ಷದ ಮೂಲ ಕಾರ್ಯಕರ್ತರಾಗಿದ್ದಾರೆ.

ರಾಜಕಾರಣದಲ್ಲಿ ಅಧಿಕಾರ, ಸ್ಥಾನವೇ ಅಂತಿಮವಲ್ಲ ಪಕ್ಷದ ನಿರ್ಧಾರ ಗೌರವಿಸಿ, ಸೌಜನ್ಯದಿಂದ ವರ್ತಿಸುವಂತೆ ವಿಜಯೇಂದ್ರ ಮನವಿ
ಬೆಂಗಳೂರು, ಮೇ ೨೪-ವಿಧಾನಸಭೆಯಿಂದ ವಿಧಾನ ಪರಿಷತ್ ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ, ರಾಜಕೀಯದಲ್ಲಿ ಅಧಿ ಕಾರ ಮತ್ತು ಸ್ಥಾನವೇ ಅಂತಿಮವಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಹಾಗೂ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ. ಪಕ್ಷದ ನಿರ್ಧಾರ ಗೌರವಿಸಿ, ಸೌಜನ್ಯದಿಂದ ವರ್ತಿಸುವಂತೆ ತಮ್ಮ ಬೆಂಬಲಿಗರು ಮತ್ತು ಹಿತೈಷಿಗಳಿಗೆ ವಿಜಯೇಂದ್ರ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಪಕ್ಷದ ಈ ನಿರ್ಧಾರವನ್ನು ಅನುಸರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಇತರೆಡೆ ಅನಗತ್ಯ ಕಾಮೆಂಟ್‌ಗಳನ್ನು ಮಾಡದಂತೆ ಮನವಿ ಮಾಡಿದ್ದು, ಇದು ಪಕ್ಷದ ಪ್ರತಿಷ್ಠೆಗೆ ಮಾತ್ರವಲ್ಲದೆ ಯಡಿಯೂರಪ್ಪ ಹಾಗೂ ತಮ್ಮ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಹೇಳಿದ್ದಾರೆ.

ನಾನು ರಾಜಕೀಯಕ್ಕೆ ಬಂದಾಗಿನಿAದ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷನಾಗಿ ಕೆಲಸ ಮಾಡುವ ಅವಕಾಶವನ್ನು ನೀಡುವ ಮೂಲಕ ಪಕ್ಷ ಮತ್ತು ನಮ್ಮ ನಾಯಕರು ಯಾವಾಗಲೂ ನನಗೆ ಪ್ರೋತ್ಸಾಹ ಮತ್ತು ಬೆಂಬಲವಾಗಿ ನಿಂತಿದ್ದಾರೆ. ರಾಜಕೀಯದಲ್ಲಿ ಅಧಿಕಾರ ಮತ್ತು ಸ್ಥಾನಮಾನವೇ ಅಂತಿಮವಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಎಲ್ಲಾ ಕಾರ್ಯಕರ್ತರು ಮತ್ತು ನನ್ನ ಬೆಂಬಲಿಗರಲ್ಲಿ ಮನವಿ ಮಾಡುತ್ತೇನೆ ಎಂದು ವಿಜಯೇಂದ್ರ ಹೇಳಿದ್ದಾರೆ. ಪಕ್ಷದ ಶಿಸ್ತಿನ ಚೌಕಟ್ಟಿನಲ್ಲಿ ನಾವೆಲ್ಲರೂ ಸಾಮಾನ್ಯ ಕಾರ್ಯಕರ್ತರು. ಸಾಮರ್ಥ್ಯ ಇರುವವರನ್ನು ಪಕ್ಷ ಎಂದಿಗೂ ಕೈಬಿಟ್ಟಿಲ್ಲ. ಈ ನಿಟ್ಟಿನಲ್ಲಿ ಎಲ್ಲರೂ ಸಹನೆ, ಸೌಜನ್ಯದಿಂದ ವರ್ತಿಸಬೇಕೆಂದು ಮನವಿ ಮಾಡುತ್ತೇನೆ. ನಿಮ್ಮೆಲ್ಲರ ಬೆಂಬಲ, ಸಹಕಾರ ಸದಾ ಇರಲಿ ಎಂದು ಬಿ.ವೈ.ವಿಜಯೇಂದ್ರ ವಿನಂತಿಸಿದ್ದಾರೆ.

Translate »