ಕೋರ್ಟಿಗೆ ಹಾಜರಾಗದೇ 5 ವರ್ಷದಿಂದ ತಲೆಮರೆಸಿಕೊಂಡಿದ್ದ ಮೈಸೂರು ಆರೋಪಿ ಸೆಲ್ಫಿಯಿಂದ ಸಿಕ್ಕಿ ಬಿದ್ದ
ಮೈಸೂರು

ಕೋರ್ಟಿಗೆ ಹಾಜರಾಗದೇ 5 ವರ್ಷದಿಂದ ತಲೆಮರೆಸಿಕೊಂಡಿದ್ದ ಮೈಸೂರು ಆರೋಪಿ ಸೆಲ್ಫಿಯಿಂದ ಸಿಕ್ಕಿ ಬಿದ್ದ

May 25, 2022

ಬೆಂಗಳೂರು ಮಾಲ್‌ನಲ್ಲಿ ಸ್ನೇಹಿತರೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ ಪೊಲೀಸರಿಗೆ ತಗ್ಲಾಕೊಂಡ!
ಮೈಸೂರು, ಮೇ ೨೪(ಆರ್‌ಕೆ)- ಜಾಮೀನಿನ ಮೇಲೆ ಹೊರಬಂದು ಕೋರ್ಟ್ ವಿಚಾರಣೆಗೆ ಹಾಜರಾಗದೇ ಕಳೆದ ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮೈಸೂ ರಿನ ಕೊಲೆ ಆರೋಪಿ ಭಾನುವಾರ ಬೆಂಗ ಳೂರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಮೈಸೂರಿನ ಕೃಷ್ಣಮೂರ್ತಿಪುರಂ ನಿವಾಸಿ ಯಾದ ಎಂಬಿಎ ಪದವೀಧರ ಮಧುಸೂದನ್ ಅಲಿಯಾಸ್ ಮಧು (೩೫) ಬಂಧಿತ ಆರೋಪಿ. ಬೆಂಗಳೂರಿನ ಮಾಲ್‌ವೊಂದರಲ್ಲಿ ಸ್ನೇಹಿತ ನೊಂದಿಗೆ ತೆಗೆಸಿಕೊಂಡ ಸೆಲ್ಫಿ ಫೋಟೋ ವನ್ನು ತನ್ನ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ, ತಾನೇ ನೀಡಿದ ಸುಳಿವಿನ ಜಾಡು ಹಿಡಿದ ಆಡುಗೋಡಿ ಠಾಣೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಮೈಸೂರಿನ ಖಾಸಗಿ ಬ್ಯಾಂಕ್ ಒಂದರಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಮಧುಸೂದನ್, ನಂತರ ತನ್ನ ಸ್ನೇಹಿತ ಶ್ರೀರಂಗ ಅಭಿಷೇಕ್‌ನೊಂ ದಿಗೆ ಸೇರಿ ಟ್ರೇಡಿಂಗ್ ಕಂಪನಿ ಆರಂಭಿಸಿದ್ದ. ಅದರಲ್ಲಿ ಸುಮಾರು ೧ ಕೋಟಿ ರೂ. ನಷ್ಟವಾಗಿ ಕೈ ಸುಟ್ಟುಕೊಂಡಿದ್ದ. ಅದೇ ವೇಳೆ ಬೆಂಗಳೂರಿನ ಲಕ್ಕಸಂದ್ರ ಬಡಾವಣೆಯ ಹಿರಿಯ ನಾಗರಿಕರಾದ ಉದಯ ರಾಜ್ ಸಿಂಗ್ ಮತ್ತು ಸುಶೀಲ ದಂಪತಿ ಡೈಮಂಡ್ ನೆಕ್ಲೆಸ್ ಮಾರಾಟಕ್ಕಿದೆ ಎಂದು ಆನ್ ಲೈನ್ ಜಾಹೀರಾತು ನೀಡಿದ್ದರು. ಅದನ್ನು ಗಮನಿ ಸಿದ ಮಧು ಮತ್ತು ಅಭಿಷೇಕ್, ಡೈಮಂಡ್ ನೆಕ್ಲೆಸ್ ಕಳವು ಮಾಡಲು ಪ್ಲಾನ್ ಮಾಡಿ ಇತರ ಐವರೊಂದಿಗೆ ಸಂಚು ರೂಪಿ ಸಿದ್ದರು. ೨೦೧೪ರ ಮಾರ್ಚ್ ೨೫ರಂದು
ಬೆಂಗಳೂರಿನ ಲಕ್ಕಸಂದ್ರದಲ್ಲಿರುವ ಉದಯರಾಜ್‌ಸಿಂಗ್ ಮತ್ತು ಸುಶೀಲ ದಂಪತಿ ಮನೆಗೆ ಹೋಗಿ, ತಾವು ಡೈಮಂಡ್ ನೆಕ್ಲೆಸ್ ಖರೀದಿಸುತ್ತೇವೆಂದು ಹೇಳಿ, ಬೆಲೆ ಪ್ರಸ್ತಾ ಪಿಸಿ ಮಾತನಾಡುತ್ತಿರುವಂತೆಯೇ ಸಿಂಗ್ ಅವರನ್ನು ಹತ್ಯೆಗೈದು ನೆಕ್ಲೆಸ್ ದೋಚಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಆಡುಗೋಡಿ ಪೊಲೀಸರು, ಎಲ್ಲಾ ೭ ಮಂದಿ ಆರೋಪಿ ಗಳನ್ನೂ ಬಂಧಿಸಿದ್ದರು. ಆದರೆ ೨೦೧೭ರ ಮೇ ೬ರಂದು ಮಧುಸೂದನ್‌ಗೆ ಜಾಮೀನು ಸಿಕ್ಕಿತ್ತು. ನಂತರ ಪಾಟ್ನಾಗೆ ತೆರಳಿ, ಅಲ್ಲಿಂದ ಪುಣೆಯಲ್ಲಿ ಒಂದು ಸಣ್ಣ ಉದ್ಯೋಗ ಮಾಡಿಕೊಂಡಿದ್ದ. ಆದರೆ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿ ಕೊಂಡಿದ್ದ ಆತನಿಗೆ ಹಲವು ಬಾರಿ ಅರೆಸ್ಟ್ ವಾರೆಂಟ್ ಹೊರಡಿಸಲಾಗಿತ್ತು. ಆದರೆ ಆತ ಪೊಲೀಸರ ಕಣ್ಣು ತಪ್ಪಿಸಿ ಅಡಗಿದ್ದ. ಕೊಲೆ ಪ್ರಕರಣದ ಉಳಿದ ೬ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಿದೆಯಾದರೂ ಮಧು ಮಾತ್ರ ತಲೆ ಮರೆಸಿಕೊಂಡಿದ್ದ.

ಇತ್ತೀಚೆಗಷ್ಟೇ ಬೆಂಗಳೂರಿಗೆ ಬಂದಿದ್ದ ಮಧು, ಪೀಣ್ಯ ಬಳಿ ಮಾಲ್‌ವೊಂದರಲ್ಲಿ ಸ್ನೇಹಿತ ನೊಂದಿಗೆ ಸೆಲ್ಫೀ ತೆಗೆಸಿಕೊಂಡು, ಫೇಸ್‌ಬುಕ್‌ನಲ್ಲಿ ಫೋಟೋ ಪೋಸ್ಟ್ ಮಾಡಿದ್ದರಿಂದ ಅದರ ಜಾಡು ಹಿಡಿದ ಪೊಲೀಸರು ಭಾನುವಾರ ಆತನನ್ನು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಈಗ ಪರಪ್ಪನ ಅಗ್ರಹಾರ ಜೈಲಿಗಟ್ಟಲಾಗಿದೆ.

ಈ ನಡುವೆ ಕಳೆದ ೬ ದಿನಗಳ ಹಿಂದಷ್ಟೇ ಮೈಸೂರಿಗೂ ಬಂದಿದ್ದ ಮಧುಸೂದನ್, ಕೃಷ್ಣಮೂರ್ತಿಪುರಂನಲ್ಲಿರುವ ಸಂಬAಧಿಕರು ಹಾಗೂ ತನ್ನ ಹಳೇ ಸ್ನೇಹಿತರನ್ನು ಭೇಟಿ ಮಾಡಿ ಪುಣೆಗೆ ಹಿಂತಿರುಗುವುದಾಗಿ ಹೇಳಿ ಹೋಗಿದ್ದನಲ್ಲದೆ, ನಾಲ್ಕೆöÊದು ವರ್ಷಗಳ ನಂತರ ವಾಪಸ್ ಬಂದು ಮೈಸೂರಿನಲ್ಲಿ ಖಾಯಂ ಆಗಿ ವಾಸ್ತವ್ಯ ಹೂಡುತ್ತೇನೆಂದು ಹೇಳಿದ್ದ ಎಂಬುದು ಪೊಲೀಸರ ವಿಚಾರಣೆ ವೇಳೆ ತಿಳಿದುಬಂದಿದೆ.

Translate »