ಐಎಎಸ್‍ನವರು ಪಿಪಿಇ ಕಿಟ್ ಧರಿಸಿದರೆ ವೈದ್ಯರ ಕಷ್ಟದ ಅರಿವಾಗುತ್ತೆ
ಮೈಸೂರು

ಐಎಎಸ್‍ನವರು ಪಿಪಿಇ ಕಿಟ್ ಧರಿಸಿದರೆ ವೈದ್ಯರ ಕಷ್ಟದ ಅರಿವಾಗುತ್ತೆ

August 26, 2020

ಮೈಸೂರು, ಆ.25(ಆರ್‍ಕೆಬಿ)- ಐಎಎಸ್ ಅಧಿಕಾರಿಗಳೇನು ಸರ್ವಜ್ಞರಲ್ಲ. ಅವರÀು ಒಮ್ಮೆ ಪಿಪಿಇ ಕಿಟ್ ಧರಿಸಿದರೆ ವೈದ್ಯರ ಕಷ್ಟದ ಅರಿ ವಾಗುತ್ತದೆ. ಎಂದು ವಿಧಾನ ಪರಿ ಷತ್ ಸದಸ್ಯ ಅಡಗೂರು ಹೆಚ್. ವಿಶ್ವನಾಥ್ ಇಂದಿಲ್ಲಿ ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಕಾರ್ಯಕ್ರಮವೊಂದಕ್ಕೆ ಆಗಮಿ ಸಿದ್ದ ಅವರು ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಆರ್. ನಾಗೇಂದ್ರ ಆತ್ಮಹತ್ಯೆ ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ವೈದ್ಯರಿಗೆ ಮುಕ್ತವಾಗಿ ಕೆಲಸ ಮಾಡುವ ಅವಕಾಶ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸಚಿವ ಆಕಾಂಕ್ಷಿ: ಮಂತ್ರಿ ಮಂಡಲ ವಿಸ್ತರಣೆ ಕುರಿತು ಪ್ರತಿ ಕ್ರಿಯಿಸಿದ ಅವರು, ನಾನೂ ಸಚಿವ ಆಕಾಂಕ್ಷಿ. ಆಯ್ಕೆ ಮುಖ್ಯಮಂತ್ರಿಗಳು ಮತ್ತು ಬಿಜೆಪಿ ವರಿಷ್ಠರಿಗೆ ಸಂಬಂಧಿಸಿದ ವಿಚಾರ. ನಾನೂ ಸಹ ಮಂತ್ರಿಮಂಡಲ ವಿಸ್ತರಣೆಯ ಒಂದು ಭಾಗವಾಗಿರುತ್ತೇನೆ ಎಂದರು.

ಶಾಲೆ ಆರಂಭಕ್ಕೆ ಅವಸರ ಬೇಡ: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಹಾಗೂ ಶಾಲೆ ಆರಂ ಭಕ್ಕೆ ಅವಸರ ಬೇಡ. ಶಾಲೆ ಪುನಾರಂಭಕ್ಕೆ ಪೋಷಕರಾಗಲೀ, ಮಕ್ಕಳಾಗಲೀ ಕೇಳು ತ್ತಿಲ್ಲ. ಶಾಲೆಗಳ ಆಡಳಿತ ಮಂಡಳಿ ಒತ್ತಡಕ್ಕೆ ಮಣಿಯಬೇಡಿ. ಶಾಲೆಗಳು ಹಾಗೂ ಆಸ್ಪತ್ರೆ ನಡೆಸುವವರಲ್ಲಿ ರಾಜಕಾರಣಿಗಳೇ ಹೆಚ್ಚಾಗಿ ದ್ದಾರೆ. ಅವರ ಅಭಿಪ್ರಾಯ ಕೇಳಿದರೆ ಶಿಕ್ಷಣ ಕ್ಷೇತ್ರ ದುರಂತ ಕಾಣಬೇಕಾಗುತ್ತದೆ ಎಂದು ಕುಟುಕಿದರು. ನೂತನ ಶಿಕ್ಷಣ ನೀತಿ ಜಾರಿಗೆ ಸಮಿತಿ ರಚನೆಯಾಗುತ್ತಿದೆ. ಶಾಲಾ, ಕಾಲೇಜು, ಆಡಳಿತ ಮಂಡಳಿಯವರನ್ನು ಶಿಕ್ಷಣ ತಜ್ಞರು ಎಂದು ಭ್ರಮಿಸಬಾರದು. ಹೆಚ್ಚು ಶಾಲಾ ಕಾಲೇಜು ನಡೆಸುವವರು ಶಿಕ್ಷಣ ತಜ್ಞರಲ್ಲ. ಶಿಕ್ಷಣ ಜ್ಞಾನ ಇಲ್ಲದವರು ಸಮಿತಿಯಲ್ಲಿದ್ದಾರೆ. ಶಿಕ್ಷಣ ನೀತಿ ಸಮರ್ಪಕ ಜಾರಿಯಾಗಬೇಕಾದರೆ ಸಮುದಾಯದ ಎಲ್ಲರೂ ಸಮಿತಿಯಲ್ಲಿರಬೇಕು. ಶಿಕ್ಷಣ ಮಾರು ವವರನ್ನು ಸಮಿತಿಗೆ ಕರೆಯಬಾರದು. ಅರ್ಥ ಪೂರ್ಣ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳ ಬೇಕು ಎಂದು ಅಭಿಪ್ರಾಯಪಟ್ಟರು.

Translate »