ಮೈಸೂರು ವಿಭಾಗದ ಸಹ ಶಿಕ್ಷಕರಿಗೆ ಬಡ್ತಿ, ಅನುದಾನ ರಹಿತ ಸಂಸ್ಥೆಗಳ ಸಿಬ್ಬಂದಿ ನೆರವಿಗೆ ಆಗ್ರಹಿಸಿ ಎಂಎಲ್‍ಸಿ ಮರಿತಿಬ್ಬೇಗೌಡರ ನೇತೃತ್ವದಲ್ಲಿ ಧರಣಿ
ಮೈಸೂರು

ಮೈಸೂರು ವಿಭಾಗದ ಸಹ ಶಿಕ್ಷಕರಿಗೆ ಬಡ್ತಿ, ಅನುದಾನ ರಹಿತ ಸಂಸ್ಥೆಗಳ ಸಿಬ್ಬಂದಿ ನೆರವಿಗೆ ಆಗ್ರಹಿಸಿ ಎಂಎಲ್‍ಸಿ ಮರಿತಿಬ್ಬೇಗೌಡರ ನೇತೃತ್ವದಲ್ಲಿ ಧರಣಿ

August 26, 2020

ಮೈಸೂರು, ಆ.25 (ಎಸ್‍ಬಿಡಿ)- ಮೈಸೂರು ವಿಭಾಗದ ಸಹ ಶಿಕ್ಷಕರ ಬಡ್ತಿಗೆ ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಮರಿ ತಿಬ್ಬೇಗೌಡರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ರುವ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತಾಲಯ ಕಚೇರಿ ಬಳಿ ಮಂಗಳ ವಾರ ಧರಣಿ ನಡೆಸಲಾಯಿತು.

ವಿಧಾನ ಪರಿಷತ್ ಸದಸ್ಯರಾದ ಕೆ.ಟಿ. ಶ್ರೀಕಂಠೇಗೌಡ, ಭೋಜೇಗೌಡ, ರಮೇಶ್ ಗೌಡ, ಮಾಜಿ ಎಂಎಲ್‍ಸಿಗಳಾದ ಪುಟ್ಟಣ್ಣ, ಚೌಡರೆಡ್ಡಿ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡು, ಸಹ ಶಿಕ್ಷಕರ ಬಡ್ತಿ ಸೇರಿ ದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರು.

ಮೈಸೂರು ವಿಭಾಗದಲ್ಲಿ ಕಳೆದ 4 ವರ್ಷ ಗಳಿಂದ ಗ್ರೇಡ್-2 ಸಹ ಶಿಕ್ಷಕರನ್ನು ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡದೆ ಅನ್ಯಾಯ ವೆಸಗಲಾಗಿದ್ದು, ಕೂಡಲೇ ಈ ಸಂಬಂಧ ಕ್ರಮ ಕೈಗೊಳ್ಳಬೇಕು. ಮುಖ್ಯ ಶಿಕ್ಷಕರ ಹುದ್ದೆಗೆ ನೇರ ನೇಮಕಾತಿಗೆ ಶೇ.25 ಹಾಗೂ ಬಡ್ತಿಗೆ ಶೇ.75ರ ಅನುಪಾತ ನೀಡುವಲ್ಲಿ ಉಂಟಾ ಗಿರುವ ಲೋಪವನ್ನು ಸರಿಪಡಿಸಬೇಕು. ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಗೌರವ ಧನ ನೀಡುವಂತೆ ಸಂಸ್ಥೆಗಳಿಗೆ ನಿರ್ದೇಶನ ನೀಡುವುದರ ಜೊತೆಗೆ ಈವರೆಗೆ ಗೌರವ ಧನ ಸಿಗದವರನ್ನು ಗುರುತಿಸಿ ಸರ್ಕಾರದ ವತಿಯಿಂದಲೇ ಆರ್ಥಿಕ ನೆರವು ನೀಡ ಬೇಕು ಎಂದು ಒತ್ತಾಯಿಸಲಾಯಿತು.

ಶಿಕ್ಷಣ ಸಂಸ್ಥೆಗಳಿಗೆ ನೀಡಬೇಕಿರುವ ಶಿಕ್ಷಣ ಹಕ್ಕು ಕಾಯ್ದೆ(ಆರ್‍ಟಿಇ) 2019-20ನೇ ಸಾಲಿನ ಬಾಕಿ ಮೊತ್ತವನ್ನು ಕೂಡಲೇ ಬಿಡು ಗಡೆ ಮಾಡಬೇಕು. ಅಲ್ಲದೆ ಈ ಅನುದಾನ ವನ್ನು ಅವೈಜ್ಞಾನಿಕವಾಗಿ ಕಡಿತಗೊಳಿಸುವ ಪರಿಪಾಟ ನಿಲ್ಲಿಸಬೇಕು. ಹಳೆಯ ಶಾಲೆಗಳ ಮರುಸಂಘಟನೆ ನವೀಕರಣ ಸಂದರ್ಭ ದಲ್ಲಿ ಹೊಸ ಶಾಲೆಗಳಿಗೆ ಅನ್ವಯಿಸುವ ಷರತ್ತುಗಳನ್ನು ವಿಧಿಸಬಾರದು. ಅಲ್ಲದೆ 2 ಲಕ್ಷ ಠೇವಣಿಗೆ ಒತ್ತಾಯಿಸಬಾರದು. ಕಳೆದ ಶೈಕ್ಷಣಿಕ ವರ್ಷದ ಶಾಲಾ ಶುಲ್ಕದ ಬಾಕಿ ಯನ್ನು 2 ಕಂತುಗಳಲ್ಲಿ ಪಾವತಿಸುವಂತೆ ವಿದ್ಯಾರ್ಥಿಗಳ ಪೋಷಕರಿಗೆ ತಿಳಿಸಬೇಕು. ದಾಖಲಾತಿ ಪ್ರಕ್ರಿಯೆಗೆ ಅನುಗುಣವಾಗಿ ಹಂತಹಂತವಾಗಿ ಪಠ್ಯ ಪುಸ್ತಕ ಖರೀದಿ ಸಲು ಶಿಕ್ಷಣ ಸಂಸ್ಥೆಗಳು ಅವಕಾಶ ಕಲ್ಪಿಸ ಬೇಕು. 2020-21ರ ಎಸ್‍ಎಟಿಎಸ್ ತಂತ್ರಾಂಶ ದಲ್ಲಿ ದಾಖಲಾತಿ ಪ್ರಕ್ರಿಯೆಗೆ ಬಿಇಓ ಕಚೇರಿ ಗಳಿಂದ ಪೋಷಕರಿಗೆ ಒತ್ತಡ ಹೇರದಂತೆ ಸೂಚನೆ ನೀಡಬೇಕೆಂದು ಆಗ್ರಹಿಸಲಾಯಿತು.

Translate »