ವಾರಕ್ಕೊಮ್ಮೆಯಾದರೂ ಶಾಲೆಗಳಿಗೆ ಭೇಟಿ  ನೀಡಿ ನೀರು, ಶೌಚಾಲಯ ಸಮಸ್ಯೆ ಬಗೆಹರಿಸಿ
ಮೈಸೂರು

ವಾರಕ್ಕೊಮ್ಮೆಯಾದರೂ ಶಾಲೆಗಳಿಗೆ ಭೇಟಿ ನೀಡಿ ನೀರು, ಶೌಚಾಲಯ ಸಮಸ್ಯೆ ಬಗೆಹರಿಸಿ

March 15, 2021

ಮೈಸೂರು, ಮಾ.14(ಆರ್‍ಕೆಬಿ)- ಗ್ರಾಮ ಪಂಚಾಯಿತಿ ಸದಸ್ಯರು ನಿಮ್ಮ ಗ್ರಾಮದ ಶಾಲೆಗೆ ವಾರದಲ್ಲಿ ಒಮ್ಮೆಯಾದರೂ ಭೇಟಿ ನೀಡಿ ಅಲ್ಲಿನ ಶೌಚಾಲಯ, ನೀರು, ಶಿಕ್ಷ ಕರ ಪಾಠ ಪ್ರವಚನಗಳ ಬಗ್ಗೆ ಪರಿಶೀಲಿ ಸಬೇಕು. ಸರ್ಕಾರದ ಅನುದಾನ ಸಮ ರ್ಪಕವಾಗಿ ಬಳಕೆಯಾದರೆ ಗ್ರಾಮಗಳ ಅಭಿವೃದ್ಧಿ ತನ್ನಿಂತಾನೇ ಆಗುತ್ತದೆ. ಜೊತೆಗೆ ಗ್ರಾಪಂ ಸದಸ್ಯರ ಬಗ್ಗೆಯೂ ಜನರಿಗೆ ವಿಶ್ವಾಸ ಮೂಡುತ್ತದೆ ಎಂದು ವಿಧಾನಪರಿಷತ್ ಸದಸ್ಯ ಜಿ.ರಘು ಆಚಾರ್ ಇಂದಿಲ್ಲಿ ಅಭಿಪ್ರಾಯಪಟ್ಟರು.

ಮೈಸೂರಿನ ಗನ್‍ಹೌಸ್ ಬಳಿಕ ವಿದ್ಯಾ ಶಂಕರ ಕಲ್ಯಾಣ ಮಂಟಪದಲ್ಲಿ ಮೈಸೂರು ಜಿಲ್ಲಾ ವಿಶ್ವಕರ್ಮ ಯುವ ಜಾಗೃತಿ ವೇದಿಕೆ ಆಯೋಜಿಸಿದ್ದ ವಿಶ್ವಕರ್ಮ ಸಮಾಜದ ನೂತನ ಗ್ರಾಮ ಪಂಚಾಯಿತಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪಂಚಾಯಿತಿ ಸದಸ್ಯರು ತಮ್ಮ ಗ್ರಾಮದ ಶಾಲೆಗಳಿಗೆ ದಿಢೀರ್ ಭೇಟಿ ನೀಡಬೇಕು. ಆಗಲೇ ಶಾಲೆಯ ಮುಖ್ಯೋಪಾಧ್ಯಾಯರೂ ಸೇರಿದಂತೆ ಎಲ್ಲಾ ಶಿಕ್ಷಕರು ಅಲ್ಲಿದ್ದು, ಶಾಲೆಯಲ್ಲಿನ ಸಮಸ್ಯೆ ಗಳ ಬಗ್ಗೆ ಬೆಳಕು ಚೆಲ್ಲಿದಂತಾಗುತ್ತದೆ. ಅಲ್ಲದೆ ಉತ್ತಮ ಪಾಠ-ಪ್ರವಚನಗಳಿಗೂ ನೆರವಾಗುವ ಜೊತೆಗೆ ಉತ್ತಮ ಫಲಿ ತಾಂಶ ಬರಲು ಕಾರಣವಾಗುತ್ತದೆ ಎಂದರು.

ಗ್ರಾಮಗಳ ಅಭಿವೃದ್ಧಿ ಗ್ರಾಪಂ ಸದಸ್ಯ ರಿಂದ ಮಾತ್ರ ಸಾಧ್ಯ. ಪಿಡಿಓಗಳು ಹೇಳಿ ದಂತೆ ಕೇಳಬೇಡಿ. ಗ್ರಾಮಗಳ ಅಭಿವೃದ್ಧಿಗೆ ನಿಮ್ಮಿಂದ ಏನು ಸಾಧ್ಯವೋ ಅದಷ್ಟನ್ನು ಮಾಡಿ. ತಮ್ಮ ಅವಧಿಯಲ್ಲಿ ಪಂಚಾಯಿತಿ ವ್ಯಾಪ್ತಿಯ ಒಂದಷ್ಟು ರಸ್ತೆಗಳನ್ನು ಮಾಡಿಸಿ, ಅದು ಬಹುಕಾಲ ನಿಮ್ಮನ್ನು ನೆನಪಿನಲ್ಲಿ ರಿಸುವಂತೆ ಮಾಡುತ್ತದೆ. ಮೊದಲು ಮಕ್ಕಳಿಗೆ ಶಿಕ್ಷಣ ಕೊಡಿಸಿ ಎಂದು ಗ್ರಾಪಂ ಸದಸ್ಯರಿಗೆ ಸಲಹೆ ನೀಡಿದರು.

ಮುಖ್ಯಮಂತ್ರಿಯಾದರೆ ಡಿ.ದೇವರಾಜ ಅರಸು ರೀತಿ ಹಾಗೂ ಮಂತ್ರಿಯಾದರೆ ಅಬ್ದುಲ್ ನಜೀರ್‍ಸಾಬ್ ರೀತಿ ಇರಬೇಕು. ಆದರೆ ಇಂದು ಹಿರಿಯರನ್ನು ಕಡೆಗಣಿಸ ಲಾಗುತ್ತಿದೆ. ಗ್ರಾಮದ ನೀರು, ಚರಂಡಿ ಬಗ್ಗೆ ಜನರಿಂದ ಹೆಚ್ಚು ಬೇಡಿಕೆ ಬರುತ್ತಿತ್ತು. ಆದರೆ ಇಂದು ಹಾಗಿಲ್ಲ. ನನಗೆ, ನಮ್ಮ ಕಡೆಯವರಿಗೆ ಕೆಲಸ ಕೊಡಿಸಿ, ದೇವಸ್ಥಾನ ಕಟ್ಟಲು ಹಣ ಕೊಡಿ ಎಂಬುದಾಗಿ ಕೇಳು ವುದೇ ಸಾಮಾನ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇಂದು ವ್ಯವಸ್ಥೆ ಕೇವಲ ಜಾತಿಗಳಿಗೆ ಸೀಮಿತವಾಗುತ್ತಿರುವ ಬಗ್ಗೆ ವಿಷಾದಿಸಿದ ಅವರು, ಜಾತಿ ಹೆಸರು ಹೇಳಿ ಮತ ಕೇಳುವವರಿಗೆ ಮತ ಹಾಕಬೇಡಿ ಎಂದು ಮನವಿ ಮಾಡಿದರು.

ಚುನಾವಣಾ ಪ್ರಣಾಳಿಕೆಯಂತಾಗಿರುವ ಬಜೆಟ್ ಪುಸ್ತಕ: ಇಂದು ಬಜೆಟ್ ಪುಸ್ತಕ ಪಕ್ಷಗಳ ಚುನಾವಣಾ ಪ್ರಣಾಳಿಕೆಯಂತಾ ಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಮೌಲ್ಯ ಗಳನ್ನು ಕಳೆದುಕೊಂಡಿವೆ. ಶೇ.5ರಷ್ಟು ಜನ ಮಾತ್ರ ರಾಜಕಾರಣದಲ್ಲಿ ಆಸಕ್ತಿ ಮತ್ತು ಸಾಮಾಜಿಕ ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಗ್ರಾಪಂ ಸದಸ್ಯರಿಗೆ ಅಭಿನಂದನೆ: ಇದೇ ಸಂದರ್ಭದಲ್ಲಿ ಮೈಸೂರು ಜಿಲ್ಲೆಯಲ್ಲಿ ವಿಶ್ವಕರ್ಮ ಸಮುದಾಯದಿಂದ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿ ರುವ 86 ಮಂದಿಯ ಪೈಕಿ 56 ಮಂದಿ ಯನ್ನು ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಶಾಲು ಹೊದಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಗೆಜ್ಜಗಾರಗುಪ್ಪೆ ಶ್ರೀ ಮುರಾರಿಸ್ವಾಮಿ ಕ್ಷೇತ್ರದ ಪೀಠಾಧಿಪತಿ ಶ್ರೀ ಡಾ.ಕುಮಾರಸ್ವಾಮಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಪತ್ತಾರ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ, ದೆಹಲಿಯ ಅಖಿಲ ಭಾರತ ವಿಶ್ವಕರ್ಮ ಛಾತ್ರಾ ಯವ ಸಂಘದ ಸಂತೋಷ್ ಭೀ ಬಡಿಗೇರ, ಕವಿ ಪಿ.ಎಸ್.ಸಿದ್ದಚಾರ್, ವಿಶ್ವಕರ್ಮ ಅಭಿವೃದ್ಧಿ ನಿಮಗದ ಮಾಜಿ ಅಧ್ಯಕ್ಷ ಎನ್.ನಂದಕುಮಾರ್, ಮುಖಂಡರಾದ ಟಿ.ಸುರೇಶ್ ಗೋಲ್ಡ್, ಹೆಚ್.ಡಿ.ಕೋಟೆ ಪುರಸಭಾ ಸದಸ್ಯ ರಾಜು ಕುಲುಮೆ, ಹೆಬ್ಬಾಳದ ಶಾಂತಮ್ಮ, ಮೀನಾಕ್ಷಮ್ಮ, ಸಂಘದ ಅಧ್ಯಕ್ಷ ಜೆ.ಕೆಂಡಗಣ್ಣ, ಪ್ರಧಾನ ಕಾರ್ಯದರ್ಶಿ ಟಿ.ಎ.ಸಿದ್ದರಾಜು sಸೇರಿ ದಂತೆ ಇನ್ನಿತರರು ಉಪಸ್ಥಿತರಿದ್ದರು.

 

Translate »