ವಿಶಾಖಪಟ್ಟಣಂ, ಮೇ 7- ಮೊದಲೇ ಕೊರೊನಾ ವೈರಸ್ ಸೋಂಕಿನಿಂದ ಸಂಕಷ್ಟ ಎದುರಿಸುತ್ತಿರುವ ಆಂಧ್ರ ಪ್ರದೇಶದಲ್ಲಿ ಗಾಯದ ಮೇಲೆ ಬರೆ ಎಳೆದಂತೆ ವಿಷಾನಿಲ ಸೋರಿಕೆಯಿಂದ 11 ಮಂದಿ ಮೃತಪಟ್ಟು, ಸಾವಿರಾರು ಮಂದಿ ಅಸ್ವಸ್ಥಗೊಂಡಿರುವ ಘಟನೆ ಗುರುವಾರ ಮುಂಜಾನೆ ಸಂಭವಿಸಿದೆ.
ಈ ದುರಂತದಲ್ಲಿ ಈವರೆಗಿನ ಮಾಹಿತಿ ಯಂತೆ 11 ಮಂದಿ ಮೃತಪಟ್ಟಿದ್ದು, 200 ಮಂದಿ ತೀವ್ರ ಅಸ್ವಸ್ಥಗೊಂಡಿ ದ್ದಾರೆ. 80 ಮಂದಿಯನ್ನು ವೆಂಟಿಲೇಟರ್ ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಅಧಿಕೃತ ಮಾಹಿತಿಯಂತೆ 1500ಕ್ಕೂ ಹೆಚ್ಚು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ದಾಖ ಲಾಗಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಬಲ್ಲ ಮೂಲಗಳ ಪ್ರಕಾರ ಸುಮಾರು 5 ಸಾವಿರ ಮಂದಿ ಅಸ್ವಸ್ಥಗೊಂಡಿದ್ದಾರೆ.
ವಿಶಾಖಪಟ್ಟಣಂನ ಆರ್.ಆರ್.ವೆಂಕಟಾ ಪುರಂ ಗ್ರಾಮದ ಬಳಿ ಇರುವ ಎಲ್.ಜಿ. ಪಾಲಿಮರ್ಸ್ ಇಂಡಸ್ಟ್ರಿ ಎಂಬ ರಾಸಾಯನಿಕ ಕಾರ್ಖಾನೆಯಲ್ಲಿ ಗುರುವಾರ ಮುಂಜಾನೆ 2.30ರ ವೇಳೆಯಲ್ಲಿ ಗ್ಯಾಸ್ ಸೋರಿಕೆಯಾಗಿ ಸುಮಾರು 3 ಕಿ.ಮೀ. ವ್ಯಾಪ್ತಿಯಲ್ಲಿ ವಿಷಾ ನಿಲ ಹರಡಿದೆ. ನಿದ್ರೆಯಲ್ಲಿದ್ದ ಸಾವಿರಾರು ಗ್ರಾಮಸ್ಥರು ವಿಷಾನಿಲದ ಪರಿಣಾಮವಾಗಿ ಉಸಿರುಗಟ್ಟಿದಂತಾಗಿ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಕಣ್ಣು ಉರಿ, ಚರ್ಮ ತುರಿತ ಹಾಗೂ ಮೈಮೇಲೆ ಗುಳ್ಳೆಗಳು ಕಾಣಿಸಿಕೊಂಡು ಒದ್ದಾಡುತ್ತಾ ರಸ್ತೆಯಲ್ಲಿ ಕುಸಿದು ಬಿದ್ದು ಪ್ರಜ್ಞಾಹೀನ ರಾಗಿದ್ದಾರೆ. ಸಾವಿರಾರು ಜಾನುವಾರು ಗಳು ಹಾಗೂ ಪಕ್ಷಿಗಳು ಸಾವನ್ನಪ್ಪಿವೆ.
ವಿಷಯ ತಿಳಿಯುತ್ತಿದ್ದಂತೆಯೇ ಬೆಳಿಗ್ಗೆ 5.30ರ ವೇಳೆಯಲ್ಲಿ ಎನ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‍ಎಫ್ ತಂಡಗಳು ಕಾರ್ಯ ಪ್ರವೃತ್ತರಾಗಿ, ವಿಷಾನಿಲದ ತೀವ್ರತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ಷಿಪ್ರ ಕಾರ್ಯಾ ಚರಣೆಗಿಳಿಯಿತು. ಮತ್ತೊಂದೆಡೆ ರಸ್ತೆಗಳಲ್ಲಿ ಪ್ರಜ್ಞಾಶೂನ್ಯರಾಗಿ ಬಿದ್ದಿದ್ದ ನಾಗರಿಕರನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯದಲ್ಲಿ ರಕ್ಷಣಾ ಪಡೆಗಳ ಜೊತೆಗೆ ಸ್ಥಳೀಯ ಪೊಲೀಸರು ಕೈಜೋಡಿಸಿದರು. ಘಟನೆ ನಡೆದು ಕೆಲ ಗಂಟೆಗಳಾದ ನಂತರವೂ ರಸ್ತೆಯಲ್ಲಿ ಓಡಾ ಡುತ್ತಿದ್ದವರು ಹಾಗೂÁ ಪಡೆಗಳ ಸÀರ್ಕಾರಕ್ಕೆ ನಿಂತಿದ್ದವರು ಕುಸಿದು ಬಿದ್ದು, ಪ್ರಜ್ಞಾ ಹೀನರಾದ ದೃಶ್ಯಗಳು ಕಂಡು ಬಂತು. ರಸ್ತೆಯಲ್ಲಿ ಹಾಗೂ ಫುಟ್‍ಪಾತ್ ಮೇಲೆ ನೂರಾರು ಮಂದಿ ಸಾಲು ಸಾಲಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ದೃಶ್ಯ ಗಳು ಸರ್ವೇಸಾಮಾನ್ಯವಾಗಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಗೆ ಯುವತಿಯೋರ್ವಳು ಆರೈಕೆ ಮಾಡು ತ್ತಿದ್ದ ವೇಳೆಯೇ ಪಕ್ಕದಲ್ಲೇ ಇದ್ದ ಇಬ್ಬರು ಮಕ್ಕಳು ಕುಸಿದು ಬಿದ್ದಿದ್ದು, ದಿಕ್ಕು ತೋಚದ ಯುವತಿ ರೋಧಿಸಿದ ದೃಶ್ಯ ಕರುಳು ಹಿಂಡುವಂತಿತ್ತು. ಜನರನ್ನು ಪೊಲೀಸರು ಆಂಬುಲೆನ್ಸ್‍ಗೆ ಹತ್ತಿಸುತ್ತಿ ದ್ದಾಗ ಅದನ್ನು ನೋಡುತ್ತಾ ನಿಂತಿದ್ದ ಯುವತಿ ಹಠಾತ್ತನೆ ಕುಸಿದು ಬಿದ್ದ ದೃಶ್ಯಾವಳಿಗಳು ಸುದ್ದಿವಾಹಿನಿಗಳಲ್ಲಿ ಮೂಡಿ ಬಂದವು. ಕಾರ್ಖಾನೆಯ 5 ಕಿ.ಮೀ. ವ್ಯಾಪ್ತಿಯಲ್ಲಿರುವ 9 ಗ್ರಾಮಗಳಿಗೆ ಈ ವಿಷಾನಿಲ ವ್ಯಾಪಿಸಿದ್ದು, ಅಲ್ಲಿನ ಜನರು ತೀವ್ರ ಅಸ್ವಸ್ಥಗೊಂಡಿದ್ದಾರೆ. ರಕ್ಷಣಾ ಪಡೆಗಳು ಅಲ್ಲಿನ ಜನರನ್ನು ಸ್ಥಳಾಂತರ ಮಾಡುವ ಕಾರ್ಯ ನಡೆಸುತ್ತಿರುವಾಗಲೇ ಅಲ್ಲಲ್ಲಿ ಕೆಲವರು ಕುಸಿದು ಬೀಳುತ್ತಿರುವ ದೃಶ್ಯಗಳು ಕಂಡು ಬಂದಿವೆ. ಕಾರ್ಖಾನೆಗೆ ಹೊಂದಿಕೊಂಡಂತಿರುವ ಆರ್.ಆರ್. ವೆಂಕಟಾಪುರಂ, ಪದ್ಮಪುರಂ, ಡಿ.ಸಿ.ಕಾಲೋನಿ, ಕಂಪಾರಪಾಲಂ ಗ್ರಾಮದ ಜನರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಜಾನುವಾರುಗಳು ಕಟ್ಟಿದ್ದ ಸ್ಥಳದಲ್ಲೇ ಬಾಯಿ ನೊರೆ ತಳ್ಳುತ್ತಾ ಸಾವನ್ನಪ್ಪಿರುವುದು ಕಂಡು ಬಂದಿದೆ. ಅಲ್ಲಲ್ಲಿ ಪಕ್ಷಿಗಳ ಕಳೇಬರಗಳು ಕಂಡು ಬಂದಿವೆ. ಸದ್ಯಕ್ಕೆ ವಿಷಾನಿಲದ ತೀವ್ರತೆ ಕಡಿಮೆಯಾದಂತೆ ಕಂಡು ಬಂದಿದ್ದರೂ, ಮುಂಜಾಗ್ರತಾ ಕ್ರಮವಾಗಿ 20 ಹಳ್ಳಿಗಳ ಜನರನ್ನು ಸ್ಥಳಾಂತರ ಮಾಡುವ ಕಾರ್ಯವನ್ನು ಅಲ್ಲಿನ ಕಂದಾಯ ಹಾಗೂ ಪೊಲೀಸ್ ಇಲಾಖೆ ಕೈಗೊಂಡಿದೆ. ಈ ನಡುವೆ ಆರೋಗ್ಯವಾಗಿ ಚಟುವಟಿಕೆ ಯಿಂದ ಇದ್ದವರೂ ಕೂಡ ಹಠಾತ್ತನೆ ಕುಸಿದು ಬೀಳುವ ಘಟನೆಗಳು ನಡೆಯುತ್ತಿವೆ. ಕ್ಷಣ ಕ್ಷಣಕ್ಕೂ ಅಸ್ವಸ್ಥರ ಸಂಖ್ಯೆ ಹೆಚ್ಚುತ್ತಿದ್ದು, ವಿಶಾಖಪಟ್ಟಣಂನಲ್ಲಿ ಇಂದು ನಡೆದ ದುರ್ಘಟ ನೆಯು 1984ರಲ್ಲಿ ಭೋಪಾಲ್‍ನಲ್ಲಿ ಅನಿಲ ದುರಂತ ನಡೆದು 3287 ಮಂದಿ ಮೃತಪಟ್ಟ ಭೀಕರ ಘಟನೆಯನ್ನು ನೆನಪಿಸುವಂತಿತ್ತು. ಆಗ ಭೋಪಾಲ್‍ನಲ್ಲಿ ಕೂಡ ಮೊದಲ ದಿನ ಕೆಲವರು ಮೃತಪಟ್ಟರೆ ನಂತರದ ದಿನಗಳಲ್ಲಿ ಸಾಲು ಸಾಲಾಗಿ ಸಾವುಗಳು ಸಂಭವಿಸಿದ್ದವು.
ನೋಟೀಸ್: ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಸ್ಟೈರೀನ್ ಅನಿಲ ಸೋರಿಕೆಯಿಂ ದಾಗಿ 11 ಮಂದಿ ಅಸುನೀಗಿ, 5 ಸಾವಿರಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡ ಘಟನೆ ಇಡೀ ದೇಶ ವನ್ನು ಬೆಚ್ಚಿ ಬೀಳಿಸಿದೆ. ಇದರ ಬೆನ್ನಲ್ಲೇ ರಾಷ್ಟ್ರೀಯ ಮಾನವ ಹಕ್ಕು ಆಯೋ ಗವು ಮೋಟೋ (ಸ್ವಪ್ರೇರಣೆ) ಪ್ರಕರಣ ದಾಖಲಿಸಿದೆ. ಆಂಧ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ. 11 ಮಂದಿ ಅಮಾಯಕ ಜನರು ಅಸುನೀಗಿರುವುದು ಹಾಗೂ ಸಾವಿರಾರು ಜನರು ಅಸ್ವಸ್ಥಗೊಂಡಿ ರುವುದು ಗಂಭೀರ ಸ್ವರೂಪದ ಮಾನವ ಹಕ್ಕು ಉಲ್ಲಂಘನೆಯಾಗಿದೆ. ಜನರ ಬದುಕಿನ ಹಕ್ಕನ್ನು ಕಿತ್ತುಕೊಂಡಂತಾಗಿದೆ. ಕೋವಿಡ್-19 ವೈರಸ್ ಸೋಂಕು ಹರಡುತ್ತಿ ರುವುದರಿಂದಾಗಿ ದೇಶಾದ್ಯಂತ ಜನರ ಜೀವ ಅಪಾಯದಲ್ಲಿದ್ದು, ಪ್ರತಿಯೊಬ್ಬರೂ ಮನೆಯಲ್ಲೇ ಬಂಧಿ ಯಾಗಬೇಕಾದ ಸಂದರ್ಭದಲ್ಲೇ ಈ ದುರ್ಘಟನೆ ನಡೆದಿರುವುದು ಜನರಿಗೆ ಆಘಾತ ತಂದಿದೆ ಎಂದು ಮಾನವ ಹಕ್ಕು ಆಯೋಗ ಕಳವಳ ವ್ಯಕ್ತಪಡಿಸಿದೆ.