ಇಂದಿನಿಂದ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ಜಾತ್ರೋತ್ಸವ
ಮೈಸೂರು

ಇಂದಿನಿಂದ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ಜಾತ್ರೋತ್ಸವ

February 28, 2021

ಮೈಸೂರು, ಫೆ.27-ಮೈಸೂರು ತಾಲೂಕು ಸರ್ಕಾರಿ ಉತ್ತನಹಳ್ಳಿ ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವ ಫೆ.28ರಿಂದ ಮಾ.2ರವರೆಗೆ ನಡೆಯಲಿದೆ. ಫೆ.28ರಂದು ಬೆಳಗ್ಗೆ ತ್ರಿಪುರ ಸುಂದರಿ ಅಮ್ಮನವರಿಗೆ ಏಕಾದಶವಾರ ರುದ್ರಾಭಿಷೇಕ, ಸುವರ್ಣಾಲಂಕಾರ, ಸಹಸ್ರ ನಾಮಾರ್ಚನೆ, ನಿವೇದನೆ, ಮಹಾ ಮಂಗಳಾರತಿ, ರಾಜೋಪಚಾರ, ರಾಷ್ಟ್ರಾಶೀರ್ವಾದ, ತೀರ್ಥ ಪ್ರಸಾದ ವಿನಿಯೋಗ, ಮಧ್ಯಾಹ್ನ 12.30ಕ್ಕೆ ಪ್ರಸಾದ ವಿನಿಯೋಗ, ಪ್ರದೋಷ ಕಾಲದ ಪೂಜೆ, ತ್ರಿಶತಿ ನಾಮಾರ್ಚನೆ, ಮಹಾ ಮಂಗಳಾರತಿ, ರಾತ್ರಿ 8.30ಕ್ಕೆ ಕನ್ಯಾಕನ್ನಡಿ ಅಮ್ಮನವರ ಉತ್ಸವ, ಪುಣ್ಯಾಹ, ಮಂಟಪೋತ್ಸವ ನಡೆಯಲಿದೆ. ಮಾ.1ರಂದು ಬೆಳಗ್ಗೆ ದ್ವಿತೀಯ ಉತ್ತರ ನಕ್ಷತ್ರ ಶ್ರೀಯವರಿಗೆ ಏಕಾ ದಶವಾರ ರುದ್ರಾಭಿಷೇಕ, ಸಹಸ್ರನಾಮಾರ್ಚನೆ, ವಿಶೇಷ ಪೂಜೆಗಳು, ಕದಲಿ ಅಲಂಕಾರ, ಮಧ್ಯಾಹ್ನ 12.30ಕ್ಕೆ ಪ್ರಸಾದ ವಿನಿಯೋಗ. ಮಾ.2ರಂದು ತೃತೀಯ ಹಸ್ತ ನಕ್ಷತ್ರ ಶ್ರೀಯವರಿಗೆ ಏಕಾದಶವಾರ ರುದ್ರಾಭಿಷೇಕ, ಪಂಚೋಪಚಾರ ಪೂಜೆ, ಮಹಾ ಮಂಗಳಾರತಿ, ಮಧ್ಯಾಹ್ನ 12.30ಕ್ಕೆ ಪ್ರಸಾದ ವಿನಿಯೋಗ ನಡೆಯಲಿದೆ.