ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ 10 ದಿನ `ಕ್ರಾಫ್ಟ್ಸ್ ಬಜಾರ್’
ಮೈಸೂರು

ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ 10 ದಿನ `ಕ್ರಾಫ್ಟ್ಸ್ ಬಜಾರ್’

February 28, 2021

ಮೈಸೂರು, ಫೆ.27(ವೈಡಿಎಸ್)- ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿನ `ಜೆಎಸ್‍ಎಸ್ ಅರ್ಬನ್ ಹಾತ್’ನಲ್ಲಿ 10 ದಿನಗಳ `ಕ್ರಾಫ್ಟ್ಸ್ ಬಜಾರ್’ ಕರಕುಶಲ ವಸ್ತುಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ.

ಜೆಎಸ್‍ಎಸ್ ಅರ್ಬನ್ ಹಾತ್, ನವದೆಹಲಿಯ ಜವಳಿ ಮಂತ್ರಾ ಲಯದ ಸಹಯೋಗದಲ್ಲಿ ಮಾ.7 ರವರೆಗೆ ಆಯೋಜಿಸಿರುವ ಈ ಮೇಳದಲ್ಲಿ ಕರ್ನಾಟಕ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳ 50ಕ್ಕೂ ಹೆಚ್ಚು ಕುಶಲಕರ್ಮಿಗಳು ಭಾಗವಹಿಸಿದ್ದು, ತಮ್ಮ ರಾಜ್ಯದ ಕರಕುಶಲ ವಸ್ತುಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲಿದ್ದಾರೆ. ಮಹಾರಾಷ್ಟ್ರದ ರೇಷ್ಮೆ ಸೀರೆ, ಕೊಲ್ಲಾಪುರ ಚಪ್ಪಲಿ, ದೆಹಲಿ ಮಣ್ಣಿನಿಂದ ತಯಾರಿಸಿದ ಗೃಹಾಲಂಕಾರಿಕ ಹೂಜಿಗಳು, ಪೀಠೋಪಕರಣ ಗಳು, ಡ್ರೆಸ್‍ಗಳು, ಗುಜರಾತ್‍ನ ಬಣ್ಣದ ಹೂ ಕುಂದಗಳು, ವುಲ್ಲನ್ ಶಾಲು, ಪಶ್ಚಿಮ ಬಂಗಾಳದ ಸೆಣಬಿನ ವಸ್ತುಗಳು, ಬಾಟಿಕ್ ಸೀರೆಗಳು, ಈಶಾನ್ಯ ರಾಜ್ಯಗಳ ಬಿದಿರಿನ ಗೃಹೋಪಯೋಗಿ ವಸ್ತುಗಳು, ಸಾಂಪ್ರದಾಯಿಕ ಗೊಂಬೆಗಳು, ಅಂಧ್ರಪ್ರದೇಶದ ಲೇಸ್, ಹೈದರಾಬಾದ್‍ನ ಮುತ್ತ್ತಿನ ಆಭರಣ, ತಮಿಳುನಾಡಿನ ಮರದ ಕೆತ್ತನೆ, ಕೈಮಗ್ಗದ ವಸ್ತುಗಳು, ಮಧ್ಯಪ್ರದೇಶದ ಚಂದೇರಿ ರೇಷ್ಮೆ ಸೀರೆಗಳು, ಬಾಟಿಕ್ ಉಡುಗೆ-ತೊಡುಗೆ, ಕರ್ನಾಟಕದ ಕುಂದಣಕಲೆ, ರೇಷ್ಮೆ ಸೀರೆಗಳು, ಚನ್ನಪಟ್ಟಣದ ಗೊಂಬೆಗಳು ಮಾರಾಟಕ್ಕಿವೆ. ಮೇಳ ಪ್ರತಿದಿನ ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ತೆರೆದಿರಲಿದೆ.

 

 

 

Translate »