ಮತದಾರರ ಸ್ವಾಭಿಮಾನ ಅಭಿಯಾನ ಕಾರ್ಯಕ್ರಮ
ಮೈಸೂರು

ಮತದಾರರ ಸ್ವಾಭಿಮಾನ ಅಭಿಯಾನ ಕಾರ್ಯಕ್ರಮ

February 9, 2022

ಮೈಸೂರು, ಫೆ. 8- ನಗರದ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಆವರಣದಲ್ಲಿ ಮತದಾರರ ಸ್ವಾಭಿಮಾನ ಅಭಿಯಾನ, ಕರ್ನಾಟಕ ವತಿ ಯಿಂದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜು ಮತ್ತು ವಿದ್ಯಾವರ್ಧಕ ಕಾನೂನು ಕಾಲೇಜುಗಳ ಸಹಯೋಗದೊಂದಿಗೆ “ಜನತಂತ್ರ ರಕ್ಷಣೆ – ಮತದಾರರ ಹೊಣೆ” ಮತದಾರ ಜಾಗೃತಾ ಕಾರ್ಯ ಕ್ರಮವನ್ನು ಆಯೋಜಿಸಲಾಗಿತ್ತು.

ಓಟು ಮಾರಾಟದ ಸರಕಲ್ಲ; ಜನ ತಂತ್ರದ ನಮ್ಮ ಹಕ್ಕು. ಓಟನ್ನು ಮಾರಿ ಕೊಳ್ಳುವುದು ಬೇಡ, ಭ್ರಷ್ಟಾಚಾರ ಮುಕ್ತ ಸರ್ವೋದಯ ಸಮಾಜ ರೂಪಿಸಲು ಸ್ವಾತಂತ್ರ್ಯದ ನಮ್ಮ ಹಕ್ಕನ್ನು ಪ್ರಾಮಾಣಿಕ ವಾಗಿ ಚಲಾಯಿಸೋಣ. ಈ ಮಹತ್ಕಾ ರ್ಯವನ್ನು ಕೆಲವರೇ ಕೂಡಿ ಸಾಧಿಸಲು ಸಾಧ್ಯವಿಲ್ಲ. ಎಲ್ಲರೂ ಒಗ್ಗೂಡಿ ಬೃಹತ್ ಜನಾಂದೋಲನವಾಗಿ ರೂಪಿಸೋಣ. ನಮ್ಮ ಸ್ವಾಭಿಮಾನದ ಬದುಕನ್ನು ಕಾಪಾಡಿ ಕೊಳ್ಳೋಣ. ನಮ್ಮನ್ನು ನಾವೇ ಆಳಿ ಕೊಳ್ಳೋಣ ಎಂದು ಜಾಗೃತಿ ಅಭಿಯಾನದ ಸಂಚಾಲಕ ಡಾ.ಕೆ.ಜಯರಾಮಯ್ಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಪಿ.ವಿಶ್ವನಾಥ್ ವಿದ್ಯಾರ್ಥಿ ಗಳಲ್ಲಿ ಮತದಾನದ ಜಾಗೃತಿ ಮೂಡಿ ಸುವ ಸಲುವಾಗಿ ಭಿತ್ತಿಪತ್ರಗಳನ್ನು ಹಂಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷ ಗುಂಡಪ್ಪಗೌಡ ಮಾತನಾಡಿ, ಮತ ದಾರರು ಬುದ್ಧಿವಂತಿಕೆಯಿಂದ ಸದ್ಯ ಸಮಾಜವನ್ನು ಕಿತ್ತುತಿನ್ನುವ ಖಾಯಿಲೆ ಯಾದ ದುಡ್ಡು ಕೊಟ್ಟು ಮತವನ್ನು ಕೊಂಡುಕೊಳ್ಳುವ ಪದ್ಧತಿಯನ್ನು ಬುಡ ದಿಂದ ಕಿತ್ತುಹಾಕಬೇಕು. ಪ್ರತಿಯೊಬ್ಬ ನಾಗರಿಕನು ಪ್ರಜ್ಞಾವಂತನಾಗಿ ಯೋಚಿಸಿ ಒಳ್ಳೆ ವ್ಯಕ್ತಿಯನ್ನು ಆಯ್ಕೆ ಮಾಡಿ ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ಇನ್ನಾದರೂ ಸರಿ ಯಾದ ದಾರಿಯಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಯುವಶಕ್ತಿ ಒಂದಾಗಬೇಕು ಎಂದು ತಿಳಿಸಿದರು.

ರೈತ ಸಂಘದ ಎನ್.ಜಿ.ರಾಮಚಂದ್ರ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಮರೀಗೌಡ, ಕಾನೂನು ಕಾಲೇ ಜಿನ ಪ್ರಾಂಶುಪಾಲರಾದ ಡಾ.ದೀಪು, ಅಧ್ಯಾಪಕರು, ಅಧ್ಯಾಪಕೇತರರು, ವಿದ್ಯಾರ್ಥಿ ವೃಂದ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ವಿದ್ಯಾವರ್ಧಕ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ.ಬಿ.ಟಿ.ರಘು ಕಾರ್ಯಕ್ರಮವನ್ನು ನಿರೂಪಿಸಿದರು.

Translate »