ಶ್ರೀಮತ್ಕøಷ್ಣರಾಜಗುಣಾಲೋಕ, ಖಡ್ಗಶಾಸ್ತ್ರ, ಮನುಶಾಸ್ತ್ರ ವಿವರಣಮ್ ಲೋಕಾರ್ಪಣೆ
ಮೈಸೂರು

ಶ್ರೀಮತ್ಕøಷ್ಣರಾಜಗುಣಾಲೋಕ, ಖಡ್ಗಶಾಸ್ತ್ರ, ಮನುಶಾಸ್ತ್ರ ವಿವರಣಮ್ ಲೋಕಾರ್ಪಣೆ

October 28, 2020

ಮೈಸೂರು, ಅ.27(ಪಿಎಂ)- ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚ್ಯವಿದ್ಯಾ ಸಂಶೋ ಧನಾಲಯ (ಓಆರ್‍ಐ) ಪ್ರಕಾಶನದಲ್ಲಿ ಹೊರತಂದಿರುವ `ಮನುಶಾಸ್ತ್ರ ವಿವರಣಮ್’, `ಖಡ್ಗಶಾಸ್ತ್ರ’ ಹಾಗೂ `ಶ್ರೀಮತ್ಕøಷ್ಣರಾಜ ಗುಣಾಲೋಕ’ ಎಂಬ 3 ಮಹತ್ವದ ಗ್ರಂಥ ಗಳನ್ನು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಲೋಕಾರ್ಪಣೆಗೊಳಿಸಿದರು.

ಮೈಸೂರಿನ ಕೃಷ್ಣರಾಜ-ಬುಲೇವಾರ್ಡ್ ರಸ್ತೆಯ ವಿವಿ ಕ್ರಾಫರ್ಡ್ ಭವನದ ಎಸಿ ಸಭಾಂಗಣದಲ್ಲಿ ನಡೆದ ಸರಳ ಕಾರ್ಯ ಕ್ರಮದಲ್ಲಿ ಗ್ರಂಥಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಕುಲಪತಿ, ಓಆರ್‍ಐ ನಮ್ಮ ವಿವಿಯ ಜ್ಞಾನ ಕಣಜ. ಅಲ್ಲಿರುವ ಅಮೂಲ್ಯ ಹಸ್ತಪ್ರತಿಗಳನ್ನು ಮುದ್ರಿಸಿ ಪುಸ್ತಕರೂಪ ದಲ್ಲಿ ಜನತೆಗೆ ತಲುಪಿಸುವ ಕಾರ್ಯ ನಿರಂತರ ನಡೆಯುತ್ತಿದೆ ಎಂದರು.

ಹಲವು ಗ್ರಂಥಗಳ ಬಿಡುಗಡೆಗೆ ಓಆರ್‍ಐ ವ್ಯವಸ್ಥೆ ಮಾಡಿಕೊಂಡಿರುವುದು ಪ್ರಶಂಸ ನೀಯ. ಆ ಕಾರ್ಯಕ್ರಮಕ್ಕೆ ಜನಪ್ರತಿನಿಧಿ ಗಳು, ವಿದ್ವಾಂಸರನ್ನು ಆಹ್ವಾನಿಸಿ ಬಿಡುಗಡೆ ಮಾಡಿಸುವ ಉದ್ದೇಶವಿದೆ ಎಂದರು.

ಕುಲಸಚಿವ ಪ್ರೊ.ಆರ್.ಶಿವಪ್ಪ ಮಾತನಾಡಿ, ಓಆರ್‍ಐ ಎಂಬ ಜ್ಞಾನ ಭಂಡಾರದಲ್ಲಿ ಎಷ್ಟೊ ವಿದ್ವಾಂಸರು ಕಾರ್ಯನಿರ್ವಹಿಸಿ ವಿಶಿಷ್ಟ ಕೊಡುಗೆ ನೀಡಿದ್ದಾರೆ. ನನ್ನ ಗುರುಗಳಾದ ಜಿ.ರಾಮಕೃಷ್ಣ ಅವರೂ ಈ ಸಂಸ್ಥೆಯಲ್ಲಿ ಸಂಶೋಧನೆ ನಡೆಸಿ `ಭಾರತೀಯ ತತ್ವಜ್ಞಾನ’ ಗ್ರಂಥ ಸಂಪಾದಿಸಿದ್ದಾರೆ. ಪ್ರಾಚೀನ ಹಾಗೂ ಹಲವು ಶತಮಾನಗಳ ಜ್ಞಾನದ ಮಜಲು ಗಳನ್ನು ಜನಸಾಮಾನ್ಯರು ಅರ್ಥೈಸಿ ಕೊಳ್ಳಲು ಈ ರೀತಿ ಗ್ರಂಥಗಳನ್ನು ಹೊರ ತರುವುದು ಮುಖ್ಯ ಎಂದರು.

ಇದಕ್ಕೂ ಮುನ್ನ `ಖಡ್ಗಶಾಸ್ತ್ರ’ ಗ್ರಂಥದ ಸಂಪಾದಕಿ, ಹಿರಿಯ ಸಂಶೋಧಕಿ ವೈ.ಸಿ. ಭಾನುಮತಿ ಮಾತನಾಡಿ, ಪ್ರಾಚೀನ ಕರ್ನಾ ಟಕದಲ್ಲಿ ಅಸಿ (ಕತ್ತಿ/ಖಡ್ಗ), ಮಸಿ (ಬರ ವಣಿಗೆ) ಹಾಗೂ ಕೃಷಿಗೆ ಬಹಳ ಮಹತ್ವ ನೀಡಲಾಗಿತ್ತು. ರಾಜ್ಯರಕ್ಷಣೆ ದೃಷ್ಟಿಯಿಂದ ಸಮರಕಲೆ ಕಲಿಕೆಗೆ ಪ್ರಾಮುಖ್ಯತೆ ನೀಡ ಲಾಗಿತ್ತು ಎಂದು ಗಮನ ಸೆಳೆದರು.

ಖಡ್ಗಶಾಸ್ತ್ರ ಎಂದರೆ ಕೇವಲ ಕತ್ತಿಯ ಸಂಕೇತವಲ್ಲ. ಸಮಗ್ರ ಸಮರ ಕಲೆಯ ಚಿತ್ರಣ. ಓಆರ್‍ಐ ಹೊರತುಪಡಿಸಿ ಬೇರೆಲ್ಲೂ `ಖಡ್ಗಶಾಸ್ತ್ರದ’ ಹಸ್ತಪ್ರತಿ ಇದ್ದಂ ತಿಲ್ಲ. ಅದು ಇಲ್ಲಿವರೆಗೂ ಪ್ರಕಟಣೆ ಆಗಿರ ಲಿಲ್ಲ ಎಂದು ಹೇಳಿದರು.

`ಶ್ರೀಮತ್ಕøಷ್ಣರಾಜಗುಣಾಲೋಕ’ ಗ್ರಂಥದ ಸಂಪಾದಕಿ, ಓಆರ್‍ಐ ಸಂಸ್ಥೆ ಸಹಾಯಕ ಸಂಶೋಧಕಿ ಪಿ.ಗೌರಿ ಮಾತನಾಡಿ, ಈ ಗ್ರಂಥದ ಮೂಲ ಕರ್ತೃ ಕ್ರಿ.ಶ.18ನೇ ಶತಮಾನ ದವರು. ಅವರು ಮೈಸೂರಿನವರೇ ಆದ ಶ್ರೀನೀಲಕಂಠರು. ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಆಸ್ಥಾನ ಕವಿಯಾಗಿದ್ದ ಅವರು, ಮುಮ್ಮಡಿಯವರ ಆಡಳಿತವನ್ನು `ಸುವರ್ಣಕಾಲ’ ಎಂದು ವರ್ಣಿಸಿದ್ದಾರೆ. ಸಾಮಾನ್ಯರಿಗೂ ಅರ್ಥ ವಾಗುವಂತೆ ಈ ಕೃತಿ ರಚಿಸಿದ್ದಾರೆ. ಅಂದಿನ ರಾಜಾಡಳಿತ, ಪ್ರಜೆಗಳ ಬಗ್ಗೆ ಮಹಾರಾಜ ರಿಗೆ ಇದ್ದ ಕಾಳಜಿ ಹಾಗೂ ಕಲೆ, ಸಾಹಿತ್ಯ, ವಿಜ್ಞಾನ ವಿಷಯಗಳಿಗೆ ಮಹಾರಾಜರು ನೀಡಿದ್ದ ಪ್ರೋತ್ಸಾಹದ ಬಗ್ಗೆ ಸವಿವರವಾಗಿ ಚಿತ್ರಿಸಿದ್ದಾರೆ ಎಂದು ವಿವರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಓಆರ್‍ಐ ನಿರ್ದೇಶಕ ಎಸ್.ಶಿವರಾಜಪ್ಪ, ನಮ್ಮ ಸಂಸ್ಥೆ ಯಲ್ಲಿ ಹಿರಿಯ ಸಂಶೋಧಕರಾಗಿದ್ದ, ಈಗ ನಿವೃತ್ತರಾಗಿರುವ ಎಸ್.ಜಗನ್ನಾಥ್ `ಮನುಶಾಸ್ತ್ರ ವಿವರಣಮ್’ ಸಂಪಾದಿಸಿ ದ್ದಾರೆ. ತಾಳೆಗರಿ ಹಸ್ತಪ್ರತಿಯಲ್ಲಿ `ತಿಗಳಾರಿ’ ಎಂಬ ವಿರಳಾತಿವಿರಳ ಲಿಪಿಯಲ್ಲಿ ಈ ಗ್ರಂಥ ರಚನೆಯಾಗಿರುವುದು ವಿಶೇಷ. ಇದನ್ನು ಸಂಶೋಧಿಸಿ, ಪ್ರಾಚೀನ ಧರ್ಮಶಾಸ್ತ್ರ ಕುರಿತು ಅಧ್ಯಯನ ನಡೆಸಲು ಜಗನ್ನಾಥ್ ಆಕರ ಗ್ರಂಥವನ್ನೂ ಕೊಡಮಾಡಿದ್ದಾರೆ. ಭಾನು ಮತಿ ಅವರು `ಖಡ್ಗಶಾಸ್ತ್ರ’ ತಾಳೆಗರಿ ಹಸ್ತಪ್ರತಿ ಆಧರಿಸಿ ಪ್ರಾಚೀನ ಕನ್ನಡ ನಾಡಿನ ಸಮರ ಕಲೆಯ ಮಹತ್ವದ ಅಂಶಗಳನ್ನು ಬೆಳಕಿಗೆ ತಂದಿದ್ದಾರೆ ಎಂದು ವಿವರಿಸಿದರು.

ಕಾಗದ ಹಸ್ತಪ್ರತಿಯಲ್ಲಿದ್ದ ಕನ್ನಡ ಲಿಪಿ, ಸಂಸ್ಕøತ ಭಾಷೆಯ `ಶ್ರೀಮತ್ಕøಷ್ಣರಾಜ ಗುಣಾ ಲೋಕ’ ಗ್ರಂಥವನ್ನು ಸಂಪಾದಿಸಿರುವ ಪಿ.ಗೌರಿ, ಕನ್ನಡಿಗರಿಗೆ ಸುಲಭವಾಗಿ ಅರ್ಥವಾಗು ವಂತೆ ಅಲಂಕಾರ, ವ್ಯಾಕರಣ ಮೊದಲಾದ ವಿಷಯ ಒಳಗೊಂಡಂತೆ ಅಚ್ಚುಕಟ್ಟಾಗಿ ಕನ್ನಡಾನುವಾದ ಮಾಡಿದ್ದಾರೆ ಎಂದರು.

 

Translate »