ಸ್ವಚ್ಛತೆಗೆ ಆದ್ಯತೆ ನೀಡದಿದ್ದರೆ ಸೂಕ್ತ ಕ್ರಮದ ಎಚ್ಚರಿಕೆ
ಮೈಸೂರು

ಸ್ವಚ್ಛತೆಗೆ ಆದ್ಯತೆ ನೀಡದಿದ್ದರೆ ಸೂಕ್ತ ಕ್ರಮದ ಎಚ್ಚರಿಕೆ

July 17, 2021

ಭೇರ್ಯ, ಜು.16- ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಹೆಚ್ಚು ಆದ್ಯತೆ ನೀಡದಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಾಪಂ ಇಓ ಹೆಚ್.ಕೆ.ಸತೀಶ್ ಭೇರ್ಯ ಗ್ರಾಪಂ ಪಿಡಿಓ ಹಾಗೂ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು. ಭೇರ್ಯ ಗ್ರಾಪಂಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಗ್ರಾಪಂ ಅಧ್ಯಕ್ಷರು ಹಾಗೂ ಸಿಬ್ಬಂದಿ ಜೊತೆ ಚರ್ಚಿಸಿದರು.

ಬಳಿಕ ಮಾತನಾಡಿದ ಅವರು, ಗ್ರಾಪಂ ವ್ಯಾಪ್ತಿಯ ಬಡವರನ್ನು ನಿತ್ಯ ಪಂಚಾ ಯತಿಗೆ ಅಲೆಸಬೇಡಿ, ಅವರಿಂದ ಪಡೆದ ಅರ್ಜಿಗಳನ್ನು ಮುತುವರ್ಜಿ ವಹಿಸಿ ಶೀಘ್ರ ವಿಲೇವಾರಿ ಮಾಡಿ. ಇಲ್ಲದಿದ್ದಲ್ಲಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಅಲ್ಲದೆ ರೈತರಿಗೆ ಅನು ಕೂಲವಾಗುವಂತೆ ನರೇಗಾ ಮೂಲಕ ವೈಯಕ್ತಿಕ ಕಾಮಗಾರಿ ಮಾಡಿಸಿ ಎಂದು ಪಿಡಿಓಗೆ ತಾಕೀತು ಮಾಡಿದರು.

ಬಳಿಕ ಮುಂಜನಹಳ್ಳಿ ಗ್ರಾಪಂಗೆ ಭೇಟಿ ನೀಡಿ, ತಾಪಂನಿಂದ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ಆರ್ಥಿಕ ನೆರವಿನ ಚೆಕ್ ವಿತರಿಸಿದರು. ನಂತರ ಹೊಸ ಅಗ್ರಹಾರ ಗ್ರಾಪಂ ಕಚೇರಿಗೆ ತೆರಳಿ ಕಡತಗಳನ್ನು ಪರಿಶೀಲಿಸಿದರು.

ಭೇರ್ಯ ಗ್ರಾಪಂ ಅಧ್ಯಕ್ಷೆ ಮೊಹಸೀನ್ ತಾಜ್, ಉಪಾಧ್ಯಕ್ಷ ಬಿ.ಕೆ.ಶಿವಕುಮಾರ್, ಸದಸ್ಯರಾದ ಬಿ.ಕೆ. ಕುಮಾರ್, ಬಿ.ಎಲ್. ರಾಜಶೇಖರ್, ಪ್ರಕಾಶ, ಪಿಡಿಓ ಕೆ.ಎ.ಮಂಜು ನಾಥ್, ಕಾರ್ಯದರ್ಶಿ ತುಕರಾಂ, ಮುಂಜನ ಹಳ್ಳಿ ಪಿಡಿಓ ಪ್ರತಾಪ್, ಹೊಸ ಅಗ್ರಹಾರ ಪಿಡಿಓ ಅಶ್ವಿನಿ, ಗ್ರಾಪಂ ಮಾಜಿ ಅಧ್ಯಕ್ಷ ಡಿ.ಎಸ್. ಯೋಗೇಶ್, ನರೇಗಾ ತಾಂತ್ರಿಕ ಇಂಜಿನಿಯರ್ ಶಿವ ಕುಮಾರ್, ಮುಖಂಡ ಮಹೇಶ್, ತನು, ರಾಜಯ್ಯ ಮತ್ತಿತರರಿದ್ದರು.

Translate »