ಕೆರೆ ಕಟ್ಟೆಗಳ ಅಭಿವೃದ್ಧಿಗೆ ನರೇಗಾ ಸದ್ಬಳಕೆ ಶ್ಲಾಘನೀಯ
ಮೈಸೂರು

ಕೆರೆ ಕಟ್ಟೆಗಳ ಅಭಿವೃದ್ಧಿಗೆ ನರೇಗಾ ಸದ್ಬಳಕೆ ಶ್ಲಾಘನೀಯ

July 17, 2021

ಹುಣಸೂರು, ಜು.16(ಕೆಕೆ)- ತಾಲೂಕಿನ ಕರ್ಣಕುಪ್ಪೆ ಗ್ರಾಪಂ ವ್ಯಾಪ್ತಿಯ 13 ಕೆರೆಗಳ ಅಭಿವೃದ್ಧಿಗೆ ನರೇಗಾ ಯೋಜನೆ ಸದ್ಬಳಕೆ ಮಾಡಿಕೊಂಡಿರುವುದು ಶ್ಲಾಘನೀಯ ಎಂದು ಶಾಸಕ ಹೆಚ್.ಪಿ.ಮಂಜುನಾಥ್ ತಿಳಿಸಿದರು.

ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಕರಿಯಯ್ಯನಕೆರೆ, ಹಳೆಕೆರೆ, ಕಣಗಾಲಮ್ಮನ ಕೆರೆಗಳ ಅಭಿವೃದ್ಧಿ ಪರಿಶೀಲಿಸಿ ಮಾತನಾಡಿದ ಅವರು, ಇದೇ ರೀತಿ ನರೇಗಾ ಯೋಜನೆಯಡಿ ಪಂಚಾಯಿತಿ ವ್ಯಾಪ್ತಿಯ ಕೆರೆಕಟ್ಟೆಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು.

ಕರ್ಣಕುಪ್ಪೆ ಗ್ರಾಪಂ ವ್ಯಾಪ್ತಿಯಲ್ಲಿ 28 ಕೆರೆಗಳಿದ್ದು, ಎಲ್ಲಾ ಕೆರೆಗಳ ಅಭಿವೃದ್ಧಿಗೆ ಪಂಚಾಯಿತಿ ವತಿಯಿಂದ ಯೋಜನೆ ರೂಪಿಸಲಾಗಿದೆ. ಕೆರೆಗಳ ಅಭಿವೃದ್ಧಿಗೆ 5 ಲಕ್ಷ ರೂ. ಮೀಸಲಿರಿಸಿದ್ದು ಈ ವರ್ಷ 13 ಕೆರೆಗಳನ್ನು ಅಭಿವೃದ್ಧಿಗೆ ಕೈಗೆತ್ತಿಕೊಳ್ಳ ಲಾಗಿದೆ ಎಂದರು.

ಸರ್ಕಾರೇತರ ಸಂಘ ಸಂಸ್ಥೆಗಳು ತೋರಿಕೆಗೆ ಅಭಿವೃದ್ಧಿ ಮಾಡುತ್ತವೆ. ಆದರೆ ಇಲ್ಲಿನ ಪಿಡಿಓ ರಾಮಣ್ಣ ಜನಪ್ರತಿನಿಧಿ ಗಳಲ್ಲಿ ಅರಿವು ಮೂಡಿಸಿ ಉತ್ತಮ ಕಾರ್ಯ ಮಾಡಿ ದ್ದಾರೆ ಎಂದರು. ಪಿಡಿಓ ರಾಮಣ್ಣ ಮಾತನಾಡಿ, ಮುಂದಿನ 5 ವರ್ಷಗಳಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂತರ್ಜಲ ಮರುಹೂರಣ ಘಟಕ ಸ್ಥಾಪನೆ ಮತ್ತು ಕೆರೆಗಳ ಅಭಿವೃದ್ಧಿ ಕಾರ್ಯವನ್ನು ಸಂಪೂರ್ಣ ಗೊಳಿಸಲಾಗುವುದು ಎಂದರು.

ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವ ನಾಥ್, ಹುಡಾ ಅಧ್ಯಕ್ಷ ಗಣೇಶ್ ಕುಮಾರ ಸ್ವಾಮಿ, ಗ್ರಾಪಂ ಅಧ್ಯಕ್ಷೆ ಸರಸ್ವತಿ, ಸದಸ್ಯ ರಾದ ಪಾಪಣ್ಣ, ಮಾದೇಗೌಡ, ತಹಸೀ ಲ್ದಾರ್ ಬಸವರಾಜು, ಇಓ ಗಿರೀಶ್ ಮತ್ತಿತರರಿದ್ದರು.

 

 

Translate »