ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಮೈಸೂರು

ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

July 17, 2021

ಪಿರಿಯಾಪಟ್ಟಣ, ಜು.16 (ವೀರೇಶ್)- ಶಾಸಕನಾಗಿ ಆಯ್ಕೆಯಾದಾಗಿನಿಂದ ಸಾರ್ವ ಜನಿಕ ಜೀವನದಲ್ಲಿ ಬದ್ಧತೆ ಇಟ್ಟುಕೊಂಡು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿ ರುವುದಾಗಿ ಶಾಸಕ ಕೆ.ಮಹದೇವ್ ತಿಳಿಸಿದರು.

ತಾಲೂಕಿನ ವಿವಿಧ ಗ್ರಾಮಗಳಲ್ಲಿ 1.5 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಅವರು, ತಾಲೂಕಿನ ದೊಡ್ಡಹರವೆ ಗ್ರಾಮದಲ್ಲಿ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

ಹಳ್ಳಿಗಳ ಸ್ಥಳೀಯ ಸಮಸ್ಯೆಗಳನ್ನು ಬಗೆ ಹರಿಸಲು ಶಾಸಕನಾದ ನನ್ನೊಬ್ಬನಿಂದ ಸಾಧ್ಯವಿಲ್ಲ. ಇದಕ್ಕೆ ಸ್ಥಳೀಯ ಜನಪ್ರತಿನಿಧಿ ಗಳೂ ಸಹಕಾರ ನೀಡಬೇಕು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತಾಲೂಕಿನ ಅಭಿ ವೃದ್ಧಿಗೆ ಸಾಕಷ್ಟು ಅನುದಾನ ತಂದಿದ್ದೇನೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿ ಯಾಗಿದ್ದ ಸಂದರ್ಭ ಯಾವುದೇ ಶಾಸಕರಿಗೂ ತಾರತಮ್ಯ ಮಾಡದೆ ಸರಿಸಮನಾಗಿ ಅನು ದಾನ ಹಂಚಿದ್ದರು. ಆದರೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ನಾನು ವಿಪಕ್ಷ ಶಾಸಕನಾಗಿರುವುದರಿಂದ ಅನುದಾನ ಹಂಚಿಕೆಯಲ್ಲಿ ತಾರತಮ್ಯ ವಾಗುತ್ತಿದೆ. 2008ರಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ದೊಡ್ಡಹರವೆ 1ನೇ ಬ್ಲಾಕ್ ಅಭಿವೃದ್ಧಿಗಾಗಿ 1 ಕೋಟಿಗೂ ಹೆಚ್ಚು ಅನುದಾನ ಮಂಜೂರು ಮಾಡಿಸಿದ್ದೆ. ಆದರೂ ಈ ಭಾಗದ ಮತದಾರರು ಮತ ನೀಡದ ಕಾರಣ ಚುನಾವಣೆಯಲ್ಲಿ ಪರಾಭವಗೊಂಡೆ. ರಾಜಕಾರಣದಲ್ಲಿ ಯಾರೂ ಶತ್ರುಗಳೂ ಅಲ್ಲ ಮಿತ್ರರೂ ಅಲ್ಲ. ಅಧಿಕಾರ ಒಬ್ಬರಿಗೆ ಮಾತ್ರ ಶಾಶ್ವತವಲ್ಲ. ಜನಪ್ರತಿನಿಧಿಯಾದ ಮೇಲೆ ಮತದಾರರ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕಾರ್ಯ ನಿರ್ವಹಿಸುತ್ತಿದ್ದೇನೆ. ಗುತ್ತಿಗೆ ದಾರರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡುವಂತೆ ಸೂಚಿಸಿದರು.

ಈ ವೇಳೆ ದೊಡ್ಡಹರವೆ, ಮಂಚದೇವನ ಹಳ್ಳಿ ಹಾಗೂ ಹಿಟ್ನಹಳ್ಳಿ ಗ್ರಾಮಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡ ಲಾಯಿತು. ಈ ಸಂದರ್ಭ ತಹಸೀಲ್ದಾರ್ ಕೆ.ಚಂದ್ರಮೌಳಿ, ತಾಪಂ ಇಓ ಸಿ.ಆರ್. ಕೃಷ್ಣಕುಮಾರ್, ಬೈಲಕುಪ್ಪೆ ಗ್ರಾಪಂ ಅಧ್ಯಕ್ಷೆ ಶಿವಮ್ಮ ಮತ್ತು ಸದಸ್ಯರು, ಪಿಡಿಓ ಬೋರೇ ಗೌಡ, ಪಿಡಬ್ಲ್ಯೂಡಿ ಎಇಇ ಜಯಂತ್, ಜಿಪಂ ಎಇಇ ಮಂಜುನಾಥ್, ಪಶು ಸಂಗೋ ಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್, ಹಿಟ್ನೆ ಹೆಬ್ಬಾಗಿಲು ಗ್ರಾಪಂ ಸದಸ್ಯೆ ಯಶೋ ಧಮ್ಮ, ಪಿಡಿಓ ಪ್ರಶಾಂತ್, ಕಾರ್ಯದರ್ಶಿ ದಮಯಂತಿ, ಸೆಸ್ಕ್ ಎಇ ಮಣಿಕಂಠ, ಕಂದಾಯಾಧಿಕಾರಿ ಪ್ರದೀಪ್, ಗ್ರಾಮ ಲೆಕ್ಕಿಗ ನವೀನ್, ಮುಖಂಡರಾದ ಗೋವಿಂದೇಗೌಡ, ಮಹದೇವ್, ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿ ಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.

Translate »