ಕೊರೊನಾ ಸಂಕಷ್ಟ: ಕಲಾವಿದರಿಗೆ ನೆರವಾಗಲು `ಕಲಾಸಮರ್ಪಣೆ’ ಸಂಗೀತ ಕಾರ್ಯಕ್ರಮ
ಮೈಸೂರು

ಕೊರೊನಾ ಸಂಕಷ್ಟ: ಕಲಾವಿದರಿಗೆ ನೆರವಾಗಲು `ಕಲಾಸಮರ್ಪಣೆ’ ಸಂಗೀತ ಕಾರ್ಯಕ್ರಮ

July 17, 2021

ಮೈಸೂರು, ಜು.16(ವೈಡಿಎಸ್)- ಲಾಕ್‍ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರ ಹಿತದೃಷ್ಟಿಯಿಂದ ರೋಟರಿ ಮೈಸೂರು ಹೆರಿಟೇಜ್, ಮೈಸೂರು ಆರ್ಟಿಸ್ಟ್ ಅಸೋಸಿಯೇಷನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಲಾಮಂದಿರದಲ್ಲಿ 3 ದಿನಗಳ ಕಾಲ ಆಯೋಜಿಸಿರುವ `ಕಲಾಸಮರ್ಪಣೆ’ ಸಂಗೀತ ಕಾರ್ಯಕ್ರಮಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಶುಕ್ರವಾರ ಚಾಲನೆ ನೀಡಿದರು.

ಬಳಿಕ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಕಲಾವಿದರನ್ನು ರಕ್ಷಿಸಿದರೆ ಮಾತ್ರ ಕಲೆ ಉಳಿಯುತ್ತದೆ, ಲಾಕ್‍ಡೌನ್‍ನಿಂದಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲದೆ ಸಾಕಷ್ಟು ಕಲಾವಿದರ ಕುಟುಂಬಗಳು ತೊಂದರೆಗೆ ಸಿಲುಕಿವೆ. ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಯಲ್ಲಿ ಕಲಾವಿದರಿಗೂ ನೆರವು ನೀಡಲಾಗಿದೆ. ಜತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಲಾವಿದರ ರಕ್ಷಣೆಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಕಲಾವಿದರೇ ಆಯೋಜಿಸಿರುವ ಕಲಾಸಮರ್ಪಣೆ ಕಾರ್ಯಕ್ರಮ ನೂರಾರು ಕಲಾವಿದರಿಗೆ ವೇದಿಕೆ ಸೃಷ್ಟಿಸಿದೆ. ಸಹಸ್ರಾರು ಕಲಾವಿದರ ಕುಟುಂಬಕ್ಕೆ ಆರ್ಥಿಕ ಶಕ್ತಿ ತುಂಬಿದೆ ಎಂದರು.

ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಮಾತನಾಡಿ, ಬೆಂಗಳೂರಿನಲ್ಲಿ ಸಂಸದ ತೇಜಸ್ವಿಸೂರ್ಯ ನೇತೃತ್ವದಲ್ಲಿ ನಡೆದ ಕಲಾನಿಧಿ ಕಾರ್ಯಕ್ರಮದ ಮಾದರಿಯಲ್ಲೇ ಕಲಾಸಮರ್ಪಣೆ ಸಂಗೀತ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಕೋವಿಡ್‍ನಿಂದಾಗಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಇಲ್ಲದಿದ್ದರೂ ಸಾಮಾಜಿಕ ಜಾಲತಾಣದ ಮೂಲಕ ಪ್ರದರ್ಶನ ಕಲಾಪೆÇ್ರೀತ್ಸಾಹಕರ ಮನೆ ಮನ ತಲುಪಲಿದೆ ಎಂದರು. ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹ ನಿರ್ದೇಶಕ ಚೆನ್ನಪ್ಪ, ಚಿತ್ರ ನಿರ್ಮಾ ಪಕ ಡಿಟಿ.ಪ್ರಕಾಶ್, ರೋಟರಿ ಹೆರಿಟೆಜ್ ಮೈಸೂರು ಅಧ್ಯಕ್ಷ ವೆಂಕಟೇಶ್, ಸಂಸ್ಥಾಪನಾ ಅಧ್ಯಕ್ಷ ಕೆ.ಮಂಜುನಾಥ್, ಮೈಸೂರು ಅರ್ಟಿಸ್ಟ್ ಅಸೋಸಿಯೇಷನ್‍ನ ರಘುನಾಥ್, ಗುರುದತ್, ಶುಭಾ, ರಾಘವೇಂದ್ರ, ಜೋಗಿ ಮಂಜು, ಅಜಯ್ ಶಾಸ್ತ್ರಿ ಮತ್ತಿತರರಿದ್ದರು.

Translate »