ಮೈಸೂರು, ಆ. 24- ವಿದ್ಯುತ್ ವ್ಯತ್ಯಯದ ಹಿನ್ನೆಲೆಯಲ್ಲಿ ಆ. 26ರಂದು ಮೈಸೂರು ನಗರ ಪಾಲಿಕೆ ವಾರ್ಡ್ ನಂ. 9ರಿಂದ 16, 28ರಿಂದ 39, 52, 53 ಇದಕ್ಕೆ ಸಂಬಂಧಪಟ್ಟ ಪ್ರದೇಶ ಗಳಾದ ಕೆಸರೆ, ರಾಜೇಂದ್ರನಗರ, ಸುಭಾಷ್‍ನಗರ, ಎನ್.ಆರ್.ಮೊಹಲ್ಲಾ, ಗಾಂಧಿನಗರ, ಉದಯ ಗಿರಿ, ರಾಜೀವ್‍ನಗರ, ಶಾಂತಿನಗರ, ಕಲ್ಯಾಣಗಿರಿ, ಡಾ. ರಾಜ್ ಕುಮಾರ್ ರಸ್ತೆಗೆ ಸೇರಿಕೊಂಡ ಪ್ರದೇಶಗಳು, ಯರಗನಹಳ್ಳಿ, ಸಿದ್ಧಾರ್ಥ ಬಡಾವಣೆ, ಆಲನಹಳ್ಳಿ, ನಂದಿನಿ ಬಡಾವಣೆ, ಗಿರಿ ದರ್ಶಿನಿ ಬಡಾವಣೆ, ಗೌಸಿಯಾನಗರ, ಕ್ಯಾತಮಾರನಹಳ್ಳಿ ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ಇನ್ನಿತರ ಪ್ರದೇಶಗಳಲ್ಲಿ ನೀರು ಸರಬರಾಜಲ್ಲಿ ವ್ಯತ್ಯಯವಾಗಲಿದೆ ಎಂದು ವಾಣಿವಿಲಾಸ ವಾಟರ್ ವಕ್ರ್ಸ್ ಪ್ರಕಟಣೆ ತಿಳಿಸಿದೆ.
