ಮೈಸೂರು, ಆ. 24- ಕ್ರಿಯಾಪದಗಳೇ ಇಲ್ಲದ ಸಣ್ಣ ಸಣ್ಣ ವಾಕ್ಯ ರಚನೆಯ ಹೊಸದೊಂದು ಶೈಲಿಯನ್ನು ಕನ್ನಡಕ್ಕೆ ಕೊಟ್ಟವರು ಪ್ರೊ. ಎಚ್ಚೆಸ್ಕೆ ಎಂದು ಹಿರಿಯ ಸಾಹಿತಿ ಹಾಗೂ ದತ್ತಪೀಠದ ಆಸ್ಥಾನ ವಿದ್ವಾನ್ ಡಾ. ಸಿಪಿಕೆ ನುಡಿದರು.
ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್ತು, ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಸಂಯುಕ್ತಾಶ್ರಯದಲ್ಲಿ ಹಿರಿಯ ಸಾಹಿತಿ ಪ್ರೊ. ಕೆ.ಭೈರವಮೂರ್ತಿ ನಿವಾಸ ದಲ್ಲಿ ಹಿರಿಯ ಅಂಕಣಕಾರ ಪ್ರೊ. ಎಚ್ಚೆಸ್ಕೆ ಜನ್ಮಶತಮಾನೋತ್ಸವದ ಅಂಗವಾಗಿ ಇತ್ತೀಚೆಗೆ ನಡೆದ ಸರಳ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಪ್ರೊ. ಎಚ್ಚೆಸ್ಕೆ ಅವರ ಅಂಕಣಬರಹಕ್ಕೆ ವಿಶ್ವದ ಆಗುಹೋಗುಗಳೆಲ್ಲವೂ ವಸ್ತು ವಿಷಯಗಳಾಗುತ್ತಿದ್ದವು. ಮೂಲತಃ ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಎಚ್ಚೆಸ್ಕೆ ಲಲಿತ ಪ್ರಬಂಧ, ಅಂಕಣ ಸಾಹಿತ್ಯ, ಬ್ಯಾಂಕಿಂಗ್ ಸಾಹಿತ್ಯ, ಕಾವ್ಯ ಕ್ಷೇತ್ರಗಳಲ್ಲೂ ಸಿದ್ಧಹಸ್ತರಾಗಿ ದ್ದರು. ಅವರೊಂದು ರೀತಿ ಗದ್ಯ ಮತ್ತು ಪದ್ಯಗಳ ಸವ್ಯಸಾಚಿ. ನಿರಂತರವಾಗಿ 50 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೆ ಯೊಂದಕ್ಕೆ ಅಂಕಣಬರಹಗಾರರಾಗಿದ್ದ ಎಚ್ಚೆಸ್ಕೆ ಅವರ ಸಾಹಿತ್ಯ ಸೃಷ್ಟಿಯ ಹರಹು ಅಚ್ಚರಿ ಮೂಡಿಸುವಂತದ್ದು ಎಂದು ಸಾಹಿತಿ ಡಾ. ಸಿಪಿಕೆ ನುಡಿದರು.
ಸಾಹಿತಿ ಪ್ರೊ. ಕೆ.ಭೈರವಮೂರ್ತಿ ಮಾತ ನಾಡಿ, ತಮ್ಮ ಬದುಕಿಗೆ ಮಾರ್ಗದರ್ಶಕ ರಾಗಿದ್ದ ಪ್ರೊ. ಎಚ್ಚೆಸ್ಕೆ ತಮ್ಮ 50ನೇ ವಯ ಸ್ಸಿಗೆ ಹೊರತಂದ ಅಭಿನಂದನಾ ಗ್ರಂಥದ ಸಂಪಾದಕರಾಗಿಯೂ ಆಶೀರ್ವದಿಸಿದ್ದರು ಎಂದು ಅವರು ಸ್ಮರಿಸಿದರು.
ದಾಸ್ತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ. ಡಿ. ತಿಮ್ಮಯ್ಯ ತಮ್ಮಲ್ಲಿ ಸಾಹಿತ್ಯಾಭಿರುಚಿ ಮೂಡಿಸಿದ ಮಹನೀಯರಲ್ಲಿ ಪ್ರೊ. ಎಚ್ಚೆಸ್ಕೆ ಅಗ್ರಗಣ್ಯರು ಎಂದರು. ಚುಟುಕು ಸಾಹಿತ್ಯ ಪರಿಷತ್ತಿನ ಸಂಚಾಲಕ ಡಾ. ಎಂ.ಜಿ.ಆರ್. ಅರಸ್ ಪ್ರೊ. ಎಚ್ಚೆಸ್ಕೆ ಅವರ ಕೊನೆಯ ದಿನಗಳ ಸ್ಥಿತಿಯನ್ನು ಸ್ಮರಿಸಿ ಕೊಂಡು ಭಾವುಕರಾದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ತಮ್ಮನ್ನು ಎಫ್‍ಪಿಎ ಅಧ್ಯಕ್ಷರನ್ನಾಗಿಸಿದವರು ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷತೆಯ ಅವಧಿಯಲ್ಲಿ ತಮ್ಮ ಕನ್ನಡಪರ ಕಾರ್ಯ ಗಳಿಗೆ ನಿತ್ಯ ನಿರಂತರ ಮಾರ್ಗದರ್ಶಕ ರಾಗಿದ್ದವರು ಪ್ರೊ. ಎಚ್ಚೆಸ್ಕೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ವೈ.ಡಿ. ರಾಜಣ್ಣ, ಪ್ರೊ. ಎಚ್ಚೆಸ್ಕೆ ಅವರ ಒಡನಾಟ ವನ್ನು ಸ್ಮರಿಸಿಕೊಂಡರು. ಸಮಾರಂಭದಲ್ಲಿ ಕವಿ ಡಾ.ಜಯಪ್ಪ ಹೊನ್ನಾಳಿ, ರಂಗಕರ್ಮಿ ನಾ. ನಾಗಚಂದ್ರ, ಕಸಾಪ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಪತ್ರಕರ್ತ ರಂಗ ನಾಥ್ ಮೈಸೂರು ಉಪಸ್ಥಿತರಿದ್ದರು.