ಪರಿಸರ ಸ್ನೇಹಿ ಅರಿಷಿಣ ಗಣಪನ ಅರ್ಥಪೂರ್ಣ ವಿಸರ್ಜನೆ
ಮೈಸೂರು

ಪರಿಸರ ಸ್ನೇಹಿ ಅರಿಷಿಣ ಗಣಪನ ಅರ್ಥಪೂರ್ಣ ವಿಸರ್ಜನೆ

August 25, 2020

ಮೈಸೂರು, ಆ.24(ಎಸ್‍ಪಿಎನ್)- ಅರಿಷಿಣದಲ್ಲಿ ತಯಾರಿಸಿದ ಪರಿಸರ ಸ್ನೇಹಿ ಗಣಪನನ್ನು ಧಾರ್ಮಿಕ ವಿಧಿ-ವಿಧಾನದಂತೆ ನೀರಿನಲ್ಲಿ ವಿಸರ್ಜಿಸಿ ಉದ್ಯಾನವನದ ಗಿಡಗಳಿಗೆ ಹಾಕುವ ಮೂಲಕ ಸ್ಪಂದನ ಟ್ರಸ್ಟ್ ಅಧ್ಯಕ್ಷ ಎಂ. ಜಯಶಂಕರ್ ಪರಿಸರ ಕಾಳಜಿ ಮೆರೆದಿ ದ್ದಾರೆ. ಕುವೆಂಪುನಗರದ ಅನಿಕೇತನ ರಸ್ತೆಯಲ್ಲಿ ಅವರು ಸ್ವತಃ ತಾವೇ ಅರಿಷಿಣ ದಿಂದ ತಯಾರಿಸಿದ ಗಣಪನಿಗೆ ಅನಿಕೇತನ ರಸ್ತೆಯ ಉದ್ಯಾನವನದಲ್ಲಿ ಪ್ರತಿಷ್ಟಾಪಿಸಿ, ಕೊರೊನಾ ಸೋಂಕಿನಿಂದ ದೇಶಕ್ಕೆ ಒಳ್ಳೆಯ ದಾಗಲಿ ಎಂದು ಪ್ರಾರ್ಥಿಸಿ ವಿಸರ್ಜನೆ ಮಾಡಿರುವುದಾಗಿ ತಿಳಿಸಿದ್ದಾರೆ.

ಈ ವೇಳೆ ಕುವೆಂಪುನಗರ ನಾಗರಿಕರ ಸ್ನೇಹ ಜೀವಿ ಬೀದಿ ನಾಯಿ `ಜಾನಿ’ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳುವುದರ ಮೂಲಕ ಎಲ್ಲರ ಗಮನ ಸೆಳೆದಿರುವುದು ವಿಶೇಷ. ಪರಿಸರ ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಆನ್‍ಲೈನ್ ಮೂಲಕ ಪರಿಸರ ಸ್ನೇಹಿ ಗಣಪನ ತಯಾರಿಸಿ ಪೂಜಿ ಸುವ ವಿಶೇಷ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಪರಿಸರ ಕಾಳಜಿಯುಳ್ಳ ನಾಗರಿಕರಿಂದ ಉತ್ತಮ ಪ್ರೋತ್ಸಾಹ ದೊರೆತಿದೆ ಎಂದು ತಿಳಿಸಿದ್ದಾರೆ.

Translate »