ಮೈಸೂರು, ಆ.24 (ಎಸ್‍ಬಿಡಿ)- ಪಾರ್ಕ್ ಗಳಿಗೆ ಪ್ರವೇಶಾವಕಾಶ ನೀಡುವಂತೆ ಮೈಸೂರಿನ ನಾಗರಿಕರು ಆಗ್ರಹಿಸಿದ್ದಾರೆ.
ಕೊರೊನಾ ನಿಯಂತ್ರಣ ನಿಟ್ಟಿನಲ್ಲಿ ಪಾರ್ಕ್‍ಗಳ ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧವನ್ನು ಮೇ ತಿಂಗ ಳಲ್ಲೇ ತೆರವು ಮಾಡಲಾಗಿತ್ತು. ಆದರೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒಂದಷ್ಟು ನಿಬಂಧನೆ ವಿಧಿಸಲಾಯಿತು. ಪಾರ್ಕ್‍ಗಳಲ್ಲಿ ಜನ ಒಟ್ಟಿಗೆ ಸೇರದಂತೆ ನಿರ್ವಹಿಸಬೇಕೆಂದು ರಾಜ್ಯ ಸರ್ಕಾರ ಸೂಚಿಸಿದೆ. ಆದರೆ ಮೈಸೂರಿನಲ್ಲಿ ಪಾರ್ಕ್ ಗಳಿಗೆ ಪ್ರವೇಶವನ್ನೇ ನಿರ್ಬಂಧಿಸಲಾಗಿದೆ ಎಂದು ಜನ ಬೇಸರ ವ್ಯಕ್ತಪಡಿಸಿದ್ದಾರೆ.
ಪಾಲಿಕೆ ಅಧಿಕಾರಿಗಳ ಮಾಹಿತಿ ಪ್ರಕಾರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 500ಕ್ಕೂ ಹೆಚ್ಚು ಪಾರ್ಕ್ ಗಳಿದ್ದು, ಸುಮಾರು 200 ಪಾರ್ಕ್‍ಗಳು ಮಾತ್ರ ಸುಸ್ಥಿತಿ ಯಲ್ಲಿವೆ. ವಾಕಿಂಗ್ ಪಾತ್, ಅಲಂಕಾರಿಕ ಗಿಡಗಳು, ವ್ಯಾಯಾಮ ಪರಿಕರಗಳಿರುವ ಪಾರ್ಕ್‍ಗಳ ಸಂಖ್ಯೆ ಇನ್ನೂ ಕಡಿಮೆ. ಇನ್ನು ಬೆರಳೆಣಿಕೆ ಪಾರ್ಕ್‍ಗಳಿಗೆ ಮಾತ್ರ ಕಾವಲುಗಾರರನ್ನು ನಿಯೋಜಿಸಲಾಗಿದೆ. ಹಾಗಾಗಿ ಜನ ಸೇರದಂತೆ ನಿರ್ವಹಣೆ ಮಾಡಲು ಕಷ್ಟಸಾಧ್ಯವೆಂದು ಪ್ರವೇಶವನ್ನೇ ನಿರ್ಬಂಧಿಸಿರು ವುದು ಸೂಕ್ತ ಕ್ರಮವಲ್ಲ ಎಂದು ಅಭಿಪ್ರಾಯಿಸಿದ್ದಾರೆ.
ಅನ್‍ಲಾಕ್‍ನಿಂದಾಗಿ ಬಹುತೇಕ ಎಲ್ಲಾ ಚಟು ವಟಿಕೆಗಳೂ ಎಂದಿನಂತೆ ನಡೆಯುತ್ತಿವೆ. ಹಾಗಾಗಿ ಪಾರ್ಕ್‍ಗಳಲ್ಲಿ ಜನ ಓಡಾಡಿದರೆ ದೊಡ್ಡ ಸಮಸ್ಯೆ ಯಾಗುವುದಿಲ್ಲ. ಆರೋಗ್ಯ ರಕ್ಷಣೆಗೆ ವಾಯು ವಿಹಾರ, ವ್ಯಾಯಾಮ ಮಾಡುವುದು ಬಹಳ ಮುಖ್ಯ. ಅದರಲ್ಲೂ ವೃದ್ಧರು, ಮಧುಮೇಹ ಇನ್ನಿತರ ಸಮಸ್ಯೆಗಳಿರುವವರು ವಾಕಿಂಗ್ ತಪ್ಪಿಸಬಾರದು. ಮನೆ ಬಳಿ ಅಥವಾ ಟೆರೇಸ್‍ನಲ್ಲಿ ವಾಕಿಂಗ್ ಮಾಡಲು ಎಲ್ಲರಿಗೂ ಅನುಕೂಲವಿರುವುದಿಲ್ಲ. ರಸ್ತೆ ಬದಿ ಓಡಾಡುವುದೂ ಸುರಕ್ಷಿತವಲ್ಲ. ಕೊರೊನಾ ಸೋಂಕಿನಿಂದ ಪಾರಾಗಬೇಕಾದರೆ ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕೆಂಬ ಅರಿವು ಜನರಲ್ಲಿದೆ. ಆದ್ದರಿಂದ ಸಮಯ ನಿಗಧಿ ಸೇರಿ ದಂತೆ ಅಗತ್ಯ ನಿಯಮ ವಿಧಿಸಿ, ಪಾರ್ಕ್‍ಗಳಿಗೆ ಪ್ರವೇಶಾವಕಾಶ ನೀಡಬೇಕೆಂದು ಹಿರಿಯ ನಾಗರಿಕ ರೊಬ್ಬರು ಮನವಿ ಮಾಡಿದ್ದಾರೆ